ಹಿಂದುತ್ವದ ಹೆಸರಲ್ಲಿ ತಾಲಿಬಾನ್ ಆರಂಭಿಸಿದ್ದಾರೆ? ತರೂರ್ ಪ್ರಶ್ನೆ!
Team Udayavani, Jul 18, 2018, 11:07 AM IST
ತಿರುವನಂತಪುರಂ: ಹಿಂದು ಪಾಕಿಸ್ಥಾನ ಎಂಬ ಹೇಳಿಕೆ ನೀಡಿ ಬಿಜೆಪಿಯ ತೀವ್ರ ಪ್ರತಿಭಟನೆ ಎದುರಿಸುತ್ತಿರುವ ಸಂಸದ ಶಶಿ ತರೂರ್ ಮತ್ತೆ ಕಿಡಿ ಕಾರಿದ್ದು, ಅವರೇನು ಹಿಂದುತ್ವದ ಹೆಸರಿನಲ್ಲಿ ತಾಲಿಬಾನ್ ಶುರು ಮಾಡಲು ಉದ್ದೇಶಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರು ನನ್ನನ್ನು ಪಾಕಿಸ್ಥಾನಕ್ಕೆ ಹೋಗಲಿ ಎನ್ನುತ್ತಿದ್ದಾರೆ. ನಾನು ಅವರಂತೆ ಹಿಂದು ಅಲ್ಲ ಎನ್ನಲು ಅವರು ಯಾರು? ನನಗೆ ನನ್ನ ದೇಶದಲ್ಲಿ ಉಳಿಯಲು ಹಕ್ಕಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ತಿರುವನಂತಪುರಂನ ತರೂರ್ ಕಚೇರಿ ಎದುರು ಮಂಗಳವಾರ ನೂರಾರು ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡು ಕಪ್ಪು ಬಾವುಟಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದ್ದರು. ತರೂರ್ ಪಾಕಿಸ್ಥಾನಕ್ಕೆ ತೆರಳಲಿ ಎಂದಿದ್ದರು.
ಕಚೇರಿಯ ಮೇಲೆ ದಾಳಿ ನಡೆಸಿದ್ದ ಬಿಜೆಪಿ ಕಾರ್ಯಕರ್ತರು ಫಲಕಗಳ ಮೇಲೆ ಮಸಿ ಎರಚಿ ಆಕ್ರೋಶ ಹೊರ ಹಾಕಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…