ಅಭಿಯಾನದಿಂದ ಹಿಂದೆ ಸರಿದ ಹುತಾತ್ಮ ಕಾರ್ಗಿಲ್ ಯೋಧನ ಪುತ್ರಿ

Team Udayavani, Feb 28, 2017, 11:40 AM IST

Gurmehar Kaur-700.jpg

ಹೊಸದಿಲ್ಲಿ : ದಿಲ್ಲಿ ವಿಶ್ವವಿದ್ಯಾಲಯದ ರಾಮ್‌ಜಾಸ್‌ ಕಾಲೇಜಿನಲ್ಲಿ ಕಳೆದ ಫೆ.22ರಂದು ಸಂಭವಿಸಿದ್ದ ಹಿಂಸಾತ್ಮಕ ಘಟನೆಯನ್ನು ವಿರೋಧಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ವಿರುದ್ಧ ಆನ್‌ಲೈನ್‌ ಅಭಿಯಾನವನ್ನು ಆರಂಭಿಸಿ ತೀವ್ರ ವಿವಾದವನ್ನು ಸೃಷ್ಟಿಸಿದ್ದ ದಿಲ್ಲಿ ವಿವಿ ವಿದ್ಯಾರ್ಥಿನಿ ಗುರ್‌ವೆುಹರ್‌ ಕೌರ್‌ ಇಂದು ತಾನು ಈ ಅಭಿಯಾನದಿಂದ ಹಿಂದೆ ಸರಿದಿರುವುದಾಗಿಯೂ ಇಂದು ನಡೆಯಲಿರುವ ಎಐಎಸ್‌ಎ ಜಾಥಾದಲ್ಲಿ ತಾನು ಪಾಲ್ಗೊಳ್ಳೆನೆಂದೂ ಟ್ವೀಟ್‌ ಮಾಡಿದ್ದಾಳೆ. 

“ನಾನು ಅಭಿಯಾನದಿಂದ ಹಿಂದೆ ಸರಿಯುತ್ತಿದ್ದೇನೆ; ಎಲ್ಲರಿಗೂ ನನ್ನ ಅಭಿನಂದನೆಗಳು; ನನ್ನನ್ನು  ಒಂಟಿಯಾಗಿರಲು ಬಿಡಿ ಎಂದು ಕೇಳಿಕೊಳ್ಳುತ್ತೇನೆ; ನಾನು ಹೇಳಬೇಕಾದ್ದನ್ನೆಲ್ಲ ಹೇಳಿದ್ದೇನೆ;  ತೋರಬೇಕಾಗಿದ್ದ ಧೈರ್ಯ, ದಿಟ್ಟತನವನ್ನು ತೋರಿಸಿದ್ದೇನೆ’ ಎಂದಾಕೆ ಹೇಳಿದ್ದಾಳೆ.

ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾಗಿದ್ದ ಕ್ಯಾಪ್ಟನ್‌ ಮನ್‌ದೀಪ್‌ ಸಿಂಗ್‌ ಅವರ ಪುತ್ರಿಯಾಗಿರುವ ಗುರ್‌ವೆುಹರ್‌ ಕೌರ್‌, ದಿಲ್ಲಿಯ ರಾಮ್‌ಜಾಸ್‌ ಕಾಲೇಜಿನಲ್ಲಿ ಎಬಿವಿಪಿ ನಡೆಸಿದ್ದ ಹಿಂಸೆಯನ್ನು ಪ್ರತಿಭಟಿಸಿ ಆನ್‌ಲೈನ್‌ ಅಭಿಯಾನವನ್ನು ಆರಂಭಿಸಿದ್ದಳು. ಈ ನಡುವೆ ಆಕೆಗೆ ಜೀವ ಬೆದರಿಕೆ, ರೇಪ್‌ ಬೆದರಿಕೆ ಇತ್ಯಾದಿಗಳು ಬಂದಿದ್ದವು. ಆ ಬಗ್ಗೆ ಆಕೆ ದಿಲ್ಲಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು. ರಕ್ಷಣೆಯನ್ನೂ ಬೇಡಿದ್ದಳು. 

ಇಂದು ತನ್ನ ಈ ಅಭಿಯಾನದಿಂದ ತಾನು ಹಿಂದೆ ಸರಿಯುತ್ತಿರುವುದಾಗಿ ಆಕೆ ಮಾಡಿರುವ ಸರಣಿ ಟ್ವೀಟ್‌ನಲ್ಲಿ ಹೀಗೆ ಹೇಳಿದ್ದಾಳೆ : 

“ನನ್ನ ದೈರ್ಯ, ಶೌರ್ಯವನ್ನು ಪ್ರಶ್ನಿಸುವವರಿಗೆ ನಾನು ಅದನ್ನು ಈಗಾಗಲೇ ಸಾಕಷ್ಟು ತೋರಿಸಿದ್ದೇನೆ. ಹಿಂಸೆಯ ವಿರುದ್ಧದ ಅಭಿಯಾನವನ್ನು ನಾನು ಕೈಗೊಂಡದ್ದು ನನಗಾಗಿ ಅಲ್ಲ; ವಿದ್ಯಾರ್ಥಿ ಸಮುದಾಯಕ್ಕಾಗಿ. ಮುಂದಿನ ಬಾರಿ ಹಿಂಸೆ, ಬೆದರಿಕೆಗಳು ಎದುರಾದಾಗ ನಾವು ಆ ಬಗ್ಗೆ ಎಚ್ಚರಿಕೆಯಿಂದ ಎರಡೆರಡು ಬಾರಿ ಯೋಚಿಸುವೆವು’.

ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇಂದು ಕ್ಯಾಂಪಸ್‌ ಒಳಗೆ ಶಾಂತಿ ಮತ್ತು ಸುರಕ್ಷೆಗಾಗಿ, ಎಐಎಸ್‌ಎ ಕಾರ್ಯಕರ್ತರೊಂದಿಗೆ ಖಾಲ್ಸಾ ಕಾಲೇಜಿನಿಂದ ಜಾಥಾ ನಡೆಸಲಿದ್ದಾರೆ. 

ಟಾಪ್ ನ್ಯೂಸ್

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

1-INS

Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ

1-JPC

JPC ಅವಧಿ ವಿಸ್ತರಣೆ: ವಕ್ಫ್ ಮಸೂದೆ ಮಂಡನೆ ಮುಂದಿನ ವರ್ಷಕ್ಕೆ?

sensex

Stock market; ಲಾಭದ ಆಸೆಗೆ 11 ಕೋಟಿ ರೂ. ಕಳಕೊಂಡ್ರು!

hk-patil

Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-INS

Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ

1-JPC

JPC ಅವಧಿ ವಿಸ್ತರಣೆ: ವಕ್ಫ್ ಮಸೂದೆ ಮಂಡನೆ ಮುಂದಿನ ವರ್ಷಕ್ಕೆ?

sensex

Stock market; ಲಾಭದ ಆಸೆಗೆ 11 ಕೋಟಿ ರೂ. ಕಳಕೊಂಡ್ರು!

UGC

UGC; ಪದವಿ ಕಲಿಕೆ ಅವಧಿ ನಿರ್ಧಾರ ಆಯ್ಕೆ ಶೀಘ್ರ: ಚೇರ್ಮನ್‌ ಹೇಳಿದ್ದೇನು?

Ashwin Vaishnav

Bullet train ದೇಶದಲ್ಲಿಯೇ ನಿರ್ಮಾಣ: ಸಂಸತ್ತಿಗೆ ಕೇಂದ್ರ ಮಾಹಿತಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

1-INS

Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ

1-JPC

JPC ಅವಧಿ ವಿಸ್ತರಣೆ: ವಕ್ಫ್ ಮಸೂದೆ ಮಂಡನೆ ಮುಂದಿನ ವರ್ಷಕ್ಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.