ತನ್ನನ್ನು ತಾನೇ ವಿವಾಹವಾಗಲು ಸಿದ್ದಳಾದ ಗುಜರಾತ್ ಯುವತಿ; ಗೋವಾದಲ್ಲಂತೆ ಹನಿಮೂನ್!
Team Udayavani, Jun 2, 2022, 3:15 PM IST
ವಡೋದರಾ: ಈಕೆಯ ಹೆಸರು ಕ್ಷಮಾ ಬಿಂದು. ವಯಸ್ಸು 24. ಈಕೆಯ ವಿವಾಹ ಕಾರ್ಯಕ್ರಮಕ್ಕೆ ದಿನಾಂಕ- ಛತ್ರ ಎಲ್ಲವೂ ನಿಗದಿಯಾಗಿದೆ. ಆದರೆ ಒಂದನ್ನು ಬಿಟ್ಟು, ಅದೇ ಗಂಡು!
ಏನಿದು ಸುದ್ದಿ ಎಂದು ಹೌಹಾರಬೇಡಿ. ಗುಜರಾತ್ ನ ವಡೋದರಾದ ಕ್ಷಮಾ ಬಿಂದು ವರನಿಲ್ಲದೆ ಮದುವೆಯಾಗಲು ಸಿದ್ದತೆ ನಡೆಸಿದ್ದಾಳೆ. ಕಾರಣ ಕ್ಷಮಾ ಆಕೆಯನ್ನೇ ಮದುವೆಯಾಗುತ್ತಾಳಂತೆ!
ಅಂದಹಾಗೆ ಮದುವೆ ಕಾರ್ಯಕ್ರಮ ಸಂಪ್ರದಾಯದಂತೆಯೇ ನಡೆಯಲಿದೆಯಂತೆ. ಈ ವಿಶಿಷ್ಟ ವಿವಾಹ ಸಮಾರಂಭ ಜೂನ್ 11ರಂದು ನಡೆಯಲಿದೆ.
ಈ ಸ್ವಯಂ-ವಿವಾಹ ಗುಜರಾತ್ ನ ಮೊದಲ ನಿದರ್ಶನವೆಂದು ಪರಿಗಣಿಸಲಾಗಿದೆ. ಕ್ಷಮಾ ಬಿಂದು ತನ್ನ ನಿರ್ಧಾರವನ್ನು ಸ್ವಯಂ-ಪ್ರೀತಿಯ ಕ್ರಿಯೆ ಎಂದು ಬಣ್ಣಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ಅವರು, “ನಾನು ಎಂದಿಗೂ ಮದುವೆಯಾಗಲು ಬಯಸಲಿಲ್ಲ. ಆದರೆ ನಾನು ವಧು ಆಗಲು ಬಯಸಿದ್ದೆ. ಹಾಗಾಗಿ ನಾನೇ ಮದುವೆಯಾಗಲು ನಿರ್ಧರಿಸಿದೆ” ಎಂದು ಹೇಳಿದರು.
ಇದನ್ನೂ ಓದಿ:ಉಕ್ರೇನ್ ನ 2 ಲಕ್ಷ ಮಕ್ಕಳನ್ನು ಬಲವಂತವಾಗಿ ರಷ್ಯಾದಲ್ಲಿಡಲಾಗಿದೆ: ಝೆಲೆನ್ಸ್ಕಿ
ಈ ಸ್ವಯಂ ವಿವಾಹದ ಬಗ್ಗೆ ಆಕೆ ಆನ್ ಲೈನ್ ನಲ್ಲಿ ಓದಿದ್ದರಂತೆ. ಆದರೆ ದೇಶದ ಎಲ್ಲಿಯೂ ಈ ರೀತಿ ನಡೆದಿರುವ ಬಗ್ಗೆ ಹುಡುಕಿದರೂ ತಿಳಿಯಲಿಲ್ಲ. ಬಹುಶಃ ಸ್ವಯಂ ಪ್ರೀತಿಯ ಕುರಿತಾಗಿ ತಾನೇ ಒಂದು ಉದಾಹರಣೆಯಾಗಿ ನಿಲ್ಲುತ್ತೇನೆ ಎನ್ನುತ್ತಾರೆ ಕ್ಷಮಾ.
ಸ್ವಯಂ-ವಿವಾಹವನ್ನು ಕೇವಲ ಗಿಮಿಕ್ ಎಂದು ಕರೆಯುವವರನ್ನು ಉದ್ದೇಶಿಸಿ ಮಾತನಾಡುವ ಕ್ಷಮಾ ಬಿಂದು, “ನಾನು ನಿಜವಾಗಿ ಬಿಂಬಿಸಲು ಪ್ರಯತ್ನಿಸುತ್ತಿರುವುದು ಮಹಿಳೆಯರ ವಿಚಾರವನ್ನು” ಎನ್ನುತ್ತಾರೆ.
ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಕ್ಷಮಾ ಬಿಂದು ಅವರ ನಿರ್ಧಾರಕ್ಕೆ ಪೋಷಕರು ಬೆಂಬಲ ನೀಡಿದ್ದಾರೆ ಎಂದು ಹೇಳಿದರು. ಎಲ್ಲಾ ವಿಧಿವಿಧಾನಗಳನ್ನು ಆಚರಿಸುತ್ತಾರಂತೆ. ತನ್ನ ವಿವಾಹ ಸಮಾರಂಭದ ನಂತರ, ಕ್ಷಮಾ ಬಿಂದು ಗೋವಾದಲ್ಲಿ ಎರಡು ವಾರಗಳ ಹನಿಮೂನ್ ಗೆ ಹೋಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.