ತಿಂಗಳಿಗೆ 10 ಲಕ್ಷ ರೂ. ಮಧ್ಯಾವಧಿ ಪರಿಹಾರ ಕೇಳಿದ ಶಮಿ ಪತ್ನಿ
Team Udayavani, Apr 11, 2018, 3:26 PM IST
ಹೊಸದಿಲ್ಲಿ : ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧ ಕೌಟುಂಬಿಕ ಹಿಂಸೆಯ ಕೇಸು ದಾಖಲಿಸಿರುವ ಆತನ ಪತ್ನಿ ಹಸೀನ್ ಜಹಾನ್ ಮಧ್ಯಾವಧಿ ಪರಿಹಾರವಾಗಿ ತನಗೆ ತಿಂಗಳಿಗೆ 7 ಲಕ್ಷ ರೂ. ಮತ್ತು ಮಗುವಿಗೆ ತಿಂಗಳಿಗೆ 3 ಲಕ್ಷ ರೂ. ಸೇರಿದಂತೆ ಒಟ್ಟು 10 ಲಕ್ಷ ರೂ. ಮಾಸಿಕ ಪರಿಹಾರವನ್ನು ನ್ಯಾಯಾಲಯದಲ್ಲಿ ಆಗ್ರಹಿಸಿದ್ದಾಳೆ.
ಪತಿ ಮೊಹಮ್ಮದ್ ಶಮಿ, ಆತನ ತಾಯಿ, ಹಿರಿಯ ಸಹೋದರ, ಸಹೋದರಿ ಮತ್ತು ನಾದಿನಿಯ ವಿರುದ್ಧ ಹಸೀನ್ ಜಹಾನ್ ಕೌಟುಂಬಿಕ ಹಿಂಸೆಯ ಕೇಸನ್ನು ನ್ಯಾಯಾಲಯದಲ್ಲಿ ದಾಖಲಿಸಿದ್ದು ಇದರ ತುರ್ತನ್ನು ಮನಗಂಡಿರುವ ಕೋರ್ಟ್ ಬೇಗನೆ ವಿಚಾರಣೆ ನಡೆಸಲು ನಿರ್ಧರಿಸಿರುವುದಾಗಿ ಆಕೆಯ ವಕೀಲರು ಮಾಧ್ಯಮಕ್ಕೆ ತಿಳಿಸಿದ್ದಾರೆ. ದಾವೆಯನ್ನು ಜಯಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ಹಸೀನ್ ಜಹಾನ್ ಈ ಕೇಸಿಗೆ ಸಂಬಂಧಿಸಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಗಿದ್ದಳು. ಸುಮಾರು 15 ನಿಮಿಷ ಸಾಗಿದ ಮಾತುಕತೆಯಲ್ಲಿ ಮಮತಾ ಬ್ಯಾನರ್ಜಿ ತನ್ನನ್ನು ಬೆಂಬಲಿಸುವ ಭರವಸೆ ನೀಡಿರುವುದಾಗಿ ಹಸೀನ್ ಜಾಹನ್ ಹàಳಿಕೊಂಡಿದ್ದರು.
ಮೊಹಮ್ಮದ್ ಶಮೀ ಅವರು ಇಂಗ್ಲಂಡ್ ಉದ್ಯಮಿ ಮೊಹಮ್ಮದ್ ಭಾಯಿ ಅವರ ಆಣತಿಯ ಮೇರೆಗೆ ಪಾಕ್ ಮಹಿಳೆ ಅಲಿಷ್‌ಬಾ ಎಂಬಾಕೆಯನ್ನು ಭೇಟಿಯಾಗಿ ಆಕೆಯಿಂದ ಮ್ಯಾಚ್ ಫಿಕ್ಸಿಂಗ್ ಹಣ ಪಡೆದುಕೊಂಡಿದ್ದುದಾಗಿ ಹಸೀನ್ ಜಹಾನ್ ಆರೋಪಿಸಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: Live-In ಸಂಗಾತಿಯನ್ನು ಕೊಂದು ದೇಹವನ್ನು ಫ್ರಿಡ್ಜ್ ನಲ್ಲಿ ಇಟ್ಟು ಮನೆ ತೊರೆದ ಹಂತಕ
Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
PM-Kisan Samman; ರೈತರಿಗೆ 6000 ರೂ. ಸಿಗುವ ಯೋಜನೆಗೆ ಐ.ಡಿ. ಕಡ್ಡಾಯ : ಏನಿದು ರೈತ ಚೀಟಿ?
MUST WATCH
ಹೊಸ ಸೇರ್ಪಡೆ
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.