ಭಾರೀ ಮಳೆಗೆ 12 ಸಾವು
Team Udayavani, Sep 1, 2021, 6:50 AM IST
ಹೊಸದಿಲ್ಲಿ: ದೇಶದೆಲ್ಲೆಡೆ ನೈಋತ್ಯ ಮುಂಗಾರು ಮಾರುತಗಳು ಮತ್ತೆ ಚುರುಕಾಗಿದ್ದು ತಮ್ಮ ಆರ್ಭಟವನ್ನು ಮುಂದುವರಿಸಿವೆ. ಅದರ ಪರಿಣಾಮವಾಗಿ, ಮಹಾರಾಷ್ಟ್ರ, ದಿಲ್ಲಿ, ರಾಜಸ್ಥಾನ, ಗುಜರಾತ್, ತೆಲಂಗಾಣಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಹಲವಾರು ಪ್ರಾಂತ್ಯಗಳು ಜಲಾವೃತವಾಗಿವೆ. ವಿವಿಧ ರಾಜ್ಯಗಳಲ್ಲಿ ಒಟ್ಟಾರೆ 12 ಜನ ಸಾವಿಗೀಡಾಗಿದ್ದಾರೆ.
ಇನ್ನು, ದಿಲ್ಲಿ ರಾಜಧಾನಿ ಪ್ರಾಂತ್ಯದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಆ ಪ್ರಾಂತ್ಯದಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಮಹಾರಾಷ್ಟ್ರ ಅಲ್ಲೋಲ ಕಲ್ಲೋಲ: ಮಳೆಯಿಂದಾಗಿ ಮಹಾರಾಷ್ಟ್ರದ ರಾಜಧಾನಿ ಮುಂಬಯಿ, ಔರಂಗಾಬಾದ್, ಪಾಲ್ಗಾರ್, ಜಿಲ್ಲೆಗೆ ತುಂಬಾ ಹಾನಿಯಾಗಿದೆ. ಹಲವಾರು ಹಳ್ಳಿಗಳು ಜಲಾವೃತವಾಗಿ, ಬೆಳೆ ನಾಶವಾಗಿದೆ. ಕೆಲವು ಹಳ್ಳಿಗಳ ಸಂಪರ್ಕ ತಪ್ಪಿ ಹೋಗಿದೆ. ಫಾಲ್ಗಾರ್‌ನಲ್ಲಿ ಯುವಕ ಸಾವನ್ನಪ್ಪಿದ್ದಾನೆ.
ಗುಜರಾತ್‌ನಲ್ಲಿ ಇಬ್ಬರ ಸಾವು: ದಕ್ಷಿಣ ಗುಜರಾತ್‌ನ ಮೆಹ್ಸಾನಾದ ಗಣ್‌ಪತ್ ಪುರದಲ್ಲಿ ಸೋಮವಾರ ರಾತ್ರಿ ಸಿಡಿಲು ಬಡಿದು ಒಬ್ಬ ಹದಿಹರೆಯದ ಬಾಲಕ ಹಾಗೂ ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ.
ರಾಜಸ್ಥಾನದಲ್ಲೂ 2 ಸಾವು: ರಾಜಸ್ಥಾನದ ಧೋಲ್‌ಪುರ್, ಬರನ್, ಜೋಧ್‌ಪುರದಲ್ಲಿ ಧಾರಾಕಾರ ಮಳೆಯಾಗಿದೆ. ಬರಾನ್ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಸಾವಿಗೀಡಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…