ಮುಷ್ಕರ ವಿಸ್ತರಣೆಗೆ ಹರಿಯಾಣ ರಾಜ್ಯ ರಸ್ತೆ ಸಾರಿಗೆ ನೌಕರರ ನಿರ್ಧಾರ
Team Udayavani, Oct 25, 2018, 7:22 PM IST
ಚಂಡೀಗಢ : ತಮ್ಮ ಬೇಡಿಕೆ ಈಡೇರಿಸುವ ಬಗ್ಗೆ ಸರಕಾರದೊಂದಿಗಿನ ತಮ್ಮ ಮಾತುಕತೆ ಯಾವುದೇ ರೀತಿಯಲ್ಲಿ ಪ್ರಗತಿ ಕಾಣದ ಪ್ರಯುಕ್ತ ಹರಿಯಾಣ ರಾಜ್ಯ ರಸ್ತೆ ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ಅ.29ರ ವರೆಗೆ ವಿಸ್ತರಿಸಲು ನಿರ್ಧರಿಸಿರುವುದಾಗಿ ವರದಿಯಾಗಿದೆ.
ಹರಿಯಾಣ ರಾಜ್ಯ ರಸ್ತೆ ಸಾರಿಗೆ ನೌಕರರು ಕಳೆದ ಅ.16ರಿಂದ ಮುಷ್ಕರ ನಿರತರಾಗಿದ್ದಾರೆ. ಖಾಸಗಿ ಮಾಲಕರಿಂದ ಸರಕಾರ 700 ಬಸ್ಸುಗಳನ್ನು ಬಾಡಿಗೆಗೆ ಪಡೆದುಕೊಳ್ಳಲು ಮಾಡಿರುವ ನಿರ್ಧಾರವನ್ನು ನೌಕರರು ವಿರೋಧಿಸುತ್ತಿದ್ದಾರೆ.
ರಾಜ್ಯ ಸರಕಾರ 700 ಬಸ್ಸುಗಳನ್ನು ಖಾಸಗಿ ಮಾಲಕರಿಂದ ಬಾಡಿಗೆಗೆ ಪಡೆಯುವ ತನ್ನ ನಿರ್ಧಾರವನ್ನು ಕೈಬಿಡಲು ನಿರಾಕರಿಸಿದೆ; ಹಾಗಾಗಿ ನಮಗೆ ಈಗ ನಮ್ಮ ಮುಷ್ಕರವನ್ನು ವಿಸ್ತರಿಸುವುದಲ್ಲದೇ ಬೇರೆ ಉಪಾಯವೇ ಇಲ್ಲವಾಗಿದೆ ಎಂದು ಹರಿಯಾಣ ರಸ್ತೆ ಸಾರಿಗೆ ನೌಕರರ ಸಂಘಟನೆಯ ಸಂಚಾಲನ ಸಮಿತಿಯ ಸದಸ್ಯರಾಗಿರುವ ಬಲವಾನ್ ಸಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.