ಜ್ಞಾನವಾಪಿ ಮಸೀದಿ ವಿವಾದ: ಮೊದಲಿಗೆ ಮುಸ್ಲಿಂ ಪರ ಅರ್ಜಿ ವಿಚಾರಣೆ
Team Udayavani, May 24, 2022, 2:55 PM IST
ವಾರಾಣಸಿ: ಜ್ಞಾನವಾಪಿ ಮಸೀದಿ ವಿವಾದ ಪ್ರಕರಣದ ವಿಚಾರಣೆಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯವು ಮೇ.26ಕ್ಕೆ ಮುಂದೂಡಿದೆ. ಮೊದಲಿಗೆ ಮುಸ್ಲಿಮರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಹೇಳಿದೆ.
ಹಿಂದೂ ಪರ ವಕೀಲರ ಅರ್ಜಿ ತಿರಸ್ಕರಿಸುವ ಬಗ್ಗೆ ಆದೇಶ 7 11 CPC ಅಡಿಯಲ್ಲಿ ಮುಸ್ಲಿಂ ಕಡೆಯ ಮನವಿಯ ವಿಚಾರಣೆಯು ಮೇ 26 ರಂದು ನಡೆಯಲಿದೆ. ಗುರುವಾರದವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ಆಯೋಗದ ವರದಿಗೆ ಆಕ್ಷೇಪಣೆ ಸಲ್ಲಿಸುವುದಿದ್ದರೆ, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಎರಡೂ ಕಡೆಯವರಿಗೆ ಕೋರ್ಟ್ ಹೇಳಿದೆ ಎಂದು ಹಿಂದೂ ಪರ ವಕೀಲ ವಿಶು ಜೈನ್ ಹೇಳಿದರು.
ಇದನ್ನೂ ಓದಿ:ಫೇಸ್ ಬುಕ್ ನಲ್ಲಿ ಹಾಕಿದ್ದ ಸೆಲ್ಫಿ ಪೋಸ್ಟ್ ನಿಂದ 5 ವರ್ಷದ ಬಳಿಕ ಅರೆಸ್ಟ್ ಆದ ಕೊಲೆ ಆರೋಪಿ!
ಇದೇ ವೇಳೆ, ಜ್ಞಾನವಾಪಿ ಮಸೀದಿಯ ಒಳಭಾಗದಲ್ಲಿ ಕಂಡುಬಂದಿದೆ ಎಂದು ಹೇಳಲಾಗಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಹೊಸತಾಗಿ ಅರ್ಜಿಯೊಂದು ಸೋಮವಾರ ಸಲ್ಲಿಕೆಯಾಗಿತ್ತು.
Correction | Hearing on the Muslim side’s plea under order 7 11 CPC regarding the rejection of suit will take place on May 26th. Court* asked both sides to file an objection to the commission report, and submit the report within one week: Hindu side’s Advocate Vishnu* Jain pic.twitter.com/dutyJyC5vi
— ANI UP/Uttarakhand (@ANINewsUP) May 24, 2022
ಜಿಲ್ಲಾ ಕೋರ್ಟ್‌ನ ನ್ಯಾಯಾಧೀಶರು ಸಿವಿಲ್ ಜಡ್ಜ್ (ಹಿರಿಯ ಶ್ರೇಣಿ) ನ್ಯಾಯಾಧೀಶರ ಕೋರ್ಟ್‌ನಿಂದ ವರ್ಗಾವಣೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದ್ದ ವಿಚಾರಣೆ ವೇಳೆ ಜಿಲ್ಲಾ ಕೋರ್ಟ್‌ನಲ್ಲಿಯೇ ವಿಚಾರಣೆ ನಡೆಯಬೇಕು ಎಂದು ಆದೇಶ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.