15000 ಕೋಟಿ ರೂ. ಮೌಲ್ಯದ ಹೆರಾಯಿನ್ ಜಪ್ತಿ : ದಂಪತಿಗಳಿಬ್ಬರ ಬಂಧನ
Team Udayavani, Sep 21, 2021, 7:09 PM IST
ಅಹಮದಾಬಾದ್ : ಅಫ್ಘಾನಿಸ್ತಾನ್‍ದಿಂದ ಅಕ್ರಮವಾಗಿ ಭಾರತಕ್ಕೆ ಆಮದು ಆಗಿದ್ದ ಸುಮಾರು 15,000 ಕೋಟಿ ರೂ. ಮೌಲ್ಯದ ಮಾದಕ ವಸ್ತು ಹೆರಾಯಿನ್‍ನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ವಶಕ್ಕೆ ಪಡೆದಿದ್ದು, ಪ್ರಕರಣ ಸಂಬಂಧ ಆಂಧ್ರಪ್ರದೇಶದ ದಂಪತಿ ಹಾಗೂ ಇಬ್ಬರು ಅಫ್ಗನ್ನರನ್ನು ಬಂಧನ ಮಾಡಿದೆ. ಗುಜರಾತ್‌ನ ಕಛ್ ಜಿಲ್ಲೆಯ ಮುಂದ್ರಾ ಬಂದರಿನಲ್ಲಿದ್ದ ಹೆರಾಯಿನ್‍ನ್ನು ವಶಕ್ಕೆ ಪಡೆಯಲಾಗಿದೆ.
‘ವಿಜಯವಾಡದ ಮೆ. ಆಶಿ ಟ್ರೇಡಿಂಗ್ ಕಂಪನಿಯು ಅರೆ ಸಂಸ್ಕರಿತ ಟಾಲ್ಕ್ ಕಲ್ಲುಗಳೆಂದು ಘೋಷಿಸಿದ್ದ ವಸ್ತುಗಳನ್ನು ಅಫ್ಗಾನಿಸ್ತಾನದಿಂದ ಆಮದು ಮಾಡಿಕೊಂಡಿತ್ತು. ಅದು ಇರಾನ್ ಬಂಡಾರ್ ಅಬ್ಬಾಸ್ ಬಂದರ್ ಮೂಲಕ ಗುಜರಾತ್‌ನ ಮುಂದ್ರಾ ಬಂದರಿಗೆ ತಲುಪಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಡಿಆರ್‌ಐ ಅಧಿಕಾರಿಗಳು, ಬಂದರಿಗೆ ಬಂದಿದ್ದ 40 ಟನ್‌ಗಳ ಎರಡು ಕಂಟೇನರ್‌ಗಳನ್ನು ಪರೀಕ್ಷಿಸಿದರು. ಗಾಂಧಿನಗರದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ನೇತೃತ್ವದಲ್ಲಿ ಕಂಟೇನರ್‌ಗಳ ಒಳಗಿದ್ದ ವಸ್ತುಗಳ ಪರೀಕ್ಷೆ ನಡೆಸಲಾಯಿತು. ನಂತರ ತಜ್ಞರು, ಇದರಲ್ಲಿರುವುದು ಹೆರಾಯಿನ್ ಎಂದು ದೃಢಪಡಿಸಿದರು.
ಇದೇ ರೀತಿ ಅಹಮದಾಬಾದ್, ದೆಹಲಿ, ಚೆನ್ನೈ ಮತ್ತು ಗುಜರಾತ್‌ನ ಗಾಂಧಿಧಾಮ ಮತ್ತು ಮಾಂಡವಿಯಲ್ಲೂ ತಪಾಸಣೆ ಕೈಗೊಳ್ಳಲಾಗಿದೆ ಎಂದು ಡಿಆರ್‌ಐ ಪ್ರಕಟಣೆಯಲ್ಲಿ ತಿಳಿಸಿದೆ. ವಿಜಯವಾಡ ಮೂಲದ ಆಶಿ ಟ್ರೇಡಿಂಗ್ ಕಂಪನಿ ಗೋವಿಂದರಾಜು ಮತ್ತು ಪತ್ನಿ ವೈಶಾಲಿ ಅವರಿಗೆ ಸೇರಿದ್ದು ಎಂದು ಗುರುತಿಸಲಾಗಿದೆ. ಪತಿ–ಪತ್ನಿ ಇಬ್ಬರೂ ಚೆನ್ನೈ ಮೂಲದವರು. ಅವರು ವಿಜಯವಾಡದಲ್ಲಿ ‘ರಫ್ತು – ಆಮದು ಕಂಪನಿಯನ್ನು ನೋಂದಣಿ ಮಾಡಿಸಿದ್ದಾರೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ. ಈ ಇಬ್ಬರನ್ನು ಡಿಆರ್‌ಐ ಬಂಧಿಸಿದ್ದು, ಅವರನ್ನು ಭುಜ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಇಬ್ಬರನ್ನು ವಿಚಾರಣೆಗಾಗಿ ಹತ್ತು ದಿನಗಳ ಕಾಲ ಡಿಆರ್‌ಐ ವಶಕ್ಕೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.