ರಕ್ಷಣಾ ಪಾವತಿ: 3 ಖಾಸಗಿ ಬ್ಯಾಂಕ್ಗಳಿಗೆ ಅವಕಾಶ
Team Udayavani, Jul 8, 2022, 6:35 AM IST
ನವದೆಹಲಿ: ರಕ್ಷಣಾ ಸಚಿವಾಲಯ ಇನ್ನು ಮುಂದೆ ನಡೆಸುವ ಸಾಗರೋತ್ತರ ವಹಿವಾಟುಗಳನ್ನು ಮೂರು ಖಾಸಗಿ ಬ್ಯಾಂಕ್ಗಳ ಮೂಲಕ ನಡೆಸಲಿದೆ. ಎಚ್ಡಿಎಫ್ ಸಿ ಬ್ಯಾಂಕ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್ ಮತ್ತು ಆ್ಯಕ್ಸಿಸ್ ಬ್ಯಾಂಕ್ಗಳ ಮೂಲಕ ಮಿಲಿಟರಿ ಹಾರ್ಡ್ವೇರ್ ಖರೀದಿಗೆ ಸಂಬಂಧಿಸಿದಂತೆ ಪಾವತಿ ಪ್ರಕ್ರಿಯೆ ನಡೆಸಲಿದೆ.
ಇದುವರೆಗೆ ಇಂಥ ವಹಿವಾಟುಗಳನ್ನು ಆಯ್ದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಮೂಲಕವೇ ನಡೆಸಲಾಗುತ್ತಿತ್ತು. ಅವುಗಳ ಮೂಲಕವೇ ಸಾಲ ಖಾತರಿ ಪತ್ರಗಳನ್ನು ನೀಡುವುದು ಮತ್ತು ನೇರ ಬ್ಯಾಂಕ್ಗೆ ಹಣದ ವರ್ಗಾವಣೆ ಸೇರಿದಂತೆ ಹಲವು ವಿತ್ತೀಯ ಸೇವೆಗಳನ್ನು ನಡೆಸಲಾಗುತ್ತಿತ್ತು.
ಮೂರು ಖಾಸಗಿ ಬ್ಯಾಂಕ್ಗಳ ಮೂಲಕ ಅದೇ ಮಾದರಿ ಸೇವೆಯನ್ನು ಮುಂದುವರಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.