ಇದು ಎನ್‌ಆರ್‌ಐ ಗ್ರಾಮ! ವಿದೇಶದಲ್ಲೇ ಇದ್ದಾರೆ ಹಳ್ಳಿಯ ಅರ್ಧದಷ್ಟು ಜನರು
ಕೆನಡಾದಲ್ಲಿ ಮರಗಟ್ಟಿ ಸತ್ತ ಕುಟುಂಬದ ಮೂಲ ಊರಿನ ಕಥೆ
Team Udayavani, Jan 29, 2022, 7:25 AM IST
ಗಾಂಧಿನಗರ: ಈ ಗ್ರಾಮದಲ್ಲಿ ಸಾಧನೆ ಅಂದರೆ “ವಿದೇಶಕ್ಕೆ ಹೋಗಿ ಸೆಟಲ್ ಆಗುವುದು’. ಇದು ಬೇರೆ ಯಾವುದೋ ಗ್ರಾಮದ ಕಥೆಯಲ್ಲ, ಇತ್ತೀಚೆಗೆ ಅಮೆರಿಕ-ಕೆನಡಾ ಗಡಿಯಲ್ಲಿ ಹಿಮದಲ್ಲಿ ಮರಗಟ್ಟಿ ಮೃತರಾದ ಭಾರತೀಯ ಕುಟುಂಬದ ಮೂಲ ಊರಾದ ಗುಜರಾತ್‌ನ ಡಿಂಗುಚಾ ಊರಿನ ಕಥೆ!
ಒಟ್ಟು 7000 ಜನ ಸಂಖ್ಯೆಯಿರುವ ಊರು ಡಿಂಗುಚಾ. ಆದರೆ ಈ 7000ದಲ್ಲಿ ಈಗಾಗಲೇ 3200ಕ್ಕೂ ಅಧಿಕ ಜನರು ಅಮೆರಿಕ, ಕೆನಡಾ ಮತ್ತು ಬ್ರಿಟನ್‌ಗೆ ತೆರಳಿ ಅಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಊರಿನ ಪ್ರತಿ ಬೀದಿಯಲ್ಲೂ ವಿದೇಶಕ್ಕೆ ಸಂಪರ್ಕ ಕಲ್ಪಿಸಿಕೊಡುವ ಏಜೆಂಟರಿದ್ದಾರೆ. ಊರಿನ ಪ್ರತಿ ಮಕ್ಕಳಿಗೆ ವಿದೇಶಕ್ಕೆ ಹೋಗುವ ಆಸೆಯನ್ನೇ ತುಂಬಲಾಗುತ್ತಿದೆ. ವಿದೇಶಕ್ಕೆ ಹೋಗಬೇಕು ಇಲ್ಲವೇ ವಿದೇಶಕ್ಕೆ ಕಳುಹಿಸುವ ಏಜೆಂಟ್ ಆಗಬೇಕು ಎನ್ನುವುದೇ ಇಲ್ಲಿನ ಯುವಕರ ಗುರಿಯಂತೆ!
ಈ ರೀತಿ ವಿದೇಶಕ್ಕೆ ಹೋಗಿ ಸೆಟಲ್ ಆದವರು ಆಗಾಗ ಊರಿಗೆ ಬಂದು ದೇಣಿಗೆ, ದಾನ ಮಾಡುತ್ತಿರುವುದರಿಂದಾಗಿ ಊರಿನ ಅಭಿವೃದ್ಧಿಯೂ ಆಗುತ್ತಿದೆ ಎನ್ನುತ್ತಾರೆ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರು.
ಇದನ್ನೂ ಓದಿ:ಮೆಲಾನಿಯಾ ಟ್ರಂಪ್ ಟೋಪಿಗಿಲ್ಲ ಬೆಲೆ
ಕುಟುಂಬದ ಗುರುತು ಪತ್ತೆ
ಜ.19ರಂದು ಅಮೆರಿಕ-ಕೆನಡಾ ಗಡಿಯಾದ ಎಮೆರ್ಸನ್ ಬಳಿ ಮರಗಟ್ಟಿದ ಪರಿಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವಗಳು ಗುಜರಾತ್‌ನ ಇದೇ ಡಿಂಗುಚಾ ಊರಿನ ಕುಟುಂಬದ್ದು ಎಂದು ಕೆನಡಾದ ಅಧಿಕಾರಿಗಳು ದೃಢಪಡಿಸಿದ್ದಾರೆ.
ಜಗದೀಶ್ ಭಾಯ್ ಪಟೇಲ್(39), ಅವರ ಪತ್ನಿ ವೈಶಾಲಿಬೆನ್ ಜಗದೀಶ್ ಕುಮಾರ್ ಪಟೇಲ್(37), ಮಗಳು ವಿಹಾಂಗಿ(11) ಮತ್ತು ಮಗ ಧಾರ್ಮಿಕ್(3) ಮೃತ ದುರ್ದೈವಿಗಳು. ಈ ಕುಟುಂಬ ಹಲವು ದಿನಗಳ ಕಾಲ ಕೆನಡಾದಾದ್ಯಂತ ತಿರುಗಾಡಿದ್ದು, ಜ.12ರಂದು ಟೊರೊಂಟೋಗೆ ತೆರಳಿದೆ. ಅಲ್ಲಿಂದ ಜ.18ರಂದು ಎಮೆರ್ಸನ್‌ಗೆ ಹೊರಟಿತ್ತು. ಮಾನವ ಕಳ್ಳಸಾಗಣೆ ಮಾಡುವವರು ಕುಟುಂಬವನ್ನು ಕರೆದೊಯ್ದಿರುವ ಅನುಮಾನವಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
MUST WATCH
ಹೊಸ ಸೇರ್ಪಡೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.