ತಾರತಮ್ಯವೆಸಗದೆ ಎಲ್ಲರಿಗೂ ನೆರವಾಗಿ
130 ಕೋಟಿ ಭಾರತೀಯರೂ ನಮ್ಮವರೇ: ಆರ್ ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
Team Udayavani, Apr 27, 2020, 6:15 AM IST
ಹೊಸದಿಲ್ಲಿ: ನೂರಮೂವತ್ತು ಕೋಟಿ ಭಾರತೀಯರೆಲ್ಲರೂ ನಮ್ಮವರೇ ಎಂದು ಭಾವಿಸಿ ಸಂಕಷ್ಟದಲ್ಲಿರುವ ಎಲ್ಲರಿಗೂ ತಾರತಮ್ಯವಿಲ್ಲದೆ ನೆರವಾಗಿ. ಸೋಂಕು ಪ್ರಸರಣಕ್ಕೆ ಇವರೇ ಕಾರಣ ಎಂದು ನಿರ್ದಿಷ್ಟ ಸಮು ದಾಯವನ್ನು ದೂಷಿಸಬೇಡಿ, ದೂರ ಇರಿಸಲೂಬೇಡಿ. ಜತೆಗೆ, ಸ್ವಾವಲಂಬನೆಗಾಗಿ ಸಾಧ್ಯವಾದಷ್ಟು ಸ್ವದೇಶೀ ಉತ್ಪನ್ನಗಳನ್ನೇ ಬಳಸಿ…ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಂಘದ ಕಾರ್ಯಕರ್ತರ ಸಹಿತ ಎಲ್ಲ ಭಾರತೀಯರಿಗೆ ನೀಡಿದ ಕರೆ ಇದು.
“ಸದ್ಯದ ಪರಿಸ್ಥಿತಿ ಮತ್ತು ನಮ್ಮ ಪಾತ್ರ’ ಕುರಿತು ರವಿವಾರ ಆನ್‌ಲೈನ್ ಮೂಲಕ ಆರೆಸ್ಸೆಸ್ ಕಾರ್ಯಕರ್ತರು ಮತ್ತು ದೇಶವನ್ನುದ್ದೇಶಿಸಿ ಮಾತನಾಡಿದ ಭಾಗವತ್, ಸಾಂಕ್ರಾಮಿಕ ಸೋಂಕೊಂದು ದೇಶವನ್ನೇ ನಲುಗಿಸಿರುವ ಸಂದರ್ಭ ದಲ್ಲಿ ಯಾವುದೇ ತಾರತಮ್ಯ ತೋರದೆ ಕಷ್ಟದಲ್ಲಿರುವ ಎಲ್ಲರೂ ನಮ್ಮವರೇ ಎಂದು ಭಾವಿಸಿ ನೆರವಿನ ಹಸ್ತ ಚಾಚಬೇಕು. ಇದೇ ಭಾವನೆ ಯೊಂದಿಗೆ ಆರೆಸ್ಸೆಸ್ ಕಾರ್ಯಕರ್ತರು ಕೋವಿಡ್ 19 ಸೋಂಕು ನಿರ್ನಾಮವಾಗುವ ವರೆಗೂ ಪರಿಹಾರ ಕಾರ್ಯ ಮುಂದುವರಿಸಬೇಕು ಎಂದರು.
ಸಮುದಾಯದ ದೂಷಣೆ ಬೇಡ
ತಬ್ಲೀಘಿ ಜಮಾತ್ ಸಮಾವೇಶವನ್ನು ಉಲ್ಲೇಖೀಸದೆಯೇ ಮಾತನಾಡಿದ ಭಾಗವತ್, ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ದೂಷಿಸಬಾರದು. ನಾವು ಹಾಗೆ ಮಾಡಲಿ ಎಂದೇ ಕೆಲವರು ಕಾಯುತ್ತಿರುತ್ತಾರೆ. ಭಾರತ ವಿರೋಧಿ ಮನಃಸ್ಥಿತಿ ಹೊಂದಿರುವ ಕಪಟಿಗಳು ಈ ಸಂದಿಗ್ಧದ ಲಾಭ ಪಡೆಯಲು ಹವಣಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ತಾಳ್ಮೆ ಕಳೆದುಕೊಳ್ಳದೆ ಶಾಂತಚಿತ್ತರಾಗಿರಬೇಕು. ಭಯ ಅಥವಾ ಆಕ್ರೋಶಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಸ್ವದೇಶೀ ಬಳಸಿ
ಲಾಕ್‌ಡೌನ್ ವೇಳೆ ಪರಿಚಯಿಸಲಾದ ಅಭಿವೃದ್ಧಿಯ ಹೊಸ ಮಾದರಿಗಳು ದೇಶವನ್ನು ಸ್ವಾವಲಂಬಿಯನ್ನಾಗಿಸಿವೆ. ಇದು ಮುಂದು ವರಿಯಲು ದೇಶವಾಸಿಗಳೆಲ್ಲ ಸ್ವದೇಶೀ ಉತ್ಪನ್ನ ಗಳನ್ನೇ ಬಳಸಬೇಕು ಎಂದು ಸಲಹೆ ನೀಡಿದರು.
ಸಂಘ ಸಕ್ರಿಯವಾಗಿದೆ
ಲಾಕ್‌ಡೌನ್‌ನಿಂದಾಗಿ ಸಂಘದ ಚಟುವಟಿಕೆ ಗಳು ಸ್ಥಗಿತಗೊಂಡಿವೆ ಎಂಬುದೆಲ್ಲ ಸುಳ್ಳು ಎಂದಿರುವ ಮೋಹನ್ ಭಾಗವತ್, ಈಗಲೂ ಸಂಘ ಸಕ್ರಿಯವಾಗಿದೆ. ಸದಸ್ಯರು ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.