ತನ್ನನ್ನು ತಾನೇ ಮದುವೆಯಾದ ಯುವತಿಯಿಂದ ಮೊದಲ ಕರ್ವಾ ಚೌತ್ ಆಚರಣೆ
Team Udayavani, Oct 17, 2022, 6:12 PM IST
ಗುಜರಾತ್: ತನ್ನನ್ನು ಮದುವೆಯಾದ ಗುಜರಾತಿನ ಕ್ಷಮಾ ಬಿಂದು ಮತ್ತೊಮ್ಮೆ ಸುದ್ದಿಯಾಗಿದ್ದಾಳೆ. ಸಾಂಪ್ರದಾಯಿಕ ಉಡುಗೆ ತೊಟ್ಟು ಕರ್ವಾ ಚೌತ್ ಆಚರಿಸಿಕೊಂಡಿದ್ದಾಳೆ.
ಇದೇ ವರ್ಷದ ಜೂನ್.8 ರಂದು ವಡೋದಾರದಲ್ಲಿ ʼಸೋಲೋಗಮಿʼ (ಏಕಪತ್ನಿತ್ವ) ತನ್ನನ್ನು ತಾನೇ ಮದುವೆಯಾಗಿ ಸುದ್ದಿಯಾಗಿದ್ದಳು. ಕ್ಷಮಾ ಮದುವೆಗೆ ನೆಟ್ಟಿಗರಿಂದ ನಾನಾ ಬಗೆಯ ಕಮೆಂಟ್ ಗಳನ್ನು ಕೇಳಿ ಬಂದಿತ್ತು. ಕೆಲ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಪೋಷಕರ ಅನುಮೋದನೆಯೊಂದಿಗೆ ಕ್ಷಮಾ ತಮ್ಮನ್ನು ತಾವೇ ಮದುವೆಯಾಗಿದ್ದರು.
ಮದುವೆಯ ಬಳಿಕ ಗೋವಾದಲ್ಲಿ ಹನಿಮೂನ್ ಮಾಡಿಕೊಂಡಿದ್ದ ಫೋಟೋಈಗಳನ್ನು ಹಂಚಿಕೊಂಡಿದ್ದರು. ಈಗ ತಮ್ಮ ಮೊದಲ ಕರ್ವಾ ಚೌತ್ ಬಗ್ಗೆ ಫೋಟೋವನ್ನು ಹಂಚಿಕೊಂಡಿದ್ದಾರೆ.
ಗಂಡನ ಒಳಿತಿಗಾಗಿ ಪತ್ನಿ ಉಪವಾಸ ವೃತವನ್ನು ಮಾಡಿ ಕರ್ವಾ ಚೌತ್ ನ್ನು ಆಚರಣೆ ಮಾಡುವುದು ಕ್ರಮ. ಕ್ಷಮಾ ಬಿಂದು ತಮ್ಮನ್ನು ತಾವೇ ಮದುವೆ ಆಗಿದ್ದರಿಂದ ಒಂಟಿಯಾಗಿ ಕರ್ವಾ ಚೌತ್ ಮಾಡಿದ್ದಾರೆ.
ಸಾಂಪ್ರದಾಯಿಕ ಉಡುಗೆ ತೊಟ್ಟು ಜರಡಿ ಹಿಡಿದುಕೊಂಡು, ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಂಡು ಕ್ಷಮಾ ವ್ರತ ಮಾಡಿದ್ದಾರೆ. ನಾನು ನನ್ನ ಮೊದಲ ಕರ್ವಾ ಚೌತ್ ಮಾಡಿದೆ ಎಂದು ಕ್ಯಾಪ್ಷನ್ ಬರೆದು ಪೋಟೋ ಹಂಚಿಕೊಂಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.