ನಿಯಮ ಮೀರಿದ ಟ್ರ್ಯಾಕ್ಟರ್‌ಗೆ 59 ಸಾವಿರ ರೂ. ದಂಡ
Team Udayavani, Sep 5, 2019, 5:26 AM IST
ಹೊಸದಿಲ್ಲಿ: ಮೋಟಾರು ವಾಹನ ಕಾಯ್ದೆ ತಿದ್ದುಪಡಿಯ ಅನಂತರದಲ್ಲಿ ನಿಯಮ ಉಲ್ಲಂ ಸಿದ ವಾಹನಗಳಿಗೆ ದೇಶದ ವಿವಿಧ ಭಾಗಗಳಲ್ಲಿ ಭಾರೀ ದಂಡ ವಿಧಿಸಲಾಗುತ್ತಿದ್ದು, ಬುಧವಾರ ಹರಿಯಾಣದ ಗುರುಗ್ರಾಮದಲ್ಲಿ ಹಲವು ನಿಯಮಗಳನ್ನು ಉಲ್ಲಂಘಿ ಸಿದ ಟ್ರ್ಯಾಕ್ಟರ್‌ಗೆ 59 ಸಾವಿರ ರೂ. ದಂಡ ವಿಧಿಸಲಾಗಿದೆ.
ಹೊಸ ಮೋಟಾರು ವಾಹನ ಕಾಯ್ದೆಗೆ ಅನುಗುಣವಾಗಿ ಈ ದಂಡವನ್ನು ವಿಧಿಸಲಾಗಿದೆ. ಚಾಲನೆ ಪರವಾನಗಿ, ನೋಂದಣಿ ಪ್ರಮಾಣಪತ್ರ, ಫಿಟ್‌ನೆಸ್ ಪ್ರಮಾಣಪತ್ರ, ಥರ್ಡ್ ಪಾರ್ಟಿ ವಿಮೆ ಇಲ್ಲದಿರುವುದು, ವಾಯು ಮಾಲಿನ್ಯ ಮಾನದಂಡಗಳ ಉಲ್ಲಂಘನೆ, ಅಪಾಯಕಾರಿ ಸಾಮಗ್ರಿ ಹೊತ್ತೂಯ್ಯುವುದು, ಪೊಲೀಸರ ಸೂಚನೆಯನ್ನು ಅನುಸರಿಸದೇ ಇರುವುದು, ಟ್ರಾಫಿಕ್ ಸಂಕೇತಗಳನ್ನು ಉಲ್ಲಂ ಸಿರುವುದು, ಹಳದಿ ದೀಪದ ನಿಯಮ ಉಲ್ಲಂಘನೆ ಮಾಡಿರುವುದಕ್ಕಾಗಿ ದಂಡ ವಿಧಿಸಲಾಗಿದೆ.
ಮಂಗಳವಾರವಷ್ಟೇ, ಒಬ್ಬ ಆಟೋ ರಿಕ್ಷಾ ಚಾಲಕನಿಗೆ 32,500 ರೂ. ದಂಡ ವಿಧಿಸಲಾಗಿತ್ತು. ಅಲ್ಲದೆ, 15 ಸಾವಿರ ಮೌಲ್ಯದ ದ್ವಿಚಕ್ರ ವಾಹನವೊಂದಕ್ಕೆ ಗುರುಗ್ರಾಮದಲ್ಲೇ 23,000 ರೂ. ದಂಡ ವಿಧಿಸಲಾಗಿತ್ತು. ಚೆನ್ನೈನಲ್ಲಿ ಕೂಡ ಹಲವರಿಗೆ ಇದೇ ಮಾದರಿಯಲ್ಲಿ ದಂಡ ವಿಧಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.