ಕೇರಳದ ಪ್ರಸಿದ್ಧ ಗುರುವಾಯೂರು ದೇಗುಲ: ಜಾತಿ ವಿವಾದಕ್ಕೆ ತೆರೆ
Team Udayavani, Jan 30, 2022, 7:45 AM IST
ತಿರುವನಂತಪುರಂ: ಕೇರಳದ ಪ್ರಸಿದ್ಧ ಗುರುವಾಯೂರು ದೇಗುಲದದ ಉತ್ಸವದಲ್ಲಿ ಪ್ರಸಾದ ತಯಾರಿಕೆ ಮತ್ತು ಬಡಿಸುವ ವಿಚಾರದಲ್ಲಿ ಭುಗಿಲೆದ್ದಿದ್ದ ಜಾತಿ ವಿವಾದಕ್ಕೆ ತೆರೆ ಬಿದ್ದಿದೆ.
ಪ್ರಸಾದವನ್ನು ಬ್ರಾಹ್ಮಣರೇ ತಯಾರಿಸಬೇಕೆಂಬ ನಿಯಮವನ್ನು ದೇಗುಲದ ಮಂಡಳಿ ಕೈ ಬಿಟ್ಟಿದೆ. ಫೆ.14ರಿಂದ 23ರವರೆಗೆ ಉತ್ಸವ ಜರುಗಲಿದ್ದು, ಅದಕ್ಕೆ ಬ್ರಾಹ್ಮಣರೇ ಪ್ರಸಾದ ತಯಾರಿಸಿ, ಊಟ ಬಡಿಸಬೇಕೆಂದು ಮಂಡಳಿ ಹೇಳಿತ್ತು. ಅದಕ್ಕೆಂದು ಟೆಂಡರ್‌ನೂ° ಕರೆಯಲಾಗಿತ್ತು. ಈ ವಿಚಾರದಲ್ಲಿ ವಿರೋಧ ವ್ಯಕ್ತವಾಗಿತ್ತು.
ಕೊನೆಗೆ ಸಚಿವ ಕೆ.ರಾಧಾಕೃಷ್ಣನ್ ಅವರೂ ಮಧ್ಯೆ ಬಂದಿದ್ದು, ಬ್ರಾಹ್ಮಣರೇ ಪ್ರಸಾದ ತಯಾರಿಸಬೇಕೆಂಬ ನಿಯಮವನ್ನು ಕೈ ಬಿಡುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ:ಕುಷ್ಠ ರೋಗದ ವಿರುದ್ಧ ಯುದ್ಧ ಸಾರಿದ್ದ ಬ್ರೈಟ್ ಇಂಡಿಯಾ ಸಂಸ್ಥೆಯ ಸ್ಥಾಪಕ ಕೆ.ವಿ.ಶೆಟ್ಟಿ ನಿಧನ
ಹಾಗೆಯೇ “ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಉತ್ಸವ ಮಾಡದೆ, ಸರಳವಾಗಿ ನಡೆಸಲಾಗುವುದು. ಊಟ ಬಡಿಸುವ ಬದಲಾಗಿ 30000 ಜನರಿಗೆ ಪ್ರಸಾದದ ಕಿಟ್ ಕೊಡಲಾಗುವುದು’ ಎಂದು ದೇಗುಲದ ಮಂಡಳಿ ಮಾಹಿತಿ ಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.