ಗುಜರಾತ್‌ ಪಟೇಲ್‌ ಗಿರಿ: ಚುನಾವಣಾ ಆಯೋಗದ ಮುಂದೆ ಹೈಡ್ರಾಮ


Team Udayavani, Aug 9, 2017, 10:29 AM IST

09-STATE-15.jpg

ಅಹ್ಮದಾಬಾದ್‌ / ನವದೆಹಲಿ: ಕ್ರಿಕೆಟ್‌ ಅಥವಾ ಫುಟ್ಬಾಲ್‌ ಪಂದ್ಯದಲ್ಲೂ ಇಷ್ಟೊಂದು ರೋಚಕತೆ ಇರುವುದಿಲ್ಲವೋ ಏನೋ. ಗುಜರಾತ್‌ನಲ್ಲಿನ ರಾಜ್ಯಸಭೆ ಚುನಾವಣೆ ಮತ ಎಣಿಕೆ ಮಂಗಳವಾರ ತಡ ರಾತ್ರಿವರೆಗೂ ಗೊಂದಲ, ಗೋಜಲುಗಳ ನಡುವೆಯೇ ಮುಂದು ವರೆದಿದ್ದು, ಕಾಂಗ್ರೆಸ್ಸಿನ ಅಹ್ಮದ್‌ ಪಟೇಲ್‌ ಜಯಭೇರಿ ಬಾರಿಸಿದ್ದಾರೆಂದು ಎಎನ್‌ಐ ಸುದ್ದಿಸಂಸ್ಥೆ ತಡರಾತ್ರಿ ವರದಿಮಾಡಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಗೆಲುವು ಖಚಿತ ಎಂದು ಹೇಳಲಾಗಿದ್ದರೂ, ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಕಾಂಗ್ರೆಸ್‌ ನ ಅಹ್ಮದ್‌ ಪಟೇಲ್‌ ಮತ್ತು ಬಿಜೆಪಿಯ ಬಲವಂತ್‌ ಸಿಂಗ್‌ ರಜೂ³ತ್‌ ಅವರ ಭವಿಷ್ಯ ಇಡೀ ರಾತ್ರಿ ತೂಗುಯ್ನಾಲೆಯಲ್ಲೇ ಇತ್ತು. ಸಂಜೆಯಿಂದ ಚುನಾವಣಾ ಆಯೋಗದ ಮುಂದೆ ನಿರಂತರವಾಗಿ ನಡೆದ ವಿವಿಧ ಡ್ರಾಮಾಗಳು ಕ್ಷಣಕ್ಷಣ ಕ್ಕೊಂದು ಹೊಸ ಹೊಸ ಟ್ವಿಸ್ಟ್‌ ಕೊಡುತ್ತಿದ್ದವು. ಕಡೆಗೂ ಫ‌ಲಿತಾಂಶದ ಚೆಂಡು ಆಯೋಗದ ಅಂಗಣದಲ್ಲೇ ಇತ್ತು. ಒಂದೆಡೆ, ಫ‌ಲಿತಾಂಶಕ್ಕೂ ಮೊದಲೇ ನಡುರಾತ್ರಿ ಮತ ಎಣಿಕೆ ಕೇಂದ್ರದ ಹೊರಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ವಿಜಯಘೋಷ ಮೊಳಗಿ ಸುತ್ತಿದ್ದರೆ, ಎಣಿಕೆ ಕೇಂದ್ರದೊಳಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕೇಂದ್ರ ಸಚಿವೆ ಸ್ಮತಿ ಇರಾನಿ ಹಾಗೂ ಇನ್ನು ಕೆಲವು ಸಚಿವರು ಅಲ್ಲಾಡದೇ ಕುಳಿತಿದ್ದರು.

ಇನ್ನೊಂದೆಡೆ, ಮತ ಎಣಿಕೆಯನ್ನು ಸ್ಥಗಿತಗೊಳಿಸುವಂತೆ ಬಿಜೆಪಿ ಮುಖಂಡರು ಪಟ್ಟು ಹಿಡಿದ ಬಗ್ಗೆ ವರದಿಯಾಗಿತ್ತು. ಹೀಗಾಗಿ ರಾತ್ರಿ 1.30 ಆದರೂ, ಫ‌ಲಿತಾಂಶ ಮಾತ್ರ ಹೊರಬೀಳಲಿಲ್ಲ. ರಾತ್ರಿ 2 ಗಂಟೆಗೆ ಅಹ್ಮದ್‌ ಪಟೇಲ್‌ ತಮ್ಮ ಗೆಲುವನ್ನು ಟ್ವೀಟ್‌ ಮೂಲಕ ಪ್ರಕಟಿಸಿದರು. ಈ ನಡುವೆ, ಕಾಂಗ್ರೆಸ್‌ನ ಶಾಸಕರೊಬ್ಬರು ತಾವು ಚಲಾಯಿಸಿದ ಮತಪತ್ರವನ್ನು ಬಿಜೆಪಿ ನಾಯಕರಿಗೆ ತೋರಿಸಿದರೆನ್ನಲಾದ ಹಾಗೂ ಬಿಜೆಪಿ ಶಾಸಕರೊಬ್ಬರು ತಾವು ತಮ್ಮ ಪಕ್ಷಕ್ಕೆ ಮತ ಹಾಕಿಲ್ಲ ಎಂದು ಹೇಳಿದ ವೀಡಿಯೋಗಳು ತಡರಾತ್ರಿ ಮಾಧ್ಯಮದಲ್ಲಿ ಕಾಣಿಸಿಕೊಂಡು ಇಡೀ ಚಿತ್ರಣವನ್ನೇ ಬದಲಾಯಿಸಿಬಿಟ್ಟಿದ್ದವು. 

ಮಂಗಳವಾರ ಬೆಳಗ್ಗೆಯಿಂದಲೇ ಅಡ್ಡಮತದ ಜಿದ್ದಾಜಿದ್ದಿನ ರಾಜಕಾರಣಕ್ಕೆ ಸಾಕ್ಷಿಯಾದ ಗುಜರಾತ್‌ ವಿಧಾನಸಭೆ, ಸಂಜೆ ವೇಳೆಗೆ ಇನ್ನಷ್ಟು ಕಾವು ಪಡೆಯಿತು. ಹೇಗಾದರೂ ಮಾಡಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಪ್ತ ಅಹ್ಮದ್‌ ಪಟೇಲ್‌ ಅವರನ್ನು ಸೋಲಿಸಲೇ ಬೇಕು ಎಂಬ ಪಣ ತೊಟ್ಟಿದ್ದ ಬಿಜೆಪಿ, ಅಡ್ಡಮತದ ದಾರಿ ಹಿಡಿಯಿತು. ತಮ್ಮ ಗೆಲುವು ಶತಸಿದ್ಧವೆಂದು ಅನ್ನಿಸಿಕೊಂಡಿದ್ದರೂ, ಇದೇ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸುತ್ತಿರುವ ಅಮಿತ್‌ ಶಾಗೆ ಭರ್ಜರಿ ಪ್ರವೇಶ ಕ್ಕಾಗಿ ಕಾಂಗ್ರೆಸ್‌ನಲ್ಲಿ ಒಡಕು ಹುಟ್ಟುಹಾಕಿದ್ದರು. ಇದರಿಂದ ಭೀತ ಗೊಂಡ ಕಾಂಗ್ರೆಸ್‌ ಶಾಸಕರು ಬೆಂಗಳೂರಿಗೆ ಬಂದು ಆಶ್ರಯ ಪಡೆದಿದ್ದರು. 

ಈ ಬೆನ್ನಲ್ಲೇ ಕಾಂಗ್ರೆಸ್‌ನ ಬಂಡಾಯ ನಾಯಕ ವಘೇಲಾ ಕಡೆಯಿಂದ ರೆಬೆಲ್‌ ಬಾಂಬ್‌ ಸಿಡಿದಿತ್ತು.  ಸಂಜೆ 6 ಗಂಟೆ ಕಾಂಗ್ರೆಸ್‌ನ ಇಬ್ಬರು ಶಾಸಕರು ಬಿಜೆಪಿ ನಾಯಕರಿಗೆ  ಲೆಟ್‌ ಪತ್ರ ತೋರಿಸಿ ಮತದಾನ ಮಾಡಿರುವುದರಿಂದ ಇವರಿಬ್ಬರ ಮತಗಳನ್ನು ಅಸಿಂಧು ಮಾಡಬೇಕು ಎಂದು ಕೋರಿ ಮೊದಲ ಬಾರಿಗೆ ಕೈ ನಾಯಕರು ಕೇಂದ್ರ ಚುನಾವಣಾ ಆಯೋಗದ ಬಾಗಿಲು ಬಡಿದರು. ಕೇಂದ್ರದ ಮಾಜಿ ಸಚಿವ ಆನಂದ್‌ ಶರ್ಮಾ ಮತ್ತು ಕಾಂಗ್ರೆಸ್‌ ಪ್ರಧಾನ ವಕ್ತಾರ ರಣದೀಪ್‌ ಸುಜೇìವಾಲಾ ಅವರು ದೆಹಲಿಯಲ್ಲಿರುವ ಆಯೋಗದ ಕಚೇರಿಗೆ ಭೇಟಿ ನೀಡಿ ಈ ಸಂಬಂಧ ಮನವಿ ಮಾಡಿದರು. ಅಲ್ಲದೆ ಶಾಸಕರ ಅಡ್ಡಮತದಾನದ ವಿಡಿಯೋ ಸಾಕ್ಷಿ ಇದ್ದು, ಈ ಕೂಡಲೇ ಅಸಿಂಧು ಮಾಡಿ ಎಂದು ಆಗ್ರಹಿಸಿತು.

ಸಂಜೆ 7 ಗಂಟೆ
ಕಾಂಗ್ರೆಸ್‌ ನೀಡಿದ ಮನವಿ ಅನ್ವಯ ಮೊದಲ ಬಾರಿಗೆ ಸಭೆ ಸೇರಿದ ಕೇಂದ್ರ ಚುನಾವಣಾ ಆಯೋಗದ ಆಯುಕ್ತರು, ಗುಜರಾತ್‌ ಚುನಾವಣಾ ಅದಿಕಾರಿಯಿಂದ ವರದಿ ಕೇಳಿದರು.

ಸಂಜೆ 7.8 ಗಂಟೆ
ಕಾಂಗ್ರೆಸ್‌ ಮನವಿಗೆ ಪ್ರತಿಯಾಗಿ ಬಿಜೆಪಿಯಿಂದ ಮರು ಮನವಿ. ಕೇಂದ್ರ ಸಚಿವರಾದ ಮುಖ್ತರ್‌ ಅಬ್ಟಾಸ್‌ ನಖೀÌ, ಪಿಯೂಶ್‌ ಗೋಯಲ್‌, ಧರ್ಮೇಂದ್ರ ಪ್ರಧಾನ್‌ ಆಯೋಗದ ಕಚೇರಿಗೆ ಹೋಗಿ ಮನವಿ ಸಲ್ಲಿಸಿದರು. ಅಲ್ಲದೆ ನಂತರದ ವಿದ್ಯಮಾನದ ಪ್ರಕಾರ, ಹಿರಿಯ ಸಚಿವರಾದ ಅರುಣ್‌ ಜೇಟ್ಲಿ, ರವಿಶಂಕರ್‌ ಪ್ರಸಾದ್‌ ಮತ್ತು ನಿರ್ಮಲಾ ಸೀತಾರಾಮನ್‌ ಕೂಡ ಈ ನಿಯೋಗ ಸೇರಿಕೊಂಡರು. ಬಳಿಕ ಮಾತನಾಡಿದ ರವಿಶಂಕರ್‌ ಪ್ರಸಾದ್‌, ಕಾಂಗ್ರೆಸ್‌ ಬೆಳಗ್ಗೆಯಿಂದ ಏನು ಮಾಡುತ್ತಿತ್ತು? ಈಗ ಸೋಲುವುದು ಖಚಿತವಾಗುತ್ತಿದ್ದಂತೆ ಆಯೋಗದ ಕಚೇರಿ ಬಾಗಿಲು ಬಡಿದಿದೆ. 
ಕಾಂಗ್ರೆಸ್‌ ಆರೋಪವೆಲ್ಲವೂ ಆಧಾರ ರಹಿತ ಎಂದರು. ಅಲ್ಲದೆ ಕಾಂಗ್ರೆಸ್‌ ಮನವಿಯನ್ನು ತಿರಸ್ಕರಿಸುವಂತೆ ಆಯೋಗದ ಮುಂದೆ ಮನವಿ ಸಲ್ಲಿಸಿರುವುದಾಗಿ ಅವರು ಹೇಳಿದರು.

ರಾತ್ರಿ 7.52
ಕಾಂಗ್ರೆಸ್‌ನ ಪಿ.ಚಿದಂಬರಂ, ಗುಲಾಂ ನಬಿ ಆಜಾದ್‌, ಆನಂದ್‌ ಶರ್ಮಾ ಮತ್ತು ರಣದೀಪ್‌ ಸುಜೇìವಾಲ ಅವರಿಂದ ಮತ್ತೂಮ್ಮೆ ಚುನಾವಣಾ ಆಯೋಗದ ಕಚೇರಿಗೆ ಭೇಟಿ. 2000ನೇ ಇಸವಿಯಲ್ಲಿ ರಾಜಸ್ಥಾನದಿಂದ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಕಸ್ಮಾತ್‌ ಆಗಿ ಬೇರೊಬ್ಬರಿಗೆ ಮತ ಪತ್ರ ಬಹಿರಂಗ ಮಾಡಿದ್ದರಿಂದ ಶಾಸಕರೊಬ್ಬರ ಮತವನ್ನು ಅಸಿಂಧು ಮಾಡಲಾಗಿತ್ತು. ಈ ಪ್ರಕರಣದಲ್ಲೂ ಕಾಂಗ್ರೆಸ್‌ ಶಾಸಕರಿಬ್ಬರ ಮತಗಳನ್ನು ಅಸಿಂಧು ಮಾಡಲೇಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ. ರೆಬೆಲ್‌ ಶಾಸಕರ ಅಡ್ಡಮತದಾನ ವಿಡಿಯೋದಲ್ಲಿ ದಾಖಲಾಗಿದೆ. ಹೀಗಾಗಿ ಅಸಿಂಧು ಮಾಡಲೇಬೇಕು ಎಂದು ಚಿದಂಬರಂ ಒತ್ತಾಯಿಸಿದರು.

ರಾತ್ರಿ 8.11
ಕೇಂದ್ರ ಸಚಿವರಾದ ರವಿಶಂಕರ್‌ ಪ್ರಸಾದ್‌, ನಿರ್ಮಲಾ ಸೀತಾರಾಮನ್‌ ಮತ್ತು ಪಿಯೂಶ್‌ ಗೋಯಲ್‌ ಅವರಿಂದ 2 ನೇ ಬಾರಿಗೆ ಆಯೋಗದ ಕಚೇರಿಗೆ ಭೇಟಿ. ಕಾಂಗ್ರೆಸ್‌ನ ಆರೋಪ ಗಳ ಬಗ್ಗೆ ಚುನಾವಣಾ ಆಯೋಗದ ಮುಂದೆ ಸ್ಪಷ್ಟವಾಗಿ ಹೇಳಿಬಂದಿದ್ದೇವೆ. ಅವರ ಆರೋಪದಲ್ಲಿ ಹುರುಳಿಲ್ಲ. ನಮಗೆ ಆಯೋಗದ ಮೇಲೆ ಸಂಪೂರ್ಣ ವಾಗಿ ನಂಬಿಕೆ ಇದೆ ಎಂದು ಹೇಳಿದರು. 

ರಾತ್ರಿ 9.19
ಕಾಂಗ್ರೆಸ್‌ನ ರಣದೀಪ್‌ ಸುಜೇìವಾಲಾ ಮತ್ತು ಆರ್‌ಪಿಎನ್‌ ಸಿಂಗ್‌ ಅವರಿಂದ ಮತ್ತೂಮ್ಮೆ ಕೇಂದ್ರ ಚುನಾವಣಾ ಆಯೋಗಕ್ಕೆ ಭೇಟಿ. ಮತ್ತೂಮ್ಮೆ ಮನವಿ ಸಲ್ಲಿಕೆ. 

ರಾತ್ರಿ 9.19
ಕೇಂದ್ರ ಚುನಾವಣಾ ಆಯೋಗದಿಂದ ಮಹತ್ವದ ಸಭೆ. ಎರಡು ಮತಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಂಬಂಧ ವಿಡಿಯೋ ವೀಕ್ಷಿಸುತ್ತಿದ್ದ ಆಯೋಗ. ಆದರೆ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. 

ರಾತ್ರಿ 9.33 
ಬಿಜೆಪಿಯಿಂದ ಮೂರನೇ ಬಾರಿಗೆ ಆಯೋಗಕ್ಕೆ ಭೇಟಿ. ಆಯೋಗದ ಕಚೇರಿ ಮುಂದೆ ಮಾತನಾಡಿದ ಪಿಯೂಶ್‌ ಗೋಯಲ್‌ ರಿಂದ ಕಾಂಗ್ರೆಸ್‌ ವಿರುದ್ಧ ಆಕ್ರೋಶ. ಇಷ್ಟೆಲ್ಲಾ ಬೆಳವಣಿಗೆಗೆ ಕಾರಣವಾದ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು ಎಂದು ಆಕ್ರೋಶ.

ರಾತ್ರಿ 10.20
ಕಾಂಗ್ರೆಸ್‌ನ ರಣದೀಪ್‌ ಸುಜೇìವಾಲ ಮತ್ತು ರಾಜೀವ್‌ ಶುಕ್ಲಾರಿಂದ ನಾಲ್ಕನೇ ಬಾರಿಗೆ ಆಯೋಗದ ಕಚೇರಿಗೆ ಭೇಟಿ. ನ್ಯಾಯಸಮ್ಮತವಾಗಿಯೇ ನಿರ್ಧಾರ ನೀಡಬೇಕು. ಇಲ್ಲದಿದ್ದರೆ ಸುಪ್ರೀಂ ಕೋರ್ಚ್‌ ಮೆಟ್ಟಿcಲೇರುವ ಬಗ್ಗೆ ಸುಳಿವು 

ನಿಯಮಾವಳಿ ಏನು ಹೇಳುತ್ತೆ?
ಮತಕೇಂದ್ರದಲ್ಲಿ ಮತದಾರರು ನಿಯಮಾವಳಿಗಳನ್ನು ಪಾಲಿಸಲೇಬೇಕು. ಬ್ಯಾಲೆಟ್‌ ಪೇಪರ್‌ಗಳನ್ನು ಮಡಚಿಯೇ ಮತ ಪೆಟ್ಟಿಗೆಗೆ ಹಾಕಬೇಕು. ಮತ ಹಾಕಲು ಬಂದ ಮೇಲೆ ಯಾವುದೇ ಕಾರಣಕ್ಕೂ ಅಲ್ಲಿ ತಡ ಮಾಡಬಾರದು. ಮತಪತ್ರದ ರಹಸ್ಯ ಕಾಪಾಡಬೇಕು. ತಮ್ಮ ಪಕ್ಷದ ಏಜೆಂಟ್‌ಗೆ ಮತ ತೋರಿಸಬಹುದು. ಇವರನ್ನು ಬಿಟ್ಟು ಬೇರೆ ಯಾರಿಗಾದರೂ ಮತಪತ್ರ ತೋರಿಸಿದರೆ, ಅಂಥ ಮತವನ್ನು ತಕ್ಷಣವೇ ಅಸಿಂಧು ಮಾಡಬಹುದು ಎಂದು ನಿವೃತ್ತ ಚುನಾವಣಾ ಆಯುಕ್ತ ಎಸ್‌.ವೈ. ಖುರೇಷಿ ಹೇಳಿದ್ದಾರೆ.

ಅಸಿಂಧುವಾಗಿದ್ದ ಮತಗಳು
ಕಳೆದ ವರ್ಷವಷ್ಟೇ ಹರ್ಯಾಣದಲ್ಲಿ 14 ಮಂದಿ ಕಾಂಗ್ರೆಸ್‌ ಶಾಸಕರ ಮತಗಳನ್ನು ಅಸಿಂಧುಗೊಳಿಸಲಾಗಿತ್ತು.

2000ನೇ ಇಸವಿಯಲ್ಲಿ ರಾಜಸ್ಥಾನದ ಪಕ್ಷೇತರ ಶಾಸಕರೊಬ್ಬರು ವೋಟು ಹಾಕಿ, ಮತಪತ್ರ ತೋರಿಸಿದ್ದರಿಂದ ಅದನ್ನೂ ಅಸಿಂಧು ಮಾಡಲಾಗಿತ್ತು.
ಜೆಡಿಯು ಪ್ರ.ಕಾರ್ಯದರ್ಶಿ ವಜಾ ಗುಜರಾತ್‌ ರಾಜ್ಯಸಭೆ ಚುನಾವಣೆಯ ಹೈಡ್ರಾಮಾ ನಡುವೆಯೇ ಜೆಡಿಯು ಪ್ರಧಾನ ಕಾರ್ಯದರ್ಶಿ ಅರುಣ್‌ ಶ್ರೀವಾಸ್ತವ್‌ ಅವರನ್ನು ಪಕ್ಷ ರಾತ್ರೋರಾತ್ರಿ ವಜಾ ಮಾಡಿದೆ. ರಾಜ್ಯಸಭೆ ಚುನಾವಣೆ ವೇಳೆ ಎಲೆಕ್ಷನ್‌ ಏಜೆಂಟ್‌ರನ್ನು ನೇಮಕ ಮಾಡುವಂತೆ ಗುಜರಾತ್‌ ಅಸೆಂಬ್ಲಿಯ ಚುನಾವಣಾ ಅಧಿಕಾರಿಗೆ ಅನಧಿಕೃತವಾಗಿ ಪತ್ರ ಬರೆದ ಹಿನ್ನೆಲೆಯಲ್ಲಿ ಶ್ರೀವಾಸ್ತವ್‌ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.

ಈ ವಿಚಾರವನ್ನು ಪಕ್ಷದ ಅಧ್ಯಕ್ಷ ನಿತೀಶ್‌ ಕುಮಾರ್‌ ಅವರು ಗಂಭೀರವಾಗಿ ಪರಿಗಣಿಸಿದ್ದು, ನಿಮ್ಮನ್ನು ಹುದ್ದೆಯಿಂದ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ. ನಿಮ್ಮ ವರ್ತನೆಯು ಪಕ್ಷ ವಿರೋಧಿ ಚಟುವಟಿಕೆ ಮಾತ್ರವಲ್ಲ, ಶಿಸ್ತಿನ ಉಲ್ಲಂಘನೆಯೂ ಆಗಿದೆ’ ಎಂದು ಮಂಗಳವಾರ ರಾತ್ರಿ ಜೆಡಿಯು ನಾಯಕ ಕೆ.ಸಿ.ತ್ಯಾಗಿ ಅವರು ಶ್ರೀವಾಸ್ತವ್‌ಗೆ ತಿಳಿಸಿದ್ದಾರೆ. ಶ್ರೀವಾಸ್ತವ್‌ ಅವರು ಜೆಡಿಯು ನಾಯಕ ಶರದ್‌ ಯಾದವ್‌ ಅವರ ಆಪ್ತರೂ ಆಗಿದ್ದಾರೆ ಎನ್ನುವುದು ಗಮನಾರ್ಹ ಅಂಶ.

ಜೆಡಿಯು ವೋಟ್‌ ಯಾರಿಗೆ?
ಜೆಡಿಯುನ ಶಾಸಕ ವಸಾವ ಯಾರಿಗೆ ಮತ ಹಾಕಿದ್ದಾರೆ ಎನ್ನುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಅವರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಜೆಡಿಯುನ ರಾಷ್ಟ್ರೀಯ ವಕ್ತಾರ ಕೆ ಸಿ ತ್ಯಾಗಿ ಹೇಳಿಕೆ ನೀಡಿ, ವಸಾವ ಬಿಜೆಪಿಗೆ ಮತ ನೀಡಿದ್ದಾರೆ ಎಂದು ಹೇಳುವ ಮೂಲಕ ಮತ್ತಷ್ಟು ಗೊಂದಲಕ್ಕೆ ಕಾರಣ  ರಾದರು. ಆದರೆ, ಮಾಧ್ಯಮದವರು ವಸಾವ ಅವರನ್ನು ನೇರ  ವಾಗಿ ಕೇಳಿದರೆ, “”ನಾನು ಅಹ್ಮದ್‌ ಭಾಯ್‌ಗೆ ವೋಟ್‌ ಹಾಕಿ ದ್ದೇನೆ” ಎಂದು ಹೇಳಿ ಮತ್ತಷ್ಟು ಗೊಂದಲ ಹುಟ್ಟಿಸಿದ್ದರು.

ಮಧ್ಯರಾತ್ರಿ ಬಾಂಬ್‌
ಮಂಗಳವಾರ ಮಧ್ಯರಾತ್ರಿ 12.30ರ ವೇಳೆಗೆ ಬಿಜೆಪಿಯ ಶಾಸಕ ನಳೀನ್‌ ಕೋಟಾಡಿಯಾ ಅಹ್ಮದ್‌ ಪಟೇಲ್‌ ಅವರಿಗೆ ಮತ ಹಾಕಿರುವುದಾಗಿ ಹೇಳಿದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಪಟೇಲ್‌ಗಿರಿ ಹೋರಾಟದ ಪರವಿದ್ದ ನಾಯರರೆನಿಸಿಕೊಂಡಿರುವ ನಳೀನ್‌ ಅಡ್ಡಮತ 
ದಾನ ಮಾಡಿದ್ದು, ಅಹ್ಮದ್‌ ಪಟೇಲ್‌ಗೆ ಮತ ಹಾಕಿರುವುದಾಗಿ ಒಪ್ಪಿಕೊಂಡರು. ಈ ಮೂಲಕ ಅಹ್ಮದ್‌ ಪಟೇಲ್‌ ಗೆಲುವಿನ ಹಾದಿ ಮತ್ತಷ್ಟು ಸುಲಭವಾಗಿತ್ತು.

ಕೇಂದ್ರ ಚುನಾವಣಾ ಆಯೋಗದ ನಿರ್ಧಾರ ಸರಿಯಲ್ಲ. ಆಯೋಗ ವಿಡಿಯೋವನ್ನು ಇಡೀ ದೇಶಕ್ಕೆ ತೋರಿಸಬೇಕಾಗಿತ್ತು.
ಗುಜರಾತ್‌ ಉಪಮುಖ್ಯಮಂತ್ರಿ

ಆಯೋಗದ ನಿರ್ಧಾರ ಪ್ರಶಂಸನೀಯವಾದದ್ದು. ಬಿಜೆಪಿಯ ಕುದುರೆ ವ್ಯಾಪಾರ ಸೋತಿದೆ. 
ಸೋಲಂಕಿ, ಗುಜರಾತ್‌ನ ಕಾಂಗ್ರೆಸ್‌ ನಾಯಕ

ಮತಪೆಟ್ಟಿಗೆಯೊಳಗಿನಕಗ್ಗಂಟಿನ ಲೆಕ್ಕಾಚಾರ
ಗುಜರಾತ್‌ ವಿಧಾನಸಭೆ ಬಲಾಬಲ: 182

ಆರು ಶಾಸಕರುರಾಜೀನಾಮೆಕೊಟ್ಟ ಮೇಲೆ: 176

ಇಬ್ಬರು ಶಾಸಕರ ಮತ ಅಸಿಂಧು ಮಾಡಿದ ನಂತರ: 174

ಗೆಲುವಿಗೆ ಬೇಕಾದ ಸಂಖೆ: 44

ಬಿಜೆಪಿ ಬಲ: 121
ಅಮಿತ್‌ ಶಾ: 44
ಸ್ಮೃತಿ ಇರಾನಿ: 44
ಬಲವಂತ್‌: 41

ಕಾಂಗ್ರೆಸ್‌ (57 ಇದ್ದರೂ 6 ಶಾಸಕರ ರಾಜೀನಾಮೆ)
ಅಹ್ಮದ್‌ ಪಟೇಲ್‌: 44
(ಕಾಂಗ್ರೆಸ್‌+ ಎನ್ಸಿಪಿ1+ಜೆಡಿಯು) ವಘೇಲಾ ಬೆಂಬಲಿಗರು-7

ಎನ್‌ಸಿಪಿ – 2 (ಒಂದು ಬಿಜೆಪಿಗೆ, ಒಂದು ಕಾಂಗ್ರೆಸ್‌ಗೆ)
ಜೆಡಿಯು – 1 (ಕಾಂಗ್ರೆಸ್‌ಗೆ ಮತ), ಬಿಜೆಪಿ ಬಂಡಾಯ-1

ಟಾಪ್ ನ್ಯೂಸ್

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

1-horoscope

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

cyber crime

Cyber ​​fraud ಬ್ಯಾಂಕ್‌ ಹೊಣೆ: ಸುಪ್ರೀಂಕೋರ್ಟ್‌

Supreme Court

Supreme Court; ಮೀಸಲಿಂದ ಹೊರಗಿಡುವ ಬಗ್ಗೆ ಶಾಸಕಾಂಗ, ಕಾರ್‍ಯಾಂಗ ನಿರ್ಧರಿಸಲಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

1-horoscope

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.