ಬೇಗ ಆಗಮಿಸಿದ “ಚೇತಕ್’
ನೌಕಾಪಡೆಗೆ ಹೆಲಿಕಾಪ್ಟರ್ ಹಸ್ತಾಂತರಿಸಿದ ಎಚ್‌ಎಎಲ್
Team Udayavani, Jul 25, 2019, 5:16 AM IST
ಹೊಸದಿಲ್ಲಿ/ಬೆಂಗಳೂರು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ. (ಎಚ್‌ಎಎಲ್) ಸಂಸ್ಥೆ, ನೌಕಾಪಡೆಗೆ ನೀಡಬೇಕಿರುವ ಎಂಟು “ಚೇತಕ್ ಹೆಲಿಕಾಪ್ಟರ್’ಗಳಲ್ಲಿ, ಮೊದಲನೆಯ ಹೆಲಿಕಾಪ್ಟರನ್ನು ಬುಧವಾರ ಹಸ್ತಾಂತರಗೊಳಿಸಿದೆ. ಒಪ್ಪಂದದ ಪ್ರಕಾರ, ಆಗಸ್ಟ್‌ನಲ್ಲಿ ಈ ಹೆಲಿಕಾಪ್ಟರ್ ಹಸ್ತಾಂತರ ಗೊಳ್ಳಬೇಕಿತ್ತು. ಗಡುವಿಗೂ ಮೊದಲೇ ಹೆಲಿಕಾಪ್ಟರ್ ತಯಾರಿಸಿ ಹಸ್ತಾಂತರಗೊಳಿಸಿರು ವುದು ಎಚ್‌ಎಎಲ್‌ನ ಹೆಗ್ಗಳಿಕೆಯಾಗಿದೆ.
ಬುಧವಾರ, ಎಚ್‌ಎಎಲ್ ಕಾರ್ಖಾನೆಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಚ್‌ಎಎಲ್‌ನ ಹೆಲಿಕಾಪ್ಟರ್ ವಿಭಾಗದ ಮುಖ್ಯಸ್ಥರಾದ ಎಸ್. ಅನುºವೆಲನ್ ಅವರು, ಹೆಲಿಕಾಪ್ಟರ್‌ಗೆ ಸಂಬಂಧಪಟ್ಟ ಕಾಗದಪತ್ರಗ ಳನ್ನು ನೌಕಾಪಡೆಯ ಕಮಾಂಡೊ ವಿಕ್ರಮ್ ಮೆನನ್ ಅವರಿಗೆ ಹಸ್ತಾಂತರಿಸಿದರು.
2020ಕ್ಕೆ ಒಪ್ಪಂದ ಪೂರ್ಣ: 2017ರಲ್ಲಿ ಎಚ್‌ಎಎಲ್-ನೌಕಾಪಡೆ ನಡುವೆ ಏರ್ಪಟ್ಟಿದ್ದ ಒಪ್ಪಂದದ ಪ್ರಕಾರ, ಎಂಟು ವಿಮಾನಗಳನ್ನು ಎಚ್‌ಎಎಲ್ ನೌಕಾಪಡೆಗೆ ತಯಾರಿಸಿ ಕೊಡಬೇಕಿದೆ. ಇವುಗಳಲ್ಲಿ, ಎರಡನ್ನು 2019ರ ಆಗಸ್ಟ್‌ನಲ್ಲಿ ಹಾಗೂ ಉಳಿದ ಆರು ಹೆಲಿಕಾಪ್ಟರ್‌ಗಳನ್ನು 2020ರ ಆಗಸ್ಟ್‌ನಲ್ಲಿ ಹಸ್ತಾಂತರಿಸಬೇಕೆಂದು ಒಪ್ಪಂದದಲ್ಲಿ ಉಲ್ಲೇಖೀಸಲಾಗಿದೆ.
ಐದು ದಶಕಗಳ ಉತ್ಪಾದನೆ: ಫ್ರಾನ್ಸ್‌ನ ಯೂರೋಕಾಪ್ಟರ್ (ಈಗ ಅದರ ಹೆಸರು ಏರ್‌ಬಸ್ ಹೆಲಿಕಾಪ್ಟರ್) ಕಂಪೆನಿಯಿಂದ ಪರವಾನಗಿ ಪಡೆದಿರುವ ಎಚ್‌ಎಎಲ್, 1966ರಿಂದ ಈವರೆಗೆ, ಅಂದರೆ, ಸುಮಾರು ಐದು ದಶಕಗಳಿಂದಲೂ ಚೇತಕ್ ಹೆಲಿಕಾಪ್ಟರ್ ತಯಾರಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.