ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಒಳಗಾದ ಹರ್ಯಾಣ ಆರೋಗ್ಯ ಸಚಿವ ಅನಿಲ್ ವಿಜ್
ಭಾರತ್ ಬಯೋಟೆಕ್ ಇಂದಿನಿಂದ ಹರ್ಯಾಣದಲ್ಲಿ ಮೂರನೇ ಹಂತದ ಕೋವ್ಯಾಕ್ಸಿನ್ ಪ್ರಯೋಗ ಆರಂಭಿಸಿದೆ.
Team Udayavani, Nov 20, 2020, 3:04 PM IST
ನವದೆಹಲಿ: ಹರ್ಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಅವರು ಅಂಬಾಲಾ ಕಂಟೋನ್ಮೆಂಟ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವತಃ ಕೋವಿಡ್ ನ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಶುಕ್ರವಾರ(ನವೆಂಬರ್ 20, 2020) ಒಳಗಾಗಿದ್ದಾರೆ ಎಂದು ವರದಿ ತಿಳಿಸಿದೆ.
ಭಾರತ್ ಬಯೋಟೆಕ್ ಇಂದಿನಿಂದ ಹರ್ಯಾಣದಲ್ಲಿ ಮೂರನೇ ಹಂತದ ಕೋವ್ಯಾಕ್ಸಿನ್ ಪ್ರಯೋಗ ನಡೆಸಲು ಆರಂಭಿಸಿದೆ. ತಾನು ಸ್ವತಃ ಕೋವಿಡ್ ಗುಣಪಡಿಸಬಲ್ಲ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಒಳಗಾಗುತ್ತಿರುವುದಾಗಿ 67 ವರ್ಷದ ಸಚಿವ ಅನಿಲ್ ವಿಜ್ ಅವರು ಗುರುವಾರ(ನ.19, 2020) ಟ್ವೀಟರ್ ನಲ್ಲಿ ತಿಳಿಸಿದ್ದರು.
ಭಾರತ್ ಬಯೋಟೆಕ್ ಅಭಿವೃದ್ದಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಒಳಗಾಗಲಿದ್ದೇನೆ. ಅಂಬಾಲಾ ಕಂಟೋನ್ಮೆಂಟ್ ಆಸ್ಪತ್ರೆಯಲ್ಲಿನ ತಜ್ಞರ ಉಸ್ತುವಾರಿಯಲ್ಲಿ ವೈದ್ಯರ ತಂಡ ಲಸಿಕೆ ಪ್ರಯೋಗ ನಡೆಸಲಿದೆ ಎಂದು ವಿವರಿಸಿದ್ದರು.
#WATCH Haryana Health Minister Anil Vij being administered a trial dose of #Covaxin, at a hospital in Ambala.
He had offered to be the first volunteer for the third phase trial of Covaxin, which started in the state today. pic.twitter.com/xKuXWLeFAB
— ANI (@ANI) November 20, 2020
ಕೋವಿಡ್ ಸೋಂಕು ನಿಗ್ರಹಿಸಬಲ್ಲ ಕೋವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗವನ್ನು ಭಾರತದಲ್ಲಿ ಆರಂಭಿಸುವುದಾಗಿ ಸೋಮವಾರ ಭಾರತ್ ಬಯೋಟೆಕ್ ಘೋಷಿಸಿತ್ತು. ದೇಶಾದ್ಯಂತ 26 ಸಾವಿರ ಮಂದಿ ಮೇಲೆ ಕೋವ್ಯಾಕ್ಸಿನ್ ಪ್ರಯೋಗ ನಡೆಸುವುದಾಗಿ ತಿಳಿಸಿತ್ತು.
ಇದನ್ನೂ ಓದಿ:ಹೋಳಿಗೆ ಊಟಕ್ಕೆ ಹೋದವರು ಮಸಣ ಸೇರಿದರು.. ಮಿನಿ ಬಸ್ ಅಪಘಾತದಲ್ಲಿ ಮೂವರು ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.