ಕೇರಳ: ಭರ್ಜರಿ ಮಳೆಗೆ ಜನಜೀವನ ಅಸ್ತವ್ಯಸ್ತ
Team Udayavani, Aug 5, 2022, 6:44 AM IST
ತಿರುವನಂತಪುರ/ಚಂಡೀಗಢ: ಕೇರಳದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಹೀಗಾಗಿ, ಅಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹದಿಂದಾಗಿ ಹಲವು ಜಿಲ್ಲೆಗಳಲ್ಲಿ ರಸ್ತೆಗಳು ಕೊಚ್ಚಿ ಹೋಗಿರುವುದರಿಂದಾಗಿ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ, ಜನರಿಗೆ ಪರಿಹಾರ ಕೇಂದ್ರಗಳಿಗೆ ತೆರಳಲೂ ಅನಾನುಕೂಲ ಉಂಟಾಗಿದೆ.
ಮಳೆಯಿಂದಾಗಿ ಪತನಂತಿಟ್ಟ ಜಿಲ್ಲೆಯ ಪಂಪಾ, ಮನಿಮಾಲಾ ಮತ್ತು ಅಚನ್‌ಕೋವಿಲ್ ನದಿಗಳು ಉಕ್ಕಿ ಹರಿದಿವೆ. ಕೊನ್ನಿ ತಾಲೂಕಿನಲ್ಲಿ ಅಂಗನವಾಡಿ ಕೇಂದ್ರದ ಚಾವಣಿ ಹಾರಿಹೋಗಿದೆ. ಇಡುಕ್ಕಿ ಜಿಲ್ಲೆಯಲ್ಲಿ ಇರುವ ಮಲಂಕರ ಅಣೆಕಟ್ಟಿನ ಆರು ಗೇಟುಗಳನ್ನು ತೆರೆಯ ಲಾಗಿದೆ. ಕೊಟ್ಟಾಯಂ, ತ್ರಿಶ್ಶೂರ್ ಮತ್ತು ಕಲ್ಲಿಕೋಟೆ ಜಿಲ್ಲೆಗಳಲ್ಲೂ ಧಾರಾಕಾರ ಮಳೆಯಾಗಿದೆ. ಕಲ್ಲಿಕೋಟೆ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಆಗಮಿಸಬೇಕಾಗಿದ್ದ ವಿಮಾನಗಳಿಗೆ ಲ್ಯಾಂಡ್ ಆಗಲು ಅಸಾಧ್ಯವಾಗಿದೆ. ಹೀಗಾಗಿ, ಅವುಗಳನ್ನು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಡಲಾಗಿತ್ತು.
ಹಳಿಯ ಮೇಲೆ ಕುಸಿದ ಮಣ್ಣು :
ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದೆ. ಇದರಿಂದಾಗಿ ಶಿಮ್ಲಾ ಕಲ್ಕಾ ರೈಲು ಮಾರ್ಗದ ಹಳಿಯ ಮೇಲೆ ಬಿದ್ದಿದೆ. ಸೋಲನ್ ಜಿಲ್ಲೆಯ ಪಟ್ಟಾ ಮೋರ್ ಎಂಬ ಲ್ಲಿಗೆ 50 ಮಂದಿ ಪ್ರಯಾಣಿಕರಿರುವ ರೈಲು ಆಗಮಿ ಸುತ್ತಿ ದ್ದಂತೆಯೇ ಭೂಕುಸಿತ ಸಂಭವಿಸಿದೆ. ಈ ಬಗ್ಗೆ ಮುನ್ಸೂ ಚನೆ ದೊರೆ ಯುತ್ತಿದ್ದಂತೆಯೇ ಚಾಲಕ ರೈಲನ್ನು ನಿಧಾನಗೊಳಿಸಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.