ನೀವು ಬೇಕಾದ್ರೆ ನಿಮ್ಮ ಹೆಸರಿನ ಹಿಂದೆ ‘ಪಪ್ಪು’ ಎಂದು ಹಾಕ್ಕೊಳ್ಳಿ !
Team Udayavani, Mar 19, 2019, 9:30 AM IST
ನವದೆಹಲಿ: ದೇಶಾದ್ಯಂತ ಸಾಮಾಜಿಕ ಜಾಲತಾಣ ವಲಯದಲ್ಲಿ ‘ಚೌಕಿದಾರ್’ ಹೆಸರಿನ ಅಭಿಯಾನ ಜನಪ್ರಿಯವಾಗುತ್ತಿರುವಂತೆ ಇದನ್ನು ಟೀಕಿಸುವ ಕಾಂಗ್ರೆಸ್ ನಾಯಕರಿಗೆ ಹರ್ಯಾಣದ ಬಿ.ಜೆ.ಪಿ. ಸಚಿವ ಅನಿಲ್ ವಿಝ್ ತಿರುಗೇಟು ನೀಡಿದ್ದಾರೆ. ‘ನಾವು ಟ್ವಿಟ್ಟರ್ ನಲ್ಲಿ ನಮ್ಮ ಹೆಸರಿಗೆ ‘ಚೌಕಿದಾರ್’ ಸೇರಿಸಿಕೊಂಡಿದ್ದೇವೆ. ನೀವು ಬೇಕಾದರೆ ನಿಮ್ಮ ಹೆಸರಿನ ಹಿಂದೆ ‘ಪಪ್ಪು’ ಎಂದು ಸೇರಿಸಿಕೊಳ್ಳಿ ಇದರಿಂದ ನಮಗೇನೂ ಚಿಂತೆಯಿಲ್ಲ’ ಎಂದು ಅವರು ಕೈ ನಾಯಕರ ಕಾಲೆಳೆದಿದ್ದಾರೆ.
ರಾಜಕೀಯ ಪ್ರಜ್ಞೆ ಇಲ್ಲದಿರುವ ಮತ್ತು ಈ ದೇಶದ ಇತಿಹಾಸ ಗೊತ್ತಿರದ ರಾಹುಲ್ ಗಾಂಧಿಯವರನ್ನು ಬಿಜೆಪಿಯು ಹಲವಾರು ಸಂದರ್ಭಗಳಲ್ಲಿ ಪಪ್ಪು ಎಂದು ಟೀಕಿಸುತ್ತಿತ್ತು. ಇತ್ತ ರಫೇಲ್ ಹಗರಣವನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಮತ್ತು ಹಲವಾರು ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿಯವರನ್ನು ‘ಚೌಕಿದಾರ್ ಚೋರ್ ಹೈ’ ಎಂದು ಟೀಕಿಸುತ್ತಿದ್ದರು.
ಇದಕ್ಕೆ ಸೂಕ್ತ ಪ್ರತ್ಯುತ್ತರ ನೀಡಲು ಬಿ.ಜೆ.ಪಿ.ಯು ಕಳೆದ ಶನಿವಾರದಂದು ಟಿಟ್ಟರ್ ನಲ್ಲಿ ‘ಚೌಕಿದಾರ್’ ಅಭಿಯಾನವನ್ನು ಪ್ರಾರಂಭಿಸಿತ್ತು. ಅದಾದ ಬಳಿಕ ಸುಮಾರು 20 ಲಕ್ಷ ಟಿಟ್ಟರಿಗರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ತಮ್ಮ ಹೆಸರಿನ ಹಿಂದೆ ‘ಚೌಕಿದಾರ್’ ಎಂದು ಹಾಕಿಕೊಂಡಿದ್ದರು. ಇವರಲ್ಲಿ ಕಮಲ ಪಕ್ಷದ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಮಂತ್ರಿಗಳು ಹಾಗೂ ಕಾರ್ಯಕರ್ತರು ಸೇರಿದ್ದಾರೆ.
ಈ ಅಭಿಯಾನಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಖುಷಿಯಾಗಿರುವ ಪ್ರಧಾನಿ ಮೋದಿ ಅವರು ಇದನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದರು. ‘ನಿಮ್ಮ ಈ ಚೌಕಿದಾರ ದೃಢಚಿತ್ತದಿಂದಿದ್ದಾನೆ ಮತ್ತು ದೇಶದ ಸೇವೆಗೆ ಸದಾ ಸಿದ್ಧನಿದ್ದಾನೆ. ಆದರ ನಾನು ಒಂಟಿಯಲ್ಲ ಎಂದು ನನಗೆ ಇವತ್ತು ತಿಳಿಯಿತು. ಭ್ರಷ್ಟಾಚಾರ, ಅಸಮಾನತೆ, ಸಾಮಾಜಿಕ ಕೆಡುಕುಗಳ ವಿರುದ್ಧ ಹೋರಾಡುತ್ತಿರುವ ಎಲ್ಲರೂ ಚೌಕಿದಾರರೆ. ಇವತ್ತು ಪ್ರತಿಯೊಬ್ಬ ಭಾರತೀಯನೂ ‘ನಾನೂ ಚೌಕಿದಾರ’ ಎನ್ನುತ್ತಿದ್ದಾನೆ’ ಎಂದವರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
Your Chowkidar is standing firm & serving the nation.
But, I am not alone.
Everyone who is fighting corruption, dirt, social evils is a Chowkidar.
Everyone working hard for the progress of India is a Chowkidar.
Today, every Indian is saying-#MainBhiChowkidar
— Chowkidar Narendra Modi (@narendramodi) March 16, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.