ಪಾಕಿಸ್ಥಾನ ಜಾಧವ್ ಪತ್ನಿಯ ಶೂ ಮರಳಿಸದಿರಲು ಕಾರಣ ಇದು !
Team Udayavani, Dec 27, 2017, 11:31 AM IST
ಹೊಸದಿಲ್ಲಿ : ಇಸ್ಲಾಮಾಬಾದ್‌ನಲ್ಲಿ ಕುಲಭೂಷಣ್ ಜಾಧವ್ ತನ್ನ ತಾಯಿ ಮತ್ತು ಪತ್ನಿಯನ್ನು ಕೂಲಂಕಷ ಅವಲೋಕನದ ಬಿಗಿ ಭದ್ರತೆಯಲ್ಲಿ ಭೇಟಿಯಾದ ಒಂದು ದಿನದ ತರುವಾಯ, ಜಾಧವ್ ಅವರ ಪತ್ನಿ ಚೇತನ್‌ಕುಲ್ ಅವರ ಶೂಗಳನ್ನು ಕಳಚಿಸಿಕೊಂಡು ತನ್ನ ವಶದಲ್ಲಿ ಇರಿಸಿಕೊಂಡ ಬಗ್ಗೆ ವಿಲಕ್ಷಣಕಾರಿ ವಿವರಣೆಯನ್ನು ಪಾಕ್ ಸರಕಾರ ನೀಡಿದೆ.
“ಜಾಧವ್ ಪತ್ನಿಯ ಶೂನಲ್ಲಿ ಅದೇನೋ ಇತ್ತು. ಅದೇನೆಂಬುದನ್ನು ಪರೀಕ್ಷಿಸಲು ನಾವು ಭದ್ರತೆಯ ಕಾರಣಕ್ಕಾಗಿ ಆಕೆಯ ಶೂ ತೆಗೆಸಿ ಆಕೆಗೆ ಬದಲಿ ಶೂ ನೀಡಿದೆವು. ಆಕೆಯ ಶೂಗಳನ್ನು ನಾವೀಗ ಪರೀಕ್ಷಿಸುತ್ತಿದ್ದೇವೆ. ಶೂ ಹೊರತು ಪಡಿಸಿ ತನ್ನ ಉಳಿದೆಲ್ಲ ವಸ್ತುಗಳನ್ನು ತನಗೆ ಮರಳಿಸಲಾಗಿರುವುದನ್ನು ಸ್ವತಃ ಜಾಧವ್ ಪತ್ನಿಯೇ ದೃಢೀಕರಿಸಿದ್ದಾರೆ’ ಎಂದು ಪಾಕ್ ವಿದೇಶಾಂಗ ಕಚೇರಿಯ ವಕ್ತಾರ ಡಾ. ಮುಹಮ್ಮದ್ ಫೈಸಲ್ ಹೇಳಿದ್ದಾರೆ.
ಭದ್ರತೆಯ ನೆಪ ಒಡ್ಡಿ ಮುನ್ನೆಚ್ಚರಿಕೆಯ ಕಾರಣಕ್ಕಾಗಿ ಜಾಧವ್ ಕುಟುಂಬದ ಸಾಂಸ್ಕೃತಿಕ ಮತ್ತು ಧಾರ್ಮಿಕ ಸೂಕ್ಷ್ಮತೆಗಳನ್ನು ಪಾಕ್ ಸರಕಾರ ಕಡೆಗಣಿಸಿತು; ಜಾಧವ್ ಪತ್ನಿಯ ಮಂಗಲ ಸೂತ್ರ, ಬಳೆ ಮತ್ತು ಬಿಂದಿಯನ್ನು ತೆಗೆಸಲಾಯಿತು ಎಂದು ಭಾರತ ಸರಕಾರ ವ್ಯಕ್ತಪಡಿಸಿದ ಆಕ್ರೋಶಕ್ಕೆ ಪ್ರತಿಯಾಗಿ ಪಾಕ್ ಸರಕಾರ ಈ ಹೇಳಿಕೆಯನ್ನು ನೀಡಿದೆ.
ಪಾಕ್ ಸರಕಾರ ತನ್ನ ಹೇಳಿಕೆಯಲ್ಲಿ “ಭಾರತದ ನಿರಾಧಾರ ಆರೋಪಗಳು 24 ತಾಸುಗಳ ಬಳಿಕ ಬಂದಿವೆ. ಭಾರತದ ಆಕ್ಷೇಪಗಳನ್ನು ನಾವು ಸಾರಾಸಗಟು ತಿರಸ್ಕರಿಸುತ್ತೇವೆ. ನಾವು ಅನಗತ್ಯವಾಗಿ ಅರ್ಥಹೀನ ಪದ-ಸಮರದಲ್ಲಿ ಪಾಲ್ಗೊಳ್ಳಲು ಇಷ್ಟಪಡುವುದಿಲ್ಲ. ನಮ್ಮ ಮುಕ್ತತೆ ಮತ್ತು ಪಾರದರ್ಶಕತೆಯು ಭಾರತ ಸರಕಾರದ ಎಲ್ಲ ಆರೋಪಗಳು ಸುಳ್ಳೆಂಬದನ್ನು ತೋರಿಸುತ್ತವೆ’ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.