Goa ಭಾರೀ ಮಳೆ; ಕಾರುಗಳ ಮೇಲೆ ಬಿದ್ದ ಬೃಹತ್ ಮರ; ತಪ್ಪಿದ ಭಾರೀ ಅನಾಹುತ
Team Udayavani, Oct 2, 2023, 4:34 PM IST
ಪಣಜಿ: ಗೋವಾ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಕಡೆ ಭೂಕುಸಿತ ಉಂಟಾಗಿದೆ.
ಶಿವೋಲಿಯ ಕ್ಷೇತ್ರಪಾಲ ಮಂದಿರದ ಬಳಿ ಭಾನುವಾರ ದೊಡ್ಡ ಮಾವಿನ ಮರವೊಂದು ನಾಲ್ಕಾರು ವಾಹನಗಳ ಮೇಲೆ ಬಿದ್ದಿದೆ. ಎರ್ಟಿಗಾ ಕಾರು ರಸ್ತೆಯ ಬದಿಯಲ್ಲಿದ್ದ ಬೃಹತ್ ಮಾವಿನ ಮರವೊಂದು ಬಿದ್ದು ಭಾರಿ ಹಾನಿಯಾಗಿದೆ. ಜತೆಗೆ ಮರದ ಬಳಿಯಿದ್ದ ಮೂರು ವಿದ್ಯುತ್ ಕಂಬಗಳು ನೆಲಕ್ಕುರುಳಿರುವುದರಿಂದ ಈ ಭಾಗದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.
ಈ ಕಾರಿನಲ್ಲಿ ಕೆಲವು ಪ್ರವಾಸಿಗರು ಪ್ರಯಾಣಿಸುತ್ತಿದ್ದರು. ಗೋವಾಕ್ಕೆ ಭೇಟಿ ನೀಡಿ ದೆಹಲಿಗೆ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ.
ಎರ್ಟಿಗಾದಲ್ಲಿ ಲಕ್ಷವೀರ್ ಸಿಂಗ್ (40 ) ಪತ್ನಿ ಪ್ರಿಯಾ ಸಿಂಗ್ (36 ), ಮಗಳು ಮೀರಾ ಸಿಂಗ್ (5 ), ಸಹೋದರಿ ರಿತು ಧೈಯಾ ( 34), ಸಮೈರಾ. ಧೈಯಾ (4 ತಿಂಗಳು) ರವರು ಪ್ರಯಾಣಿಸುತ್ತಿದ್ದರು.
ಈ ಘಟನೆಯಲ್ಲಿ ವಾಹನಕ್ಕೆ ಹೆಚ್ಚಿನ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರವಾಸಿಗರಿಗೆ ಗಾಯಗಳಾಗಿಲ್ಲ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಮರ ಕಡಿದು ರಸ್ತೆ ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದಾರೆ.
ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದಿದ್ದು, ವಿದ್ಯುತ್ ತಂತಿಗಳು ತುಂಡಾಗಿ ಶಿವೋಲಿಯ ಫಾರ್ಚೂನ್ ಕಾಸಾ ಕಟ್ಟಡ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ನಮಗೆ ಯಾರೇ ಎದುರಾಳಿಯಾದ್ರೂ 2026ರಲ್ಲಿ ಗೆಲ್ಲೋದು ನಾವೇ: ಡಿಸಿಎಂ ಉದಯನಿಧಿ
BJP,ಮೋದಿ ಸಾಂವಿಧಾನಿಕ ಮೌಲ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ: ಪ್ರಿಯಾಂಕಾ ಕಿಡಿ
Jaipur; ರಾಷ್ಟ್ರೀಯ ಉದ್ಯಾನವನದಿಂದ ಭಾರೀ ಸಂಖ್ಯೆಯ ಹುಲಿಗಳು ನಾಪತ್ತೆ!
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
MUST WATCH
ಹೊಸ ಸೇರ್ಪಡೆ
Niveus Mangaluru Marathon 2024: ನ.10ರಂದು ಬೆಳಗ್ಗೆ ವಾಹನ ಸಂಚಾರದಲ್ಲಿ ಬದಲಾವಣೆ
Waqf: ಮಠದ ಜಾಗದ ಪಹಣಿಯಲ್ಲಿ ವಕ್ಫ್ ನಮೂದು; ಸ್ವಾಮೀಜಿ ಪಾದಯಾತ್ರೆ ಬಳಿಕ ಹೆಸರು ಮಾಯ!
Mangaluru: ಮಾತೃ ಭಾಷಿಕರ ಕೊಡುಗೆಯಿಂದ ಕೊಂಕಣಿ ಸಮೃದ್ಧ: ಅವಧೂತ್ ತಿಂಬ್ಲೊ
Mangaluru: ಮೂಡುಶೆಡ್ಡೆ; ಸರಕಾರಿ ಜಾಗದಲ್ಲಿ ಮರಗಳ ಮಾರಣ ಹೋಮ
Kasaragod: ಶ್ರೀಗಂಧ ಕೊರಡು ಸಹಿತ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.