![1-india](https://www.udayavani.com/wp-content/uploads/2024/06/1-india-415x277.jpg)
Heavy rains ಇಂದು ತಮಿಳುನಾಡು, ಕೇರಳದಲ್ಲಿ ಭಾರೀ ಮಳೆ
ನಾಸಿಕ್ನಲ್ಲಿ ಬತ್ತಿದ ಜಲಾಶಯಗಳು
Team Udayavani, Jun 6, 2024, 12:01 AM IST
![Heavy rains ಇಂದು ತಮಿಳುನಾಡು, ಕೇರಳದಲ್ಲಿ ಭಾರೀ ಮಳೆ](https://www.udayavani.com/wp-content/uploads/2024/06/TAMIL-620x398.jpg)
ಹೊಸದಿಲ್ಲಿ: ಪಶ್ಚಿಮ ಬಂಗಾಲ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದಲ್ಲಿ ಗುರುವಾರ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಉತ್ತರ ಪ್ರದೇಶದ ಪೂರ್ವ ಭಾಗ, ಗೋವಾ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ಕರಾವಳಿ ಪ್ರದೇಶದಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಮಳೆಯಾಗಲಿದೆ. ಪಶ್ಚಿಮ ಬಂಗಾಲ, ತಮಿಳುನಾಡು, ಅಸ್ಸಾಂ, ಕರ್ನಾಟಕ ದಲ್ಲಿ ಗುರುವಾರ ಭಾರೀ ಮಳೆ ಯಾಗಲಿದೆ. ದಕ್ಷಿಣ ಮಹಾ ರಾಷ್ಟ್ರ-ಕೊಂಕಣ-ಗೋವಾ ಕರಾವಳಿ ಪ್ರದೇಶದಲ್ಲಿ ಗಂಟೆಗೆ 35ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಉತ್ತರ ಭಾರತದಲ್ಲಿ ಬಿಸಿ ಹವೆ ಮುಂದುವರಿಯಲಿದೆ ಎಂದು ಐಎಂಡಿ ಹೇಳಿದೆ.
ನಾಸಿಕ್ನಲ್ಲಿ ಬತ್ತಿದ ಜಲಾಶಯಗಳು
ತಾಪಮಾನ ಏರಿಕೆಯಿಂದ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನೀರಿನ ಅಭಾವ ತಲೆದೋರಿದೆ. ಜಿಲ್ಲೆಯ 24 ಜಲಾಶಯಗಳ ಪೈಕಿ ಕನಿಷ್ಠ 8 ಜಲಾಶಯಗಳು ಬತ್ತಿ ಹೋಗಿವೆ. ಉಳಿದ 16 ಜಲಾಶಯ ಗಳಲ್ಲಿ 5.86 ಟಿಎಂಸಿ ನೀರು ಮಾತ್ರ ಉಳಿದಿದೆ ಎಂದು ಜಲ ಸಂಪನ್ಮೂಲ ಇಲಾಖೆ ತಿಳಿಸಿದೆ.
ಟಾಪ್ ನ್ಯೂಸ್
![1-india](https://www.udayavani.com/wp-content/uploads/2024/06/1-india-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![9](https://www.udayavani.com/wp-content/uploads/2024/06/9-18-150x90.jpg)
Price Rise: ದರ ಏರಿಕೆ; ನಾಳೆ ರಾಜ್ಯಾದ್ಯಂತ ಬಿಜೆಪಿಯಿಂದ ಕ್ಷೀರ ಅಭಿಯಾನ
![1-india](https://www.udayavani.com/wp-content/uploads/2024/06/1-india-150x100.jpg)
Semi Final 2; ಇಂಗ್ಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ ಭಾರತ ಫೈನಲ್ ಗೆ ಲಗ್ಗೆ
![priyanka gandhi (2)](https://www.udayavani.com/wp-content/uploads/2024/06/priyanka-gandhi-2-150x83.jpg)
Constitution;’ಜೈ ಸಂವಿಧಾನ’ ಹೇಳುವುದು ತಪ್ಪಾ?: ಪ್ರಿಯಾಂಕಾ ಪ್ರಶ್ನೆ
![1-wtr](https://www.udayavani.com/wp-content/uploads/2024/06/1-wtr-150x88.jpg)
Moving ರೈಲಿಗೆ ನೀರು ಚಿಮ್ಮಿಸಿದ ಯುವಕರಿಗೆ ಪ್ರಯಾಣಿಕರಿಂದ ಗೂಸಾ!
![1-wwewwewewe](https://www.udayavani.com/wp-content/uploads/2024/06/1-wwewwewewe-150x94.jpg)
BJP ಹಿರಿಯ ನಾಯಕ ಆಡ್ವಾಣಿ ಆರೋಗ್ಯದಲ್ಲಿ ಚೇತರಿಕೆ: ಡಿಸ್ಚಾರ್ಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.