ರೈಲು ಫುಟ್‌ಬೋರ್ಡ್‌ನಲ್ಲಿ ಸೆಲ್ಫಿ: 2 ಸಾವಿರ ರೂ. ದಂಡ
Team Udayavani, Jun 24, 2018, 6:00 AM IST
ಕೊಯಮತ್ತೂರು: ರೈಲು ಹತ್ತಿರ ಬರುತ್ತಿದ್ದಂತೆ ಅದರ ಮುಂದೆ ಸೆಲ್ಫಿ ಕ್ಲಿಕ್ಕಿಸಿ ಕೊಂಡು ಸ್ಟೇಟಸ್ ಹಾಕಿಕೊಳ್ಳುವ ಯೋಚನೆ ಮಾಡುವವರೇ ಜೋಕೆ! ಇನ್ನು ಮುಂದೆ ಅಂಥ “ಸಾಹಸ’ಕ್ಕೇನಾದರೂ ಮುಂದಾದರೆ ದಂಡ ಅಥವಾ ಜೈಲುವಾಸ ಖಚಿತ.
ಚಲಿಸುತ್ತಿರುವ ರೈಲಿನ ಫುಟ್‌ಬೋರ್ಡ್ ಮೇಲೆ ನಿಂತು ಮತ್ತು ರೈಲು ಸಮೀಪಿಸುವಾಗ ಹಳಿಯ ಬಳಿ ನಿಂತು ಸೆಲ್ಫಿà ಕ್ಲಿಕ್ಕಿಸಿಕೊಳ್ಳುವ ಪ್ರಯಾಣಿಕರಿಗೆ ತಲಾ 2,000 ರೂ. ದಂಡ ವಿಧಿಸಲು ದಕ್ಷಿಣ ವಿಭಾಗೀಯ ರೈಲ್ವೇ ನಿರ್ಧರಿಸಿದೆ. ಸೆಲ್ಫಿ ಗೀಳಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚು ತ್ತಿರುವ ಹಿನ್ನೆಲೆ ಯಲ್ಲಿ ಯುವ ಪ್ರಯಾಣಿಕರಿಗೆ ಕಠಿನ ಎಚ್ಚರಿಕೆ ನೀಡುವ ಸಲುವಾಗಿ ಇಂಥ ನಿರ್ಧಾರ ತೆಗೆದು ಕೊಳ್ಳಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕೊಯ ಮತ್ತೂರು ರೈಲ್ವೇ ಜಂಕ್ಷನ್ ಮ್ಯಾನೇಜರ್ ಸೆಂಥಿಲ್ ವೇಲ್, ಸೇಲಂ ವಿಭಾಗದಲ್ಲಿ ಬರುವ ಎಲ್ಲ ಸ್ಟೇಷನ್ ಮಾಸ್ಟರ್‌ಗಳು ಮತ್ತು ಮ್ಯಾನೇಜರ್‌ಗಳಿಗೆ ಈಗಾಗಲೇ ಈ ಕುರಿತು ಸುತ್ತೋಲೆ ರವಾನಿಸಲಾಗಿದೆ. ರೈಲು, ರೈಲ್ವೇ ನಿಲ್ದಾಣ, ರೈಲ್ವೇ ಹಳಿಗಳ ಬಳಿ ಸೆಲ್ಫಿ ದುರಂತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ದುರಂತಗಳಿಗೆ ಕಡಿವಾಣ ಹಾಕುವ ಸಲುವಾಗಿಯೇ ಈ ಕ್ರಮ ಕೈಗೊಂಡಿದ್ದೇವೆ. ಸೆಲ್ಫಿ ತೆಗೆದದ್ದು ಕಂಡುಬಂದಲ್ಲಿ 2,000 ರೂ. ದಂಡ ವಿಧಿಸಲಾಗುವುದು. ಅದೇ ವ್ಯಕ್ತಿ ಮತ್ತೆ ಅದೇ ತಪ್ಪು ಮಾಡಿದರೆ ಆತನಿಗೆ 6 ತಿಂಗಳ ಸಜೆ ವಿಧಿಸಲಾಗುವುದು ಎಂದಿದ್ದಾರೆ.
ಕೊಯಮತ್ತೂರು ರೈಲು ನಿಲ್ದಾಣದಲ್ಲಿ ಶುಕ್ರವಾರದಿಂದಲೇ ಈ ನಿಯಮ ಜಾರಿಗೆ ಬಂದಿದ್ದು, ಮೊದಲ ದಿನವಾದ ಕಾರಣ ಪ್ರಯಾ ಣಿಕರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ. ಇನ್ನು ಮುಂದೆ ನಿಯಮ ಪ್ರಕಾರ ದಂಡ ವಿಧಿಸುತ್ತೇವೆ ಎಂದೂ ಅವರು ಹೇಳಿದ್ದಾರೆ. ರೈಲ್ವೇಯ ಈ ನಿರ್ಧಾರವನ್ನು ಪ್ರಯಾಣಿಕರೂ ಸ್ವಾಗತಿಸಿದ್ದು, ನಮ್ಮ ಸುರಕ್ಷತೆಗಾಗಿ ಈ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದಿದ್ದಾರೆ.
ಗೋವಾದಲ್ಲಿ 24 “ನೋ ಸೆಲ್ಫಿ ಝೋನ್’
ಗೋವಾದ ಬೀಚ್‌ಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ನೀರುಪಾಲಾಗುವಂಥ ಘಟನೆಗಳು ಹೆಚ್ಚುತ್ತಿರುವ ಕಾರಣ ಇಲ್ಲಿ 24 “ನೋ ಸೆಲ್ಫಿ ವಲಯ’ಗಳನ್ನು ಗುರುತಿಸಲಾಗಿದೆ. ಸರಕಾರ ನೇಮಿಸಿರುವ ಜೀವರಕ್ಷಕ ಸಂಸ್ಥೆಯು ಈ ವಲಯಗಳನ್ನು ಗುರುತಿಸಿದ್ದು, ಈ ಪ್ರದೇಶಗಳಲ್ಲಿ ಸೆಲ್ಫಿಗೆ ನಿಷೇಧ ಹೇರಲಾಗುತ್ತದೆ ಎಂದು ದೃಷ್ಟಿ ಮೆರೈನ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರವಿಶಂಕರ್ ತಿಳಿಸಿದ್ದಾರೆ. ಬಾಗಾ, ಡೋನಾ ಪೌಲಾ ಜೆಟ್ಟಿ, ಸಿಂಕ್ವೆರಿಮ್ ಫೋರ್ಟ್, ಅಂಜುನಾ, ವಗಾತರ್, ಮೋರ್ಜಿಮ್, ಅಶ್ವೆಮ್, ಅರಂಬೋಳ್, ಕೆರಿಮ್ ಸಹಿತ 24 ಪ್ರದೇಶಗಳನ್ನು ಸೆಲ್ಫಿ ನಿಷೇಧ ವಲಯ ಎಂದು ಗುರುತಿಸಿದ್ದೇವೆ ಎಂದೂ ಹೇಳಿದ್ದಾರೆ. ಜತೆಗೆ ಈಗಾಗಲೇ ಎಲ್ಲ ಬೀಚ್‌ಗಳಲ್ಲಿ “ನೋ-ಸ್ವಿಮ್ ವಲಯ’ (ಈಜು ನಿಷೇಧಿತ ಪ್ರದೇಶ)ಗಳೆಂದು ಗುರುತಿಸಿ, ಅಲ್ಲಿ ಈಜಾಡದಂತೆ ಎಚ್ಚರಿಕೆ ನೀಡಲು ಕೆಂಪು ಬಾವುಟಗಳನ್ನು ಅಳವಡಿಸಲಾಗಿದೆ ಎಂದೂ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.