ಒಬ್ಬರಿಗೆ ಸೋಂಕಿದ್ದರೆ ಕಚೇರಿಗೇ ಬೀಗ; ಕೆಲಸದ ಸ್ಥಳಕ್ಕೆ ಅನ್ವಯವಾಗುವ ಮಾರ್ಗಸೂಚಿ ಬಿಡುಗಡೆ
ಸೋಂಕಿತರ ಸಂಖ್ಯೆ ಹೆಚ್ಚಿದ್ದರೆ ಕಚೇರಿ ಇರುವ ಇಡೀ ಕಟ್ಟಡಕ್ಕೆ ಬೀಗ
Team Udayavani, May 22, 2020, 1:08 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನಾಲ್ಕನೇ ಹಂತದಲ್ಲಿ ಲಾಕ್‌ಡೌನ್ ಸಂಪೂರ್ಣ ಸಡಿಲಾಗಿ ಎಲ್ಲ ಕಂಪೆನಿ, ಉದ್ದಿಮೆಗಳಲ್ಲಿ ಕೆಲಸ ಪುನರಾರಂಭವಾದ ಎರಡೇ ದಿನದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಒಂದು ಶಾಕ್ ನೀಡಿದೆ.
ಅದೇನೆಂದರೆ, ಕಚೇರಿಯಲ್ಲಿ ಹೊಸ ಕೋವಿಡ್ ಪ್ರಕರಣ ಕಂಡುಬಂದರೆ, ಆ ಕಚೇರಿ ಇರುವ ಇಡೀ ಕಟ್ಟಡಕ್ಕೆ ಬೀಗ ಹಾಕಬೇಕು!
ಕೋವಿಡ್ ವೈರಸ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವಾಲಯ ಮಂಗಳವಾರ ಕೆಲವಾರು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಅದರಂತೆ ಒಂದು ಅಥವಾ ಎರಡು ಕೋವಿಡ್ ಪ್ರಕರಣ ಕಂಡುಬಂದರೆ ಕಚೇರಿ ಮುಚ್ಚಬೇಕು, ಹೆಚ್ಚಿನ ಪ್ರಕರಣ ಪತ್ತೆಯಾದರೆ ಇಡೀ ಕಟ್ಟಡಕ್ಕೆ 48 ಗಂಟೆಗಳ ಕಾಲ ಬೀಗ ಹಾಕಬೇಕು ಎಂದು ತಿಳಿಸಲಾಗಿದೆ.
ಇದರೊಂದಿಗೆ ಕೆಲಸ ಆರಂಭಿಸುವ ಮುನ್ನ ಕಚೇರಿಯನ್ನು ಶಿಷ್ಟಾಚಾರದ ಪ್ರಕಾರ ಸೋಂಕುರಹಿತವಾಗಿಸಬೇಕು. ಕೆಲಸದ ಸ್ಥಳವು ಸೋಂಕುರಹಿತವಾಗಿದೆ ಎಂದು ದೃಢಪಡಿಸುವವರೆಗೆ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಬೇಕು ಎಂದು ಹೇಳಲಾಗಿದೆ.
ಸಾಮಾನ್ಯವಾಗಿ ಬಹುತೇಕ ಕಚೇರಿಗಳಲ್ಲಿ ಗಾಳಿ ಬೆಳಕು ಪ್ರವೇಶಿಸಲು ಸಾಕಷ್ಟು ಅವಕಾಶ ಇರುವುದಿಲ್ಲ. ಹೀಗಾಗಿ ಪೂರ್ವ ರೋಗಲಕ್ಷಣ ಹೊಂದಿರುವ ಅಥವಾ ಲಕ್ಷಣರಹಿತ ಸೋಂಕಿತರು ಹೆಚ್ಚಿನ ಸಂಖ್ಯೆಯ ಜನರನ್ನು ಸಂಪರ್ಕಿಸಿದ್ದರೆ ಸಂಪೂರ್ಣ ಕೆಲಸದ ಸ್ಥಳವೇ ಕೋವಿಡ್ ಸೋಂಕಿನ ಕ್ಲಸ್ಟರ್ ಆಗಿ ಹೊರಹೊಮ್ಮುವ ಸಾಧ್ಯತೆ ಹೆಚ್ಚು ಎಂದು ಸಚಿವಾಲಯ ತಿಳಿಸಿದೆ.
ಇತರೆ ಮಾರ್ಗಸೂಚಿಗಳು
– ಜ್ವರದ ರೀತಿಯ ಅನಾರೋಗ್ಯದಿಂದ ಬಳಲುವವರು ಕಚೇರಿಗೆ ಹೋಗುವಂತಿಲ್ಲ
– ಜ್ವರ, ಸೋಂಕಿನ ಲಕ್ಷಣ ಇರುವವರು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
– ಐಸೊಲೇಶನ್ ಮತ್ತು ಕ್ವಾರೆಂಟೈನ್ ನಿಯಮಗಳು ಯಥಾವತ್ ಅನ್ವಯ
– ರೋಗ ಲಕ್ಷಣ ಉಳ್ಳವರನ್ನು ಪರೀಕ್ಷಿಸುವವರೆಗೂ ಐಸೊಲೇಟ್ ಮಾಡಬೇಕು
– ಸೋಂಕಿನ ಅಲ್ಪ ಲಕ್ಷಣಗಳು ದೃಢಪಟ್ಟವರ ಗೃಹ ಕ್ವಾರೆಂಟೈನ್ ಕಡ್ಡಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
Election: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಪ್ರಚಾರಕ್ಕೆ ತೆರೆ: ನಾಳೆ ಮತದಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.