MP: ಪಟಾಕಿ ಕಾರ್ಖಾನೆ ದುರಂತ: ಮಿತಿಗಿಂತ ಹೆಚ್ಚಿನ ಸ್ಪೋಟಕ ಸಂಗ್ರಹಿಸಲಾಗಿತ್ತು, ಮಾಲೀಕರ ಬಂಧನ
Team Udayavani, Feb 7, 2024, 9:08 AM IST
ಮಧ್ಯಪ್ರದೇಶ: ಹರ್ದಾ ನಗರದಲ್ಲಿ ಮಂಗಳವಾರ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಭಾರಿ ಸ್ಫೋಟದಿಂದ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿದ್ದು 170 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ರಾಜ್ಯದ ರಾಜಧಾನಿ ಭೋಪಾಲ್‌ನಿಂದ ಸುಮಾರು 150 ಕಿಮೀ ದೂರದಲ್ಲಿರುವ ಹರ್ದಾ ನಗರದ ಹೊರವಲಯದಲ್ಲಿರುವ ಮಗರ್ಧ ರಸ್ತೆಯಲ್ಲಿರುವ ಬೈರಾಗರ್‌ನಲ್ಲಿ ಈ ಘಟನೆ ನಡೆದಿದ್ದು ಅಧಿಕಾರಿಗಳ ಪ್ರಕಾರ ಈ ಕಾರ್ಖಾನೆಯಲ್ಲಿ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸ್ಪೋಟಕಗಳನ್ನು ಸಂಗ್ರಹಿಸಿ ಇಡಲಾಗಿತ್ತು ಎಂದು ಹೇಳಿದ್ದಾರೆ. ಹಾಗಾಗಿ ಸ್ಪೋಟದ ತೀವ್ರತೆ ಹೆಚ್ಚಾಗಲು ಕಾರಣ ಎನ್ನಲಾಗಿದೆ.
ಸ್ಪೋಟದ ತೀವ್ರತೆಗೆ ಕೆಲ ಕಿಲೋಮೀಟರ್ ದೂರದ ವರೆಗೆ ಭೂಮಿ ಕಂಪಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ, ಘಟನಾ ಸ್ಥಳದಲ್ಲಿ ಛಿದ್ರಗೊಂಡ ದೇಹಗಳು ಕಂಡುಬಂದಿದ್ದು ಸ್ಪೋಟದ ತೀವ್ರತೆಯನ್ನು ಹೇಳುವಂತ್ತಿದೆ, ಅಲ್ಲದೆ ಹತ್ತಿರದ ಕೆಲ ಕಾರ್ಖಾನೆಗಳಿಗೂ ಅಗ್ನಿ ಆವರಿಸಿ ಹೆಚ್ಚಿನ ದುರಂತ ಸಂಭವಿಸಿದೆ ಎಂದು ಹೇಳ್ಳಲಾಗಿದೆ.
ಮಾಲೀಕರ ವಿರುದ್ಧ ಕ್ರಮ:
ಕಾರ್ಖಾನೆಯ ಇಬ್ಬರು ಮಾಲೀಕರಾದ ರಾಜೇಶ್ ಅಗರವಾಲ್ ಮತ್ತು ಸೋಮೇಶ್ ಅಗರವಾಲ್ ಎಂದು ಗುರುತಿಸಲಾಗಿದ್ದು, ಸಂಜೆಯ ವೇಳೆಗೆ ರಾಜ್‌ಗಢ್ ಜಿಲ್ಲೆಯ ಸಾರಂಗ್‌ಪುರದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಫೀಕ್ ಖಾನ್ ಎಂಬ ಇನ್ನೊಬ್ಬ ವ್ಯಕ್ತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.
ಕಾರ್ಖಾನೆಯ ಮಾಲೀಕರ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 304 (ಕೊಲೆಗೆ ಸಮನಾಗದ ಅಪರಾಧಿ ನರಹತ್ಯೆಗೆ ಶಿಕ್ಷೆ), 308 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Gateway of India ಬಳಿ ಕುವೈಟ್ ಮೂಲದ ಬೋಟ್ ವಶಕ್ಕೆ ಪಡೆದ ನೌಕಾಪಡೆ, ತೀವ್ರ ವಿಚಾರಣೆ
NDRF and SDRF carry out firefighting and cooling operations at the firecracker factory in Harda, Madhya Pradesh. Eleven people were killed, and 174 others were injured after a fire erupted at an unlicensed firecracker factory in Madhya Pradesh’s Harda on Tuesday, triggering… pic.twitter.com/37Ed2t5oEx
— NDTV (@ndtv) February 7, 2024
VIDEO | Madhya Pradesh firecracker factory explosion: Rescue operations continue in Harda.
11 people were killed and 174 others were injured after a powerful explosion triggered a massive blaze at a firecrackers factory in Harda on Tuesday. The factory is located in the… pic.twitter.com/VDDzzsLyZv
— Press Trust of India (@PTI_News) February 7, 2024
#MadhyaPradesh: 11 died due to explosion in firecracker factory in #Harda so far, over 150 people injured.
Police arrest factory owner Rajesh Agarwal and his brother Somesh Agarwal.#HardaFactoryBlast pic.twitter.com/mYn6qAt0Ec
— All India Radio News (@airnewsalerts) February 7, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.