‘ಪತ್ನಿ ಪೀಡಿತರ ಸಂಘ’ದ ಮುಖ್ಯಸ್ಥ ಲೋಕಸಭೆಗೆ ಸ್ಪರ್ಧೆ!
ಪತ್ನಿ ಪೀಡಿತರ ಎನ್.ಜಿ.ಒ. ಮುಖ್ಯಸ್ಥ ದಶರಥ್ ಗೆ ಸಂಸತ್ ಪ್ರವೇಶಿಸುವ ಹಂಬಲ!
Team Udayavani, Apr 3, 2019, 12:37 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ : Representative Image Used
ಅಹಮ್ಮದಾಬಾದ್: ರೈತ ಸಂಘದವರು, ಕಲಾವಿದರು, ಮಾಜೀ ಸೈನಿಕರು, ನಿವೃತ್ತ ಕ್ರೀಡಾಪಟುಗಳು ಹೀಗೆ ಸಮಾಜದ ವಿವಿಧ ವರ್ಗಗಗಳ ಜನರು ಚುನಾವಣೆಗೆ ನಿಲ್ಲುವುದನ್ನು ನೀವು ಕೇಳಿಯೇ ಇರುತ್ತೀರಿ. ಹಾಗೆಯೇ ಇಲ್ಲೊಬ್ಬರು ಪತ್ನಿ ಪೀಡಿತರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತನ್ನ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ!
‘ಆಖಿಲ ಭಾರತೀಯ ಪತ್ನಿ ಅತ್ಯಾಚಾರ ವಿರೋಧಿ ಸಂಘ’ (‘Akhil Bhartiya Patni Atyachar Virodhi Sangh’) ಎಂಬ ಸರಕಾರೇತರ ಸಂಘಟನೆಯನ್ನು (NGO) ನಡೆಸುತ್ತಿರುವ ಧಶರಥ್ ದೇವ್ದಾ ಎಂಬ ಮಹಾನುಭಾವನೇ ಚುನಾವಣೆಗೆ ಸ್ಪರ್ಧಿಸುತ್ತಿರುವ ವ್ಯಕ್ತಿ. ಈತ ಮಂಗಳವಾರದಂದು ಅಹಮ್ಮದಾಬಾದ್ ಉತ್ತರ ಲೋಕಸಭಾ ಕ್ಷೇತ್ರದಿಂದ ತನ್ನ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಮತ್ತು ತಾನು ಈ ಬಾರಿ ಸಂಸತ್ತಿಗೆ ಆಯ್ಕೆಗೊಂಡರೆ ತಮ್ಮ ತಮ್ಮ ಪತ್ನಿಯರಿಂದ ನೊಂದಿರುವ ಪುರುಷರ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುವುದಾಗಿ ಧಶರಥ್ ಭರವಸೆ ನೀಡಿದ್ದಾರೆ. ಸುಳ್ಳು ವರದಕ್ಷಿಣೆ ಪ್ರಕರಣದಲ್ಲಿ ಸಿಲುಕಿ ತಮ್ಮ ಪತ್ನಿ ಹಾಗೂ ಅವರ ಹೆತ್ತವರ ಕಡೆಯಿಂದ ಹಿಂಸೆ ಅನುಭವಿಸುವ ಪತಿ ಮಹಾಶಯರ ಪರವಾಗಿ ನನ್ನ ಹೋರಾಟ ಎಂದು ದಶರಥ್ ಅವರು ನಾಮಪತ್ರ ಸಲ್ಲಿಕೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ದಶರಥ್ ದೇವ್ದಾ ಅವರ ಈ ಎನ್.ಜಿ.ಒ. 69,000 ಸದಸ್ಯರನ್ನು ಹೊಂದಿದೆಯಂತೆ. ಇದು ದಶರಥ್ ಅವರಿಗೆ ಮೂರನೇ ಚುನಾವಣೆ. 2014ರ ಲೋಕಸಭೆ ಹಾಗೂ 2017ರಲ್ಲಿ ಗುಜರಾತ್ ವಿಧಾನಸಭೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕ್ರಮವಾಗಿ 2300 ಮತ್ತು 400 ಮತಗಳಷ್ಟೇ ಲಭಿಸಿದ್ದವು. ಆದರೆ ಛಲ ಬಿಡದ ದಶರಥ್ ಈ ಬಾರಿಯೂ ಪ್ರಧಾನಿ ಮೋದಿ ತವರಿನಿಂದ ‘ಹ್ಯಾಟ್ರಿಕ್’ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
‘ನನ್ನದು ಮನೆ ಮನೆ ಪ್ರಚಾರ, ನಾನು ಇತರರಂತೆ ಹಣದ ರಾಜಕೀಯ ಮಾಡುವುದಿಲ್ಲ. ಗಂಡಸರಿಗೂ ಸಮಾನ ಹಕ್ಕು ದೊರಕಿಸಿಕೊಡುವ ವಾಗ್ದಾನವನ್ನು ನನ್ನ ಮನೆಮನೆ ಭೇಟಿ ಪ್ರಚಾರ ಸಂದರ್ಭದಲ್ಲಿ ನೀಡುತ್ತಿದ್ದೇನೆ. ಐಪಿಸಿ ಸೆಕ್ಷನ್ 498 (ಗೃಹ ಹಿಂಸೆ) ಕಾಯ್ದೆಯನ್ನು ದುರ್ಬಲಕೆ ಮಾಡಿಕೊಂಡು ತಮ್ಮ ಪತ್ನಿ ಹಾಗೂ ಆಕೆಯ ಕುಟುಂಬ ಸದಸ್ಯರಿಂದ ಹಿಂಸೆ ನುಭವಿಸುತ್ತಿರುವ ಗಂಡಂದಿರ ಪರವಾಗಿ ನನ್ನ ಧ್ವನಿ ಇರುತ್ತದೆ ಎಂದು ದಶರಥ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಗೃಹ ಹಿಂಸೆ ಕಾನೂನನ್ನು ಪರಿಷ್ಕರಿಸಬೇಕಾದ ಅಗತ್ಯತೆಯನ್ನೂ ಸಹ ದಶರಥ್ ಅವರು ಒತ್ತಿ ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
MUST WATCH
ಹೊಸ ಸೇರ್ಪಡೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.