10 ನಿಮಿಷ ತಡವಾಗಿ ಬಂದು ನೀಟ್ ಪರೀಕ್ಷೆ ತಪ್ಪಿಸಿಕೊಂಡ!
ಈ ಮಾರ್ಗದಲ್ಲಿ ಸಂಚಾರ ದಟ್ಟಣೆಯಿದ್ದಿದ್ದರಿಂದ 6 ಗಂಟೆ ತಡವಾಯಿತು.
Team Udayavani, Sep 15, 2020, 12:04 PM IST
ಕೋಲ್ಕತ್ತಾ: ಬಹುಶಃ ದುರದೃಷ್ಟವೆಂದರೆ ಇದೇ ಇರಬೇಕು. ತಿಂಗಳಾನುಗಟ್ಟಲೆ ನೀಟ್ ಪರೀಕ್ಷೆಗೆ ತಯಾರಿ ನಡೆಸಿದ್ದ ಬಿಹಾರದ ದರ್ಭಾಂಗ ಜಿಲ್ಲೆಯ ವಿದ್ಯಾರ್ಥಿಯೊಬ್ಬರು ಕೇವಲ 10 ನಿಮಿಷ ತಡವಾಗಿದ್ದಕ್ಕೆ, ಪರೀಕ್ಷೆಗೆ ಪ್ರವೇಶ ಪಡೆದಿಲ್ಲ!
ಕೋಲ್ಕತ್ತಾದ ಸಾಲ್ಟ್ಲೇಕ್ ಪರೀಕ್ಷಾ ಕೇಂದ್ರದ ಅಧಿಕಾರಿಗಳು, ಕೇವಲ ಹತ್ತೇ ನಿಮಿಷ ತಡವಾಗಿದ್ದಕ್ಕೆ 700 ಕಿ.ಮೀ. ಪ್ರಯಾಣಿಸಿ ಬಂದಿದ್ದ ಸಂತೋಷ ಕುಮಾರ್ ಯಾದವ್‌ರನ್ನು ಒಳಗೆ ಬಿಟ್ಟಿಲ್ಲ! ಇದು ವಿದ್ಯಾರ್ಥಿಯನ್ನು ಬಹಳ ನೋವಿಗೀಡು ಮಾಡಿದೆ. ತಾನು ಪರಿಪರಿಯಾಗಿ ಪ್ರಾರ್ಥಿಸಿದರೂ ಪ್ರವೇಶ ನೀಡಲಿಲ್ಲ. ತನ್ನ ತಿಂಗಳಾನುಗಟ್ಟಲೇ ಪರಿಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ದುಃಖಿಸಿದ್ದಾರೆ.
ಸಂತೋಷ್ ಹೇಳುವ ಪ್ರಕಾರ, ಅವರು ಶನಿವಾರ ಬೆಳಗ್ಗೆ 8 ಗಂಟೆಗೆ ದರ್ಭಾಂಗದಿಂದ ಮುಜಫರಪುರಕ್ಕೆ ಬಸ್ ಹತ್ತಿದ್ದರು. ಅಲ್ಲಿಂದ ಪಾಟ್ನಾಕ್ಕೆ ಬಸ್ ಹಿಡಿದರು. ಈ ಮಾರ್ಗದಲ್ಲಿ ಸಂಚಾರ ದಟ್ಟಣೆಯಿದ್ದಿದ್ದರಿಂದ 6 ಗಂಟೆ ತಡವಾಯಿತು. ಪಾಟ್ನಾದಿಂದ ಮತ್ತೆ ಕೋಲ್ಕತಕ್ಕೆ ಬಸ್ ಹಿಡಿದರು.
ಕೋಲ್ಕತದ ಸೀಲ್ಡಾ ನಿಲ್ದಾಣಕ್ಕೆ ಭಾನುವಾರ ಮಧ್ಯಾಹ್ನ 1.06ಕ್ಕೆ ನಿಮಿಷಕ್ಕೆ ತಲುಪಿದರು. ಅಲ್ಲಿಂದ ಟ್ಯಾಕ್ಸಿಯಲ್ಲಿ ಹೊರಟರು, ಕೇಂದ್ರ ತಲುಪುವಾಗ 1.40. ಪರೀಕ್ಷೆ ಶುರುವಾಗುವುದು 2 ಗಂಟೆಯಾದರೂ, ನಿಯಮಗಳ ಪ್ರಕಾರ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಲು 1.30 ಅಂತಿಮ ಗಡುವು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahayuti Claim: ಮಹಾರಾಷ್ಟ್ರಕ್ಕಾಗಿ ನಾವು ಮೂವರು ಒಟ್ಟಾಗಿ ಕೆಲಸ ಮಾಡುತ್ತೇವೆ: ಫಡ್ನವೀಸ್
Panaji: ಸಂತ ಫ್ರಾನ್ಸಿಸ್ ಜೇವಿಯರ್ ಹಬ್ಬ ಆಚರಣೆ
Tragedy: ವಾಕಿಂಗ್ ಮುಗಿಸಿ ಬರುವಷ್ಟರಲ್ಲಿ ತಂದೆ, ತಾಯಿ, ಸಹೋದರಿಯ ಬರ್ಬರ ಹತ್ಯೆ
Bengal; 104 ವರ್ಷದ ವೃದ್ಧನಿಗೆ ಕೊನೆಗೂ ಜೈಲು ವಾಸದಿಂದ ಮುಕ್ತಿ!!
Mahayuti; ಮತ್ತೊಮ್ಮೆ ಮಹಾ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಆಯ್ಕೆ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.