NCRB Report ಹೃದಯಾಘಾತ ಶೇ. 12ರಷ್ಟು ಹೆಚ್ಚಳ
Team Udayavani, Dec 5, 2023, 7:00 AM IST
ಹೊಸದಿಲ್ಲಿ: ಕೊರೊನಾ ಕಾಲಘಟ್ಟದ ಬಳಿಕ ಭಾರತದಲ್ಲಿ ಹೃದಯಾಘಾತ ಪ್ರಕರಣಗಳು ಏರಿಕೆ ಕಾಣುತ್ತಿವೆ ಎನ್ನುವ ಚರ್ಚೆಗಳ ನಡುವೆಯೇ 2022ರಲ್ಲಿ ಹೃದಯಾಘಾತ ಪ್ರಕರಣಗಳು ಶೇ. 12ರಷ್ಟು ಹೆಚ್ಚಿವೆ ಎನ್ನುವ ವರದಿ ಬಹಿರಂಗಗೊಂಡಿದೆ.
ನ್ಯಾಶನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ (ಎನ್ಸಿಆರ್ಬಿ)ದ ವರದಿಗಳ ಪ್ರಕಾರ 2020ರಲ್ಲಿ 28,579 ಹಾಗೂ 2021ರಲ್ಲಿ 28,411 ಹೃದಯಾ ಘಾತ ಪ್ರಕರಣಗಳು ವರದಿಯಾಗಿದ್ದವು. ಇದು 2022ರಲ್ಲಿ ಶೇ. 12ರಷ್ಟು ಏರಿಕೆ ಕಂಡು 32,457ಕ್ಕೆ ತಲುಪಿದೆ ಎಂದು ವರದಿ ತಿಳಿಸಿದೆ.
ಇನ್ನು ಹೃದಯ ಸ್ತಂಭನ ಸಹಿತ ದಿಢೀರ್ ಸಾವಿನ ಪ್ರಮಾಣವೂ ಶೇ. 10ರಷ್ಟು ಹೆಚ್ಚಿದ್ದು, 50,739ರಿಂದ 56,450ಕ್ಕೆ ಏರಿಕೆಯಾಗಿದೆ ಎಂದಿದೆ.
ಕರ್ನಾಟಕದಲ್ಲಿ ಮಹಿಳಾ ದೌರ್ಜನ್ಯ ಹೆಚ್ಚಳ
ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಿದ್ದು 2021ರಲ್ಲಿ 4.28 ಲಕ್ಷವಿದ್ದ ಪ್ರಕರಣಗಳು 2022ರಲ್ಲಿ 4.45 ಲಕ್ಷಕ್ಕೆ ಏರಿದೆ. ಅಂದರೆ ಪ್ರತೀ ತಾಸಿಗೆ 51 ಎಫ್ಐಆರ್ ದಾಖಲಾದಂತಾಗಿದೆ. ಕರ್ನಾಟಕದಲ್ಲಿ 2021ರಲ್ಲಿ 14,468 ಆಗಿದ್ದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು 2022ರಲ್ಲಿ 17,813ಕ್ಕೆ ಏರಿಕೆಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.