ಸಂಘರ್ಷದ ನಡುವೆ ಶಾಂತಿ ಪಸರಿಸುವ ನವ ಭಾರತ ನಿರ್ಮಾಣ ಮಾಡಿ : ಯುವಜನತೆಗೆ ಪ್ರಧಾನಿ ಮೋದಿ ಕರೆ
Team Udayavani, May 20, 2022, 6:30 AM IST
ವಡೋದರಾ: ಅಂತಾರಾಷ್ಟ್ರೀಯ ಸಂಘರ್ಷಗಳು ಹಾಗೂ ಹಿಂಸಾಚಾರಗಳು ಹೆಚ್ಚುತ್ತಿರುವಂಥ ಈ ಸಂದರ್ಭದಲ್ಲಿ ನಮ್ಮ ಯುವಜನರು ಜಾಗತಿಕ ಶಾಂತಿ ಕಾಪಾಡಬಲ್ಲಂಥ ದೇಶವನ್ನು ನಿರ್ಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಯುವ ಸಮಾವೇಶದಲ್ಲಿ ವರ್ಚುವಲ್ ಆಗಿ ಪಾಲ್ಗೊಂಡು ಮಾತನಾಡಿದ ಅವರು, ಭಾರತವು ತನ್ನ ಪ್ರಾಚೀನ ಸಂಪ್ರದಾಯಗಳನ್ನು ಉಳಿಸಿಕೊಂಡೇ ಪ್ರಗತಿಪರ ಅಸ್ಮಿತೆಯನ್ನು ಹೊಂದಬೇಕು. ಈಗ ಜಗತ್ತಿನ ಸಮಸ್ಯೆಗಳಿಗೆ ಭಾರತವೇ ಪರಿಹಾರ ಸೂಚಿಸುವಂತಾಗಿದೆ. ಕೊರೊನಾ ಸೋಂಕಿನ ಅವಧಿಯಲ್ಲಿ ಜಗತ್ತಿಗೆ ಲಸಿಕೆಗಳು ಮತ್ತು ಔಷಧಗಳ ವಿತರಣೆಯಿಂದ ಹಿಡಿದು, ಪೂರೈಕೆ ಸರಪಳಿಯು ಅಸ್ತವ್ಯಸ್ತಗೊಂಡಿರುವ ಸಮಯದಲ್ಲಿ ಆತ್ಮನಿರ್ಭರ ಭಾರತ ನಿರ್ಮಿಸುವವರೆಗೆ, ಜಾಗತಿಕ ಅಶಾಂತಿಯ ನಡುವೆಯೇ ಶಾಂತಿ ಕಾಪಾಡುವಂಥ ದೇಶವನ್ನು ನಿರ್ಮಿಸುವವರೆಗೆ ಭಾರತವು ಇಂದು ಇಡೀ ಜಗತ್ತಿಗೆ ಹೊಸ ಆಶಾಕಿರಣವಾಗಿ ಹೊರಹೊಮ್ಮಿದೆ ಎಂದು ಹೇಳಿದ್ದಾರೆ.
ನೀವೆಲ್ಲರೂ ನವ ಭಾರತ ನಿರ್ಮಾಣದ ಸಾಮೂಹಿಕ ಸಂಕಲ್ಪ ಮಾಡಬೇಕು. ಹೊಸ, ಪ್ರಗತಿಪರ, ಪ್ರಾಚೀನ ಪರಂಪರೆ ಹೊಂದಿರುವ ನವ ಭಾರತ, ಹಳೆಯ ಸಂಸ್ಕೃತಿ ಮತ್ತು ಹೊಸ ಆಲೋಚನೆಗಳನ್ನು ಒಳಗೊಂಡ ನವ ಭಾರತ, ಇಡೀ ಮನುಕುಲಕ್ಕೇ ದಿಕ್ಕನ್ನು ತೋರಿಸುವಂಥ ನವಭಾರತ ನಿರ್ಮಿಸಬೇಕು ಎಂದೂ ಯುವಕರಿಗೆ ಮೋದಿ ಕರೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.