ಮಾತಿಗೆ ಬಗ್ಗದಿದ್ದರೆ ದಂಡ; ಚೀನಕ್ಕೆ ಸಿಡಿಎಸ್ ಜ| ಬಿಪಿನ್ ರಾವತ್ ಎಚ್ಚರಿಕೆ
Team Udayavani, Aug 25, 2020, 6:30 AM IST
ಹೊಸದಿಲ್ಲಿ: ಮಾತುಕತೆಗಳು ಫಲಪ್ರದವಾಗದೆ ಲಡಾಖ್‌ನಲ್ಲಿ ಚೀನದ ದುಸ್ಸಾಹಸ ಮುಂದುವರಿದರೆ ಭಾರತವು ಸೇನಾ ಕಾರ್ಯಾಚರಣೆಯ ಮೂಲಕ ಉತ್ತರಿಸಲು ಸನ್ನದ್ಧವಾಗಿದೆ ಎಂದು ರಕ್ಷಣ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜ| ಬಿಪಿನ್ ರಾವತ್ ಎಚ್ಚರಿಸಿದ್ದಾರೆ.
ಹಲವು ಬಾರಿ ಮಾತುಕತೆ ನಡೆದರೂ ಚೀನ ತನ್ನ ನರಿ ಬುದ್ಧಿ ಯನ್ನು ಬಿಟ್ಟಿಲ್ಲ. ಮಾತುಕತೆ ವೇಳೆ ಎಲ್ಲ ಷರತ್ತುಗಳಿಗೂ ಒಪ್ಪಿದರೂ ಮತ್ತೆ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯ ಆಸುಪಾಸಿನಲ್ಲಿ ಮೂಲಸೌಕರ್ಯ ಅಭಿ ವೃದ್ಧಿಯಲ್ಲಿ ತೊಡಗಿದೆ ಎಂಬ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಜ| ರಾವತ್ ಅವರು ತೀಕ್ಷ್ಣ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಪೂರ್ಣ ಹಿಂದೆ ಸರಿಯದ ಚೀನ
ಹಲವು ಸುತ್ತುಗಳ ಸೇನಾ ಮತ್ತು ರಾಜತಾಂತ್ರಿಕ ಮಾತುಕತೆಗಳು ನಡೆದಿದ್ದರೂ ಗಡಿ ಬಿಕ್ಕಟ್ಟು ಶಮನಗೊಳಿಸುವಲ್ಲಿ ಪೂರ್ಣ ಯಶಸ್ಸು ಸಿಕ್ಕಿಲ್ಲ. ಗಾಲ್ವಾನ್ ಕಣಿವೆ ಪ್ರದೇಶ ದಿಂದ ಚೀನದ ಸೇನೆ ಹಿಂದಕ್ಕೆ ಸರಿದರೂ ಪ್ಯಾಂಗಾಂಗ್ ತೊ, ಡೆಪ್ಸಾಂಗ್ ಮತ್ತಿತರ ಪ್ರದೇಶಗಳಲ್ಲಿ ಹಿಂದೆ ಸರಿಯಲು ಒಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜ| ರಾವತ್ ಅವರ ಹೇಳಿಕೆಯು ಮಹತ್ವ ಪಡೆದಿದೆ.
ಚೀನಕ್ಕೆ ಸಡ್ಡು ಹೊಡೆಯಲು ಭಾರತ ಚಿಂತನೆ
ಮ್ಯಾನ್ಮಾರ್, ಪಾಕಿಸ್ಥಾನ ಮತ್ತು ಇರಾನ್‌ನಲ್ಲಿ ಸರಣಿ ಬಂದರು ನಿರ್ಮಿಸುವ ಮೂಲಕ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿರುವ ಚೀನಕ್ಕೆ ಸಡ್ಡು ಹೊಡೆಯಲು ಭಾರತ ಮುಂದಾಗಿದೆ. ಹಿಂದೂ ಮಹಾಸಾಗರ ಪ್ರದೇಶವನ್ನು ದಕ್ಷಿಣ ಚೀನ ಸಮುದ್ರದಂತೆ ಆಗಲು ಬಿಡಬಾರದು ಮತ್ತು ನ್ಯಾವಿಗೇಷನ್ ಮೇಲೆ ಯಾವುದೇ ನಿರ್ಬಂಧ ಉಂಟಾಗ ಬಾರದು ಎಂಬ ಉದ್ದೇಶದಿಂದ ಭಾರತವು ತನ್ನ ದ್ವೀಪ ಪ್ರದೇಶ ಗಳಲ್ಲಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಚಿಂತನೆ ನಡೆಸಿದೆ.
ಥೈಲಂಡ್ ಕೊಲ್ಲಿಯನ್ನು ಅಂಡಮಾನ್ ಸಮುದ್ರಕ್ಕೆ ಸಂಪರ್ಕಿ ಸುವ ಥಾಯ್ ಕಾಲುವೆ ನಿರ್ಮಾಣಕ್ಕೆ ಹಲವು ವರ್ಷಗಳ ಹಿಂದೆಯೇ ಥಾçಲಂಡ್ ನಿರ್ಧರಿಸಿತ್ತು. ಈಗ ಅದರ ನಿರ್ಮಾಣ ವನ್ನು ತ್ವರಿತಗತಿಯಲ್ಲಿ ಆರಂಭಿಸುವಂತೆ ಚೀನ ಕುಮ್ಮಕ್ಕು ನೀಡಲಾರಂಭಿಸಿದೆ. ಈ ಸುಳಿವು ದೊರೆತ ಹಿನ್ನೆಲೆಯಲ್ಲಿ ಭಾರತವೂ ದ್ವೀಪಪ್ರದೇಶಗಳ ಮೂಲಸೌಕರ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾರಂಭಿಸಿದೆ.
ಅಂಡಮಾನ್‌ನ ಉತ್ತರ ಭಾಗದ ಶಿಬ್‌ಪುರದಲ್ಲಿರುವ ಐಎನ್‌ಎಸ್ ಕೊಹಸ್ಸಾ ವಾಯುನೆಲೆ ಮತ್ತು ನಿಕೋಬಾರ್‌ನ ಕ್ಯಾಂಪ್‌ಬೆಲ್ ವಾಯುನೆಲೆಯನ್ನು ಪೂರ್ಣಪ್ರಮಾಣದ ಸಮರ ವಾಯುನೆಲೆಗಳನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸ ಲಾಗಿದೆ ಎಂದು ಹಿರಿಯ ಸೇನಾಧಿಕಾರಿಗಳು ತಿಳಿಸಿದ್ದಾರೆ. ಲಕ್ಷದ್ವೀಪದಲ್ಲಿನ ಅಗಟ್ಟಿ ಏರ್‌ಸ್ಟ್ರಿಪ್ ಅನ್ನೂ ಸೇನಾ ಕಾರ್ಯಾ ಚರಣೆಯ ಉದ್ದೇಶಕ್ಕಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸ ಲಾಗಿದೆ. ಆ ಮೂಲಕ ಬಂಗಾಲಕೊಲ್ಲಿಯ ಮಲಕ್ಕಾ ಸಂಧಿಯ ವರೆಗೆ ಮತ್ತು ಅರಬಿ ಸಮುದ್ರದ ಆಡೆನ್ ಕೊಲ್ಲಿಯ ವರೆಗಿನ ಪ್ರದೇಶದ ವರೆಗೆ ಹದ್ದುಗಣ್ಣು ಇರಿಸಲು ಭಾರತಕ್ಕೆ ಸಾಧ್ಯವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.