‘ಮಾಡಬಾರದ್ದನ್ನು ಮಾಡಿದ್ದಕ್ಕೆ ನನಗೇ ನಾಚಿಕೆಯಾಗುತ್ತಿದೆ’: ನತಾಶ ಡೆತ್ ನೋಟ್ ನಲ್ಲೇನಿದೆ?
Team Udayavani, Jan 23, 2020, 6:33 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ದೆಹಲಿ: ಅಟ್ಲಾಸ್ ಸೈಕಲ್ ಕಂಪೆನಿಯ ಮಾಲಕ ಸಂಜಯ್ ಕಪೂರ್ ಅವರ ಪತ್ನಿ ನತಾಶಾ ಕಪೂರ್ ಮಂಗಳವಾರದಂದು ದೆಹಲಿಯ ಔರಂಗಜೇಬ್ ಲೇನ್ ನಲ್ಲಿರುವ ತಮ್ಮ ಬಂಗಲೆಯ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದರು ಮತ್ತು ಹೀಗೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ‘ಡೆತ್ ನೋಟ್’ ಒಂದನ್ನೂ ಸಹ ಬರೆದಿಟ್ಟಿದ್ದರು.
ನತಾಶಾ ಅವರ ಡೆತ್ ನೋಟ್ ನಲ್ಲಿ ಅವರು ಬರೆದುಕೊಂಡಿರುವ ಕೆಲವು ವಿಚಾರಗಳು ಅವರ ಆತ್ಮಹತ್ಯೆಗೆ ಅವರಲ್ಲಿ ಉಂಟಾಗಿದ್ದ ಪಾಪಪ್ರಜ್ಞೆಯೇ ಕಾರಣವಾಗಿತ್ತೇ ಎಂಬ ಸಂಶಯ ಮೂಡುವಂತೆ ಮಾಡಿದೆ.
57 ವರ್ಷದ ನತಾಶಾ ಅವರು ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದರು ಹಾಗೂ ಮನೆಯವರೆಲ್ಲರೂ ಚೆನ್ನಾಗಿರಬೇಕೆಂದು ಡೆತ್ ನೋಟ್ ನಲ್ಲಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.
ಆದರೆ ಆ ಡೆತ್ ನೋಟ್ ನಲ್ಲಿ ನತಾಶಾ ಅವರು ಬರೆದಿರುವ ಒಂದು ಅಂಶ ಮಾತ್ರ ಇದೀಗ ಕುತೂಹಲಕ್ಕೆ ಕಾರಣವಾಗಿದೆ. ‘ನನ್ನ ಜೀವನವನ್ನು ನಾನೇ ಕೊನೆಗೊಳಿಸುತ್ತಿದ್ದೇನೆ. ಬೇರೆ ಯಾರೂ ಇದಕ್ಕೆ ಜವಾಬ್ದಾರರಲ್ಲ. ಮಾಡಬಾರದಾಗಿದ್ದ ಕೆಲಸವೊಂದನ್ನು ನಾನು ಮಾಡಿದ್ದೇನೆ. ನನ್ನ ಕುರಿತಾಗಿ ನನಗೇ ನಾಚಿಕೆಯುಂಟಾಗುತ್ತಿದೆ. ನಿಮ್ಮೆಲ್ಲರನ್ನೂ ನಾನು ಪ್ರೀತಿಸುತ್ತೇನೆ, ಸಂಜಯ್, ನನ್ನ ಮಗಳು ಮತ್ತು ನನ್ನ ಮಗನನ್ನು ನಾನು ತುಂಬಾ ಪ್ರೀತಿಸುತ್ತೇನೆ, ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ’ ಎಂಬ ವಿಚಾರಗಳು ಡೆತ್ ನೋಟ್ ನಲ್ಲಿ ಉಲ್ಲೇಖವಾಗಿದೆ.
‘ಮಾಡಬಾರದ ಕೆಲಸ ಮಾಡಿರುವುದಕ್ಕೆ ನನ್ನ ಕುರಿತಾಗಿಯೇ ನನಗೆ ನಾಚಿಕೆಯುಂಟಾಗುತ್ತಿದೆ ಎಂದು ನತಾಶಾ ಅವರು ಬರೆದುಕೊಂಡಿರುವುದು, ಅವರನ್ನು ಯಾವುದೋ ಒಂದು ತಪ್ಪು ಬಹುವಾಗಿ ಕಾಡುತ್ತಿತ್ತು ಮತ್ತು ಆ ನೋವಿನಿಂದ ಹೊರಬರಲಾರದೆ ಅವರು ಆತ್ಮಹತ್ಯೆಗೆ ಒಳಗಾಗುವ ನಿರ್ಧಾರಕ್ಕೆ ಬಂದಿರಬಹುದೆಂಬ ವಾದವೊಂದು ಅವರ ಆಪ್ತವಲಯದಲ್ಲಿ ಇದೀಗ ಕೇಳಿಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.