ಎಲ್‌ಯುಎಚ್ ಕಾಪ್ಟರ್ ಪರೀಕ್ಷೆ ಯಶಸ್ವಿ; ಲೇಹ್‌ನ ದೌಲತ್ ಬೇಗ್ ಓಲ್ಡಿಯಲ್ಲಿ 10 ದಿನ ಹಾರಾಟ
Team Udayavani, Sep 9, 2020, 11:25 PM IST
ನವದೆಹಲಿ: ಲೇಹ್‌ನಲ್ಲಿ ಮಂಗಳವಾರ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಂಸ್ಥೆಯು ದೇಶೀಯವಾಗಿ ತಯಾರಿಸಿರುವ “ಮಿತ ಉಪಯೋಗಿ ಹೆಲಿಕಾಪ್ಟರ್’ನ (ಎಲ್‌ಯುಎಚ್) ಪ್ರಾಯೋಗಿಕ ಹಾರಾಟ ನಡೆಸಲಾಗಿದ್ದು, ಪ್ರಾಥಮಿಕ ಹಂತದ ಈ ಪರೀಕ್ಷೆಯಲ್ಲಿ ಹೆಲಿಕಾಪ್ಟರ್ ಉತ್ತೀರ್ಣವಾಗಿದೆ.
ದೌಲತ್ ಬೇಗ್ ಓಲ್ಡಿಯಲ್ಲಿ (ಡಿಬಿಒ) 10 ದಿನಗಳ ಕಾಲ ನಡೆದ ಈ ಪ್ರಾಯೋಗಿಕ ಹಾರಾಟದ ವೇಳೆ, ಹೆಲಿಕಾಪ್ಟರ್‌ಗೆ ಇರಬೇಕಾದ ಉಷ್ಣ ಹಾಗೂ ತೀವ್ರ ಮಾರುತಗಳ ಹವಾಮಾನ ಪರಿಸ್ಥಿತಿಗಳಲ್ಲಿ ಬಹು ಎತ್ತರದಲ್ಲಿ ಹಾರಾಡಬಲ್ಲ ಛಾತಿಯನ್ನು ಪರೀಕ್ಷೆಗೊಳಪಡಿಸಲಾಯಿತು. ಈ ಪರೀಕ್ಷೆಯ ವೇಳೆ ನಿಖರ ಫಲಿತಾಂಶಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.
ಭೂ ಸೇನೆ ಹಾಗೂ ವಾಯುಪಡೆಗಾಗಿ ಈ ಕಾಪ್ಟರ್ ತಯಾರಿಸಲಾಗಿದೆ. ಇದು ಉಪಯೋಗಕ್ಕೆ ಬಂದ ನಂತರ, ಈಗ ಸೇವೆಯಲ್ಲಿರುವ ಚೀತಾ ಹಾಗೂ ಚೇತಕ್ ಹೆಲಿಕಾಪ್ಟರ್‌ಗಳು ನೇಪಥ್ಯಕ್ಕೆ ಸರಿಯಲಿವೆ. ಭೂ ಸೇನೆಯು ಎಲ್‌ಯುಎಫ್ ಮಾದರಿಯ ಒಟ್ಟು 126 ಕಾಪ್ಟರ್‌ಗಳನ್ನು ಖರೀದಿಸಲಿದ್ದು, ವಾಯುಪಡೆಯು 61 ಕಾಪ್ಟರ್‌ಗಳನ್ನು ಕೊಳ್ಳಲಿದೆ.
ಎಲ್‌ಯುಎಚ್ ವಿಶೇಷ
3 ಟನ್: ಹೆಲಿಕಾಪ್ಟರ್‌ನ ತೂಕ
235 ಕಿ.ಮೀ./ಗಂಟೆಗೆ: ಹೆಲಿಕಾಪ್ಟರ್‌ನ ಸರಾಸರಿ ವೇಗ
260 ಕಿ.ಮೀ./ಗಂಟೆಗೆ :
ಕಾಪ್ಟರ್‌ನ ಗರಿಷ್ಠ ವೇಗ
350 ಕಿ.ಮೀ. : ನಿರಂತರ ಹಾರಾಟದಡಿ ಕಾಪ್ಟರ್ ಸಾಗುವ ದೂರ
3.12 ಟನ್: ಹಾರಾಟದ ವೇಳೆ ಹೆಲಿಕಾಪ್ಟರ್ ಹೊರಬಲ್ಲ ಒಟ್ಟು ತೂಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.