![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 3, 2024, 8:03 AM IST
ಲಕ್ನೋ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಮಂಗಳವಾರ ನಡೆದ ‘ಸತ್ಸಂಗ’ದ ವೇಳೆ ಸಂಭವಿಸಿದ ಕಾಲ್ತುಳಿತದ ಘೋರ ದುರಂತದಲ್ಲಿ 121 ಜನರು ಸಾವನ್ನಪ್ಪಿದ್ದಾರೆ.
ಸರ್ಕಾರಿ ಆಸ್ಪತ್ರೆಯೊಳಗೆ ಐಸ್ ಬ್ಲಾಕ್‌ಗಳ ಮೇಲೆ ಹಲವಾರು ದೇಹಗಳು ಬಿದ್ದಿರುವ ದೃಶ್ಯ ಕಂಡು ಬಂದಿದೆ. ಸಂತ್ರಸ್ತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು ಮೃತದೇಶಗಳನ್ನು ಮನೆಗಳಿಗೆ ಕೊಂಡೊಯ್ಯಲು ಸಾವಿರಾರು ಜನರು ಹೊರಗೆ ಕಾಯುತ್ತಿದ್ದಾರೆ.
ಧಾರ್ಮಿಕ ಬೋಧಕ ಭೋಲೆ ಬಾಬಾ ನಾರಾಯಣ ಹರಿ ಅವರ ‘ಸತ್ಸಂಗ’ಕ್ಕಾಗಿ ಸಿಕಂದರಾವು ಪ್ರದೇಶದ ಫುಲ್ರೈ ಗ್ರಾಮದ ಬಳಿ ಸಾವಿರಾರು ಜನರು ನೆರೆದಿದ್ದ ವೇಳೆ ಕಾಲ್ತುಳಿತ ಸಂಭವಿಸಿದೆ.
ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಕಾಲ್ತುಳಿತ ಸಂಭವಿಸಿದ್ದು ಪ್ರತ್ಯಕ್ಷದರ್ಶಿಗಳ ಪ್ರಕಾರ, ಸ್ಥಳದಲ್ಲಿ ಕನಿಷ್ಠ 10,000ಕ್ಕೂ ಹೆಚ್ಚು ಜನರಿದ್ದರು. ಬಾಬಾ ಹೊರಡುವಾಗ ಅವರ ಪಾದಗಳನ್ನು ಸ್ಪರ್ಶಿಸಲು ನೂಕು ನುಗ್ಗಲು ಉಂಟಾಗಿದೆ.
ಸಂಪೂರ್ಣ ಘಟನೆಯ ತನಿಖೆ: ಸಿಎಂ ಯೋಗಿ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಹತ್ರಾಸ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಆದಿತ್ಯನಾಥ್ ಮಂಗಳವಾರ, “ನಮ್ಮ ಸರ್ಕಾರವು ಈ ಘಟನೆಯ ತಳಮಟ್ಟದ ವರದಿ ಪಡೆಯುತ್ತದೆ. ಸಂಚುಕೋರರು ಮತ್ತು ಹೊಣೆಗಾರರಿಗೆ ಸೂಕ್ತ ಶಿಕ್ಷೆಯನ್ನು ನೀಡುತ್ತದೆ. ರಾಜ್ಯ ಸರ್ಕಾರವು ಈ ಸಂಪೂರ್ಣ ಘಟನೆಯನ್ನು ತನಿಖೆ ನಡೆಸುತ್ತಿದೆ. ಅವಘಡವೋ ಇಲ್ಲ ಪಿತೂರಿಯೋ ಎಂದು ನಾವು ನೋಡುತ್ತೇವೆ’ ಎಂದು ಹೇಳಿದ್ದಾರೆ.
ಮೂವರು ಸಚಿವರಾದ ಲಕ್ಷ್ಮೀ ನಾರಾಯಣ ಚೌಧರಿ, ಅಸಿಮ್ ಅರುಣ್ ಮತ್ತು ಸಂದೀಪ್ ಸಿಂಗ್ ಅವರನ್ನು ಘಟನೆ ನಡೆದ ಕೂಡಲೇ ಸ್ಥಳಕ್ಕೆ ಕಳುಹಿಸಲಾಗಿದೆ.
ದುರಂತದ ಬಗ್ಗೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಮೃತರ ಸಂಬಂಧಿಕರಿಗೆ ರೂ 2 ಲಕ್ಷ ಪರಿಹಾರ ಮತ್ತು ಗಾಯಗೊಂಡವರಿಗೆ ರೂ 50,000 ರೂ. ಪರಿಹಾರ ಘೋಷಿಸಿದ್ದಾರೆ.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.