ಗಿಡ ತಿಂದ ಕತ್ತೆಗಳಿಗೆ 4 ದಿನ ಜೈಲು ಶಿಕ್ಷೆ ನಂತರ ರಿಲೀಸ್!
Team Udayavani, Nov 28, 2017, 2:40 PM IST
ಜಲೌನ್ (ಉತ್ತರ ಪ್ರದೇಶ):ವಿಲಕ್ಷಣ ಪ್ರಕರಣವೊಂದರಲ್ಲಿ ಕತ್ತೆಗಳ ಪುಟ್ಟ ಹಿಂಡೊಂದನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಬಂಧನದಲ್ಲಿಟ್ಟು, ಸೋಮವಾರ ಬಿಡುಗಡೆ ಮಾಡಲಾಗಿದೆ! ಅಷ್ಟಕ್ಕೂ ಈ ಕತ್ತೆಗಳು ಮಾಡಿದ ತಪ್ಪಾದರೂ ಏನು ಎಂಬ ಪ್ರಶ್ನೆಗೆ ಉತ್ತರ, ಅವು ಇಲ್ಲಿನ ಜೈಲು ಮುಂಭಾಗದಲ್ಲಿದ್ದ ದುಬಾರಿ ಗಿಡಗಳ ಮೇಲೆ ನಡೆದು ಹೋಗಿ ಗಿಡಗಳನ್ನು ಹಾಳುಗೆಡವಿದ್ದವು. ಅಷ್ಟೇ ಅಲ್ಲ ಬಹುತೇಕ ಗಿಡಗಳನ್ನು ತಿಂದುಹಾಕಿದ್ದವು!
ಈ ಪ್ರಕರಣ ನಡೆದ ಜಲೌನ್ ಊರಿನ ಹೊರವಲಯದಲ್ಲಿ ಜೈಲೊಂದಿದೆ. ಈ ಜೈಲಿನ ಒಳಾಂಗಣ ಹಾಗೂ ಮುಂಭಾಗದ ಅಂದ ಹೆಚ್ಚಿಸಲು ಜೈಲಿನ ಹಿರಿಯ ಅಧಿಕಾರಿಯೊಬ್ಬರು ಬರೋಬ್ಬರಿ ಐದು ಲಕ್ಷ ರೂ. ನೀಡಿ ಕೆಲವು ದುಬಾರಿ ಗಿಡಗಳನ್ನು ತರಿಸಿ ಅವುಗಳನ್ನು ನೆಡಿಸಿದ್ದರು. ಈ ಕತ್ತೆಗಳು ದಿನಾಲು ಮೇಯಲು ಜೈಲು ಮಾರ್ಗದ ಮೂಲಕವೇ ಹೋಗುವಾಗ, ಆ ಗಿಡಗಳ ಮೇಲೆ ಹಾದು ಹೋಗಿವೆ. ಬಾಯಿಗೆ ಸಿಕ್ಕಷ್ಟು ಗಿಡಗಳನ್ನು ತಿಂದಿವೆ. ಇದನ್ನು ಗಮನಿಸಿದ ಜೈಲು ಅಧಿಕಾರಿಗಳು ಕತ್ತೆಗಳ ಮಾಲೀಕನನ್ನು ಕರೆದು ಗಿಡಗಳ ಮೇಲೆ ಕತ್ತೆಗಳು ಹಾಯ್ದು ಹೋಗದಂತೆ ನೋಡಿಕೊಳ್ಳುವಂತೆ ಸೂಚಿಸಿದ್ದರು. ಆದರೆ, ಶುಕ್ರವಾರ ಬೆಳಗ್ಗೆ ಎಂದಿನಂತೆ ಮೇಯಲು ಹೊರಟ ಆ ಕತ್ತೆಗಳು ಮತ್ತೆ
ಅದನ್ನೇ ಮಾಡಿವೆ.
ಇದರಿಂದ ಸಿಟ್ಟಿಗೆದ್ದ ಜೈಲು ಅಧಿಕಾರಿಗಳು ಆ ಕತ್ತೆಗಳನ್ನು ಅದೇ ಜೈಲಿಗಟ್ಟಿದ್ದಾರೆ. ನಾಲ್ಕು ದಿನ ಆ ಕತ್ತೆಗಳನ್ನು ಬಂಧಿಸಿಟ್ಟಿದ್ದ ಅಧಿಕಾರಿಗಳು, ಕತ್ತೆಗಳ ಮಾಲೀಕ ಪದೇ ಪದೆ ಬೇಡಿಕೊಂಡ ನಂತರ ಸೋಮವಾರ ಎಚ್ಚರಿಕೆ ಕೊಟ್ಟು ಬಿಡುಗಡೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.