ಉಗ್ರರಿಗೆ ನೆರವು: ಪಾಕ್ ಕಪ್ಪು ಪಟ್ಟಿಗೆ?
40 ನಿಯಮಗಳಲ್ಲಿ ಒಂದರಲ್ಲಿ ಮಾತ್ರ ಪಾಸ್ ಆದ ಪಾಕ್
Team Udayavani, Oct 9, 2019, 5:45 AM IST
ಇಸ್ಲಾಮಾಬಾದ್: ಉಗ್ರ ನಿಗ್ರಹಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೊರ ಪ್ರಪಂಚದೆದುರು ಬಡ ಬಡಾಯಿಸುತ್ತಾ, ಒಳಗೊಳಗೇ ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು ಒದಗಿಸುತ್ತಿರುವ ಪಾಕಿಸ್ಥಾನವು ಈ ಬಾರಿಯೂ ಹಣಕಾಸು ಕಾರ್ಯ ಚಟುವಟಿಕೆ ನಿಯಂತ್ರಣ ಕಾರ್ಯಪಡೆ(ಎಫ್ಎಟಿಎಫ್)ಯ ಕಪ್ಪು ಪಟ್ಟಿಗೆ ಸೇರುವ ಅಥವಾ ಗ್ರೇ ಲಿಸ್ಟ್ (ಬೂದು ಬಣ್ಣದ ಪಟ್ಟಿ)ನಲ್ಲಿಯೇ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.
ಕಾರ್ಯಪಡೆ ಸೂಚಿಸಿರುವ 40 ನಿಯಮಗಳಲ್ಲಿ ಪಾಕಿಸ್ಥಾನ ಕಾರ್ಯಗತಗೊಳಿಸಿದ್ದು ಕೇವಲ ಒಂದು ನಿಯಮವನ್ನು ಮಾತ್ರ! ಹೀಗಾಗಿ ನಿಯಮದಂತೆ ಪಾಕಿಸ್ಥಾನವನ್ನು ಎಫ್ಎಟಿಎಫ್ ಕಪ್ಪು ಪಟ್ಟಿಗೆ ಸೇರಿಸಬೇಕು. ಆದರೆ ಪಾಕ್ ಸರಕಾರವು ಈಗಾಗಲೇ ಮಿತ್ರರಾಷ್ಟ್ರಗಳಾದ ಚೀನ, ಮಲೇಷ್ಯಾ ಮತ್ತು ಟರ್ಕಿಯೊಂದಿಗೆ ಮಾತುಕತೆ ನಡೆಸಿ ಕಪ್ಪು ಪಟ್ಟಿಗೆ ಸೇರಿಸದಂತೆ ಲಾಬಿ ಮಾಡಿದೆ. ಅಲ್ಲದೆ, ಎಫ್ಎಟಿಎಫ್ಗೆ ಈಗ ಚೀನದ ಕ್ಸಿಯಾನ್‌ಜಿಮ್ ಲಿಯು ಅವರೇ ಅಧ್ಯಕ್ಷರಾಗಿರುವ ಕಾರಣ ಅವರು ಪಾಕ್ ಪರ ಮೃದು ಧೋರಣೆ ತೋರುವ ಸಾಧ್ಯತೆ ಇದೆ.
ನಿಯಮಗಳ ಪಾಲನೆಯೇ ಇಲ್ಲ
ಉಗ್ರ ನಿಗ್ರಹಗಳಿಗೆ ಸಂಬಂಧಿಸಿ ಪಾಕ್‌ಗೆ ಹಲವು ಕಠಿನ ನಿಯಮಗಳನ್ನು ಪಾಲಿಸಲು ಸೂಚಿಸಲಾಗಿತ್ತು. ಆದರೆ ಪಾಕ್ ಹೆಚ್ಚಿನದನ್ನು ಪಾಲಿಸಿಲ್ಲ.
ನಿಲುವು ಬದಲಿಸಿದ ಚೀನ!
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಗೊಳಿಸಿದ ಭಾರತದ ನಿಲುವನ್ನು ವಿಶ್ವಸಂಸ್ಥೆಯ ವೇದಿಕೆ ಯಲ್ಲಿ ಪ್ರಸ್ತಾವಿಸಲು ಪಾಕ್‌ಗೆ ರಾಜಕೀಯ ನೆರವನ್ನು ಪರೋಕ್ಷ ವಾಗಿ ನೀಡಿದ್ದ ಚೀನ, ಈಗ ಆ ವಿಚಾರದಲ್ಲಿ ಉಲ್ಟಾ ಹೊಡೆದಿದೆ. ಈ ವಿಚಾರವನ್ನು ಭಾರತ ಮತ್ತು ಪಾಕ್ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂದಿದೆ. ಈ ವಾರ ಚೀನ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹಾಗೂ ಮೋದಿ ಭೇಟಿ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.