ಯೋಧನಿಗೆ ಸಿಕ್ಕಿದ್ದು “ಅಕ್ರಮ ವಲಸಿಗ’ ಪಟ್ಟ!
Team Udayavani, Oct 2, 2017, 7:10 AM IST
ಗುವಾಹಟಿ: ಬರೋಬ್ಬರಿ 30 ವರ್ಷಗಳ ಕಾಲ ದೇಶಕ್ಕಾಗಿ ಸೇವೆ ಸಲ್ಲಿಸಿದ ಅಸ್ಸಾಂ ಮೂಲದ ನಿವೃತ್ತ ಯೋಧರೊಬ್ಬರಿಗೆ ಸಿಕ್ಕಿದ್ದು “ಅಕ್ರಮ ಬಾಂಗ್ಲಾದೇಶಿ ವಲಸಿಗ’ ಎಂಬ ಪಟ್ಟ! ಅಷ್ಟೇ ಅಲ್ಲ, ಅವರ ವಿರುದ್ಧ ಅಸ್ಸಾಂ ಪೊಲೀಸರು ದೂರನ್ನೂ ದಾಖಲಿಸಿಕೊಂಡಿದ್ದಾರೆ.
ತಾನು ಬಾಂಗ್ಲಾ ವಲಸಿಗನಲ್ಲ, ಭಾರತೀಯ ನಾಗರಿಕ ಎಂದು ನಿವೃತ್ತ ಜೆಸಿಒ ಮೊಹಮ್ಮದ್ ಅಜ್ಮಲ್ ಹಖ್ ಅವರು ಎಷ್ಟೇ ಹೇಳಿದರೂ ಯಾರೂ ಕೇಳುತ್ತಿಲ್ಲ. ಗಾಯದ ಮೇಲೆ ಬರೆ ಎಂಬಂತೆ ವಿದೇಶಿಗರ ನ್ಯಾಯಾಧಿಕರಣವು ಇದೀಗ ಅವರಿಗೆ ನೀವು ಭಾರತೀಯ ನಾಗರಿಕ ನೆಂದು ಸಾಬೀತುಪಡಿಸಿ ಎಂದು ಸೂಚಿಸಿ ನೋಟಿಸ್ ಕೂಡ ಜಾರಿ ಮಾಡಿದೆ. ಹಖ್ ಅವರು 30 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, 2016ರ ಸೆ.30ರಂದು ನಿವೃತ್ತಿಯಾಗಿದ್ದರು. ಈ ಕುರಿತು ಮಾತನಾಡಿ ರುವ ಹಖ್, “ನನ್ನ ವಿರುದ್ಧ 1871ರಲ್ಲಿ ಸೂಕ್ತ ದಾಖಲೆಗಳಿಲ್ಲದೇ ಭಾರತಕ್ಕೆ ಬಂದಿರುವ ಅಕ್ರಮ ವಲಸಿಗ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ. ದೇಶ ಕ್ಕಾಗಿ 30 ವರ್ಷ ಸೇವೆ ಸಲ್ಲಿಸಿದ ನನಗೆ ಇಂತಹುದೊಂದು ಅವಮಾನವನ್ನು ತಡೆದು ಕೊಳ್ಳಲಾಗುತ್ತಿಲ್ಲ. ಈ ಎಲ್ಲ ಘಟನೆಗಳಿಂದ ನನ್ನ ಹೃದಯ ಚೂರಾಗಿದೆ. ನಾನು ಬಾಂಗ್ಲಾದೇಶಿ ಯಾಗಿದ್ದರೆ ಭಾರತೀಯ ಸೇನೆಯನ್ನೇಕೆ ಸೇರುತ್ತಿದ್ದೆ’ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ, ಹಖ್ ಅವರ ಪರ ವಕೀಲರು ಈ ವಿಚಾರವನ್ನು ಟ್ವಿಟರ್ನಲ್ಲಿ ಪ್ರಸ್ತಾವಿಸಿದ್ದು, ಸೇನೆಯ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೇನೆಯು, ನಿವೃತ್ತ ಯೋಧನಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.