Haryana Election: ತಪ್ಪಿದ ಟಿಕೆಟ್… ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಂಜಿತ್ ಚೌಟಾಲಾ
Team Udayavani, Sep 5, 2024, 3:03 PM IST
ಹರ್ಯಾಣ: ಹರ್ಯಾಣ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಗೊಂಡ ಬೆನ್ನಲ್ಲೇ ಬಿಜೆಪಿ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಇದೀಗ ರಾನಿಯಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ್ದಕೆ ರಂಜಿತ್ ಸಿಂಗ್ ಚೌಟಾಲಾ ಕೋಪಗೊಂಡಿದ್ದು ಸಂಪುಟ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ರಂಜಿತ್ ಸಿಂಗ್ ಚೌಟಾಲಾ ಅವರು ಮತ್ತೆ ರಾನಿಯಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು, ಆದರೆ ಬಿಜೆಪಿ ಅವರ ಸ್ಥಾನಕ್ಕೆ ಶಿಶ್ಪಾಲ್ ಕಾಂಬೋಜ್‌ಗೆ ಟಿಕೆಟ್ ನೀಡಿತು, ಇದರಿಂದಾಗಿ ಅಸಮಾಧಾನಗೊಂಡ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದರು.
ದಬ್ವಾಲಿಯಿಂದ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಆಫರ್ ನೀಡಿತ್ತು, ಆದರೆ ಅದನ್ನು ಚೌಟಾಲಾ ತಿರಸ್ಕರಿಸಿದ್ದು, ರಾನಿಯಾ ಕ್ಷೇತ್ರದಲ್ಲೇ ರೋಡ್ ಶೋ ನಡೆಸುವ ಮೂಲಕ ನನ್ನ ಶಕ್ತಿ ಪ್ರದರ್ಶಿಸುತ್ತೇನೆ ಎಂದು ರಂಜಿತ್ ಸಿಂಗ್ ಚೌತಾಲಾ ಹೇಳಿದ್ದಾರೆ.
ಚೌಟಾಲಾ ಅವರು ಮುಂಬರುವ ಚುನಾವಣೆಗೆ ರಾನಿಯಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ರಂಜಿತ್ ಸಿಂಗ್ ಚೌಟಾಲಾ ಯಾರು?
ರಂಜಿತ್ ಸಿಂಗ್ ಚೌಟಾಲಾ ಅವರು ಮಾಜಿ ಮುಖ್ಯಮಂತ್ರಿ ಓಂಪ್ರಕಾಶ್ ಚೌಟಾಲಾ ಅವರ ಸಹೋದರ ಮತ್ತು ದೇಶದ ಮಾಜಿ ಉಪಪ್ರಧಾನಿ ಚೌಧರಿ ದೇವಿ ಲಾಲ್ ಅವರ ಪುತ್ರ. 1987ರಲ್ಲಿ ಮೊದಲ ಬಾರಿಗೆ ರೋಡಿ ವಿಧಾನಸಭೆಯಿಂದ ಲೋಕಸಭೆಗೆ ಲೋಕಸಭೆಯಿಂದ ಸ್ಪರ್ಧಿಸಿ ಶಾಸಕರಾದರು. ಇದರ ನಂತರ, 1990 ರಲ್ಲಿ, ಅವರು ಹರಿಯಾಣದಿಂದ ರಾಜ್ಯಸಭಾ ಸಂಸದರಾಗಿ ಆಯ್ಕೆಯಾದರು.
2005 – 2009ರಲ್ಲಿ ಹರಿಯಾಣ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಹುದ್ದೆಯನ್ನು ಅಲಂಕರಿಸುವ ಅವಕಾಶ ಇವರಿಗೆ ಸಿಕ್ಕಿತು. ರಂಜಿತ್ ಚೌಟಾಲಾ ಅವರು 2019 ರಲ್ಲಿ ರಾನಿಯಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು ಇದಾದ ಬಳಿಕ ಬಿಜೆಪಿ ಸರ್ಕಾರವನ್ನು ಬೆಂಬಲಿಸುವ ಮೂಲಕ ಸಚಿವರಾದರು.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಿಸಾರ್‌ನಿಂದ ರಂಜಿತ್ ಸಿಂಗ್ ಚೌಟಾಲಾ ಅವರನ್ನು ಕಣಕ್ಕಿಳಿಸಿತ್ತು, ಆದರೆ ಕಾಂಗ್ರೆಸ್ ಅಭ್ಯರ್ಥಿ ಜೈಪ್ರಕಾಶ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಜೈಪ್ರಕಾಶ್, ರಂಜಿತ್ ಸಿಂಗ್ ಚೌಟಾಲಾ ಅವರನ್ನು 63,381 ಮತಗಳಿಂದ ಸೋಲಿಸುವ ಮೂಲಕ ಗೆಲುವು ಸಾಧಿಸಿಕೊಂಡಿದ್ದಾರೆ. ಚೌಟಾಲಾ ಅವರು ಹಿಸಾರ್ ಲೋಕಸಭೆಯ 9 ಸ್ಥಾನಗಳಲ್ಲಿ 3 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು.
ಇದನ್ನೂ ಓದಿ: Renukaswamy: ಅಯ್ಯೋ ಬಿಟ್ಟು ಬಿಡಿ ಎಂದರೂ ಬಿಡದ ಕಟುಕರು.. ರೇಣುಕಾಸ್ವಾಮಿ ಫೋಟೋ ವೈರಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.