‘ಒಳ ಉಡುಪು’ ಹೇಳಿಕೆ: ಸಿಎಂ ಹೇಮಂತ್ ಸೋರೆನ್ ಸಹೋದರನ ವಿವಾದ
Team Udayavani, Sep 8, 2022, 4:43 PM IST
ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಸಹೋದರ ಮತ್ತು ಜೆಎಂಎಂ ಶಾಸಕ ಬಸಂತ್ ಸೋರೆನ್ ಅವರು ಹೇಳಿಕೆಯ ಮೂಲಕ ವಿವಾದಕ್ಕೆ ಸಿಲುಕಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.
ಇಬ್ಬರು ಅಪ್ರಾಪ್ತ ವಯಸ್ಕ ಬಾಲಕಿಯರ ಸತತ ಎರಡು ಕೊಲೆಗಳು ನಡೆದ ದುಮ್ಕಾಕ್ಕೆ ಭೇಟಿ ನೀಡದಿರುವುದನ್ನು ಕೀಳು ಮಟ್ಟದ ಹೇಳಿಕೆಯ ಮೂಲಕ ಸಮರ್ಥಿಸುವ ಮೂಲಕ ಬಸಂತ್ ಸೋರೆನ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ.
ಬಸಂತ್ ಸೋರೆನ್ ಅವರು ಬುಧವಾರ ಮೃತರ ಕುಟುಂಬಗಳನ್ನು ಭೇಟಿ ಮಾಡಿದರು. ಕಳೆದ ಕೆಲವು ದಿನಗಳಿಂದ ದುಮ್ಕಾದಲ್ಲಿ ಏಕೆ ಕಾಣಿಸಿಕೊಂಡಿಲ್ಲ ಎಂಬ ಪ್ರಶ್ನೆಗೆ, ”ಒಳ ಉಡುಪು ಖರೀದಿಸಲು ದೆಹಲಿಗೆ ಹೋಗಿದ್ದೆ. ನನ್ನ ಒಳಉಡುಪುಗಳು ಚಿಕ್ಕದಾಗಿದ್ದರಿಂದ ನಾನು ಅವುಗಳನ್ನು ಖರೀದಿಸಲು ದೆಹಲಿಗೆ ಹೋಗಿದ್ದೆ” ಎಂದು ಎಂದಿನ ಶೈಲಿಯಲ್ಲಿ ಹೇಳಿದರು. ಯಾವಾಗಲೂ ಒಳ ಉಡುಪುಗಳನ್ನು ದೆಹಲಿಯಿಂದ ಖರೀದಿಸುತ್ತೀರಾ ಎಂಬ ಇನ್ನೊಂದು ಪ್ರಶ್ನೆಗೆ ಅವರು ಹೌದು ಎಂದು ಉತ್ತರಿಸಿದರು.
ಮೊದಲಿಗೆ, 17 ವರ್ಷದ ಶಾಲಾ ಬಾಲಕಿ ತನ್ನ ನೆರೆಹೊರೆಯ ಶಾರುಖ್ ಸ್ನೇಹದ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕಾಗಿ ತನ್ನ ಮನೆಯಲ್ಲಿ ಮಲಗಿದ್ದಾಗ ಕಿಟಕಿಯಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ಎರಡನೆಯದಾಗಿ, 14 ವರ್ಷದ ಬುಡಕಟ್ಟು ಹುಡುಗಿಯನ್ನು ಹಲವು ತಿಂಗಳುಗಳ ಕಾಲ ಅತ್ಯಾಚಾರವೆಸಗಿ ಮನೆಯಿಂದ ಹಲವಾರು ಕಿಲೋಮೀಟರ್ ದೂರದಲ್ಲಿ ಕೊಂದು ನಂತರ ಮರಕ್ಕೆ ನೇಣು ಹಾಕಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.