Gyanvapi Case: ಮಸೀದಿ ಸಮಿತಿಯ ಸವಾಲು ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್
Team Udayavani, May 31, 2023, 8:27 PM IST
ಅಲಹಾಬಾದ್ : ವಾರಾಣಸಿಯ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಪ್ರಮುಖ ಪ್ರಕರಣವೊಂದರಲ್ಲಿ ಮಸೀದಿ ಸಮಿತಿಗೆ ಹಿನ್ನಡೆಯಾಗಿ, ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುತ್ತಿರುವ ಸಿವಿಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿದ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪ್ರಾರ್ಥನೆ ಮಾಡುವ ಹಕ್ಕನ್ನು ಕೋರಿ ಹಿಂದೂ ಮಹಿಳಾ ಆರಾಧಕರ ಗುಂಪು ಸಲ್ಲಿಸಿದ ಮೊಕದ್ದಮೆ ಮಾನ್ಯವಾಗಿದೆ, ನ್ಯಾಯಾಲಯವು ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿತು.
ಪ್ರಕರಣದ ದಾವೆದಾರರಾದ ಲಕ್ಷ್ಮಿ ದೇವಿ, ರೇಖಾ ಪಾಠಕ್, ಸೀತಾ ಸಾಹು ಮತ್ತು ಮಂಜು ವ್ಯಾಸ್ ಅವರು ಆಗಸ್ಟ್ 2021 ರಲ್ಲಿ ಶೃಂಗಾರ ಗೌರಿ ದೇವತೆ ಮತ್ತು ಮಸೀದಿಯ ಸಂಕೀರ್ಣದಲ್ಲಿ ನೆಲೆಗೊಂಡಿರುವ ಇತರ ದೇವತೆಗಳನ್ನು ನಿಯಮಿತವಾಗಿ ಪೂಜಿಸುವ ಹಕ್ಕನ್ನು ಕೋರಿ ಪ್ರಕರಣವನ್ನು ದಾಖಲಿಸಿದ್ದರು. ಈ ಪ್ರಕರಣದ ನಿರ್ವಹಣೆಯನ್ನು ವಾರಾಣಸಿ ಜಿಲ್ಲಾ ನ್ಯಾಯಾಧೀಶರು ಸೆಪ್ಟೆಂಬರ್ 2022 ರಲ್ಲಿ ಎತ್ತಿಹಿಡಿದ್ದರು.
ಅಂಜುಮನ್ ಇಂತೇಜಾಮಿಯಾ ಮಸೀದಿ (ಎಐಎಂ) ಸಮಿತಿ ಮತ್ತು ಉತ್ತರ ಪ್ರದೇಶ ಸುನ್ನಿ ವಕ್ಫ್ ಬೋರ್ಡ್ ಸೆಪ್ಟೆಂಬರ್ 2022 ರ ತೀರ್ಪನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, 1991 ರ ಪೂಜಾ ಸ್ಥಳಗಳ ಕಾಯಿದೆ ಮತ್ತು 1995 ರ ಕೇಂದ್ರ ವಕ್ಫ್ ಕಾಯಿದೆಯ ಅಡಿಯಲ್ಲಿ ಇದನ್ನು ನಿರ್ವಹಿಸಲಾಗುವುದಿಲ್ಲ ಎಂದು ವಾದಿಸಿದ್ದರು.
ಎರಡು ವರ್ಷಗಳ ಹಿಂದೆ ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ಮಾ ಶೃಂಗಾರ ಗೌರಿ ಮತ್ತು ಅರ್ಜಿದಾರರು ಮಸೀದಿಯ ಸಂಕೀರ್ಣದಲ್ಲಿ ಇರುವ ಇತರ ದೇವತೆಗಳ ವಿಗ್ರಹಗಳನ್ನು ನಿಯಮಿತವಾಗಿ ಪೂಜಿಸುವ ಹಕ್ಕನ್ನು ಕೋರಿ ದಾವೆ ಹೂಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.