ನರೋಡ ಪಾಟಿಯಾ: ಬಿಜೆಪಿಯ ಕೊದ್ನಾನಿ ಖುಲಾಸೆ; ಬಜರಂಗಿ ಅಪರಾಧಿ
Team Udayavani, Apr 20, 2018, 12:34 PM IST
ಅಹ್ಮದಾಬಾದ್: ಗುಜರಾತ್‌ನ ನರೋಡಾ ಪಾಟಿಯಾ ಕೇಸ್‌ನಲ್ಲಿ ಗುಜರಾತ್ ಹೈಕೋರ್ಟ್ ಇಂದು ಶುಕ್ರವಾರ ಭಾರತೀಯ ಜನತಾ ಪಕ್ಷದ ನಾಯಕಿ ಮಾಯಾ ಕೊದ್ನಾನಿ ಅವರನ್ನು ಖುಲಾಸೆಗೊಳಿಸಿದೆ; ಆದರೆ ಬಜರಂಗ ದಳ ನಾಯಕ ಬಾಬು ಬಜರಂಗಿ ಅವರು ಅಪರಾಧಿ ಎಂಬ ತೀರ್ಪನ್ನು ಎತ್ತಿ ಹಿಡಿದಿದೆ.
ಕೊದ್ನಾನಿ ಮಾತ್ರವಲ್ಲದೆ ನರೋಡಾ ಪಾಟಿಯಾ ದೊಂಬಿ ಪ್ರಕರಣದ ಗಣಪತ್ ಛಾರಾ ಮತ್ತು ಹರೀಶ್ ಛಾರಾ ಅವರನ್ನು ಎಲ್ಲ ಆರೋಪಗಳಿಂದ ಗುಜರಾತ್ ಹೈಕೋರ್ಟ್ ಖುಲಾಸೆ ಗೊಳಿಸಿದೆ.
2002ರ ಫೆ.27ರಂದು ಗೋದ್ರಾ ಸ್ಟೇಶನ್‌ನಲ್ಲಿ ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ಕೋಚ್‌ಗೆ ಬೆಂಕಿ ಹಾಕಲಾದುದನ್ನು ಅನಸರಿಸಿ ನಡೆದಿದ್ದ ನರೋಡಾ ಪಾಟಿಯಾ ನರಮೇಧದಲ್ಲಿ ಕನಿಷ್ಠ 97 ಮುಸ್ಲಿಮರನ್ನು ಹತ್ಯೆಗೈಯಲಾಗಿತ್ತು. ಸಾಬರ್‌ಮತಿ ಎಕ್ಸ್‌ಪ್ರೆಸ್ ರೈಲಿನ ಬೆಂಕಿಗೆ 58 ಹಿಂದೂ ಕರಸೇವಕರು ಸುಟ್ಟು ಕರಕಲಾಗಿದ್ದರು.
ನರೋಡಾ ಪಾಟಿಯಾ ನರಮೇಧದ ಕೇಸಿನ ವಿಚಾರಣೆಯನ್ನು ಜಸ್ಟಿಸ್ ಹರ್ಷ ದೇವಾನಿ ಮತ್ತು ಜಸ್ಟಿಸ್ ಎ ಎಸ್ ಸುಪೇಹಿಯಾ ಅವರನ್ನು ಒಳಗೊಂಡು ಇಬ್ಬರು ನ್ಯಾಯಾಧೀಶರ ಪೀಠವು 2017ರ ಆಗಸ್ಟ್‌ನಲ್ಲಿ ವಿಚಾರಣೆಯನ್ನು ಮುಗಿಸಿ ಆದೇಶವನ್ನು ಕಾಯ್ದಿರಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್ ಹೇಳಿಕೆ
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
MUST WATCH
ಹೊಸ ಸೇರ್ಪಡೆ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.