ಇಸ್ಕಾನ್ ಬಳಕೆಗೆ ಹೈಕೋರ್ಟ್ ತಡೆ
Team Udayavani, Jun 29, 2020, 8:33 AM IST
ಮುಂಬಯಿ: “ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್’ ಧಾರ್ಮಿಕ ಸಂಘಟನೆಯ ನೋಂದಾಯಿತ ಟ್ರೇಡ್‌ಮಾರ್ಕ್ “ಇಸ್ಕಾನ್’, ಭಾರತದಲ್ಲಿ ಚಿರಪರಿಚಿತ ಗುರುತು ಎಂದು ಮುಂಬಯಿ ಹೈಕೋರ್ಟ್ ಘೋಷಿಸಿದೆ. ಹೀಗಾಗಿ, ತನ್ನ ಉಡುಪುಗಳ ಮಾರಾಟಕ್ಕೆ “ಇಸ್ಕಾನ್’ ಹೆಸರನ್ನು ಬಳಸಕೂಡದು ಎಂದು ಉಡುಪು ತಯಾರಿಕಾ ಕಂಪೆನಿಗೆ ನಿರ್ದೇಶನ ನೀಡಿದೆ.
ಉಡುಪು ತಯಾರಿಕಾ ಮತ್ತು ಮಾರಾಟ ಕಂಪನಿ, ಇಸ್ಕಾನ್ ಆಪರಲ್ ಪ್ರೈವೇಟ್ ಲಿಮಿಟೆಡ್, “ಇಸ್ಕಾನ್’ ಹೆಸರಲ್ಲಿ ತನ್ನ ಕಂಪೆಯ ಉಡುಪುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿತ್ತು. ಧಾರ್ಮಿಕ ಸಂಸ್ಥೆ, “ಇಸ್ಕಾನ್’, ಕಳೆದ ಫೆಬ್ರವರಿಯಲ್ಲಿ ಕಂಪೆನಿಗೆ ನೋಟಿಸ್ ಜಾರಿಗೊಳಿಸಿ, ತನ್ನ ಉತ್ಪನ್ನಗಳ ಮಾರಾಟಕ್ಕೆ ಈ ಹೆಸರನ್ನು ಬಳಸದಂತೆ ತಾಕೀತು ಮಾಡಿತ್ತು. ಅಲ್ಲದೆ, ಮಾರ್ಚ್‌ನಲ್ಲಿ ಈ ಸಂಬಂಧ ಮುಂಬಯಿ ಹೈಕೋರ್ಟ್ ನಿಂದ ಮಧ್ಯಂತರ ತಡೆಯಾಜ್ಞೆ ತಂದಿತ್ತು. ಬಳಿಕ, ಕಂಪೆನಿ ತನ್ನ ಹೆಸರನ್ನು ಅಲ್ಸಿಸ್ ನ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಬದಲಾಯಿಸಿಕೊಂಡಿತ್ತು. ಆದರೆ, ಉತ್ಪನ್ನಗಳ ಮೇಲೆ “ಇಸ್ಕಾನ್’ ಹೆಸರು ಬಳಸುವುದನ್ನು ಮುಂದುವರಿಸಿತ್ತು.
ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬರ್ಗೆಸ್ ಪಿ. ಕೊಲಬವಾಲ್ಲಾ, “ಇಸ್ಕಾನ್’, ಧಾರ್ಮಿಕ ಸಂಘಟನೆಯ ಟ್ರೇಡ್‌ಮಾರ್ಕ್. ಹೀಗಾಗಿ, ಕಂಪೆನಿ ತನ್ನ ಉತ್ಪನ್ನಗಳ ಮೇಲೆ “ಇಸ್ಕಾನ್’ ಹೆಸರನ್ನು ಬಳಸಕೂಡದು ಎಂದು ತೀರ್ಪು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚೆನ್ನೈ ಲೈಂಗಿಕ ಕಿರುಕುಳ ಕೇಸ್: ಎಸ್‌ಐಟಿ ತನಿಖೆಗೆ ಹೈಕೋರ್ಟ್ ಆದೇಶ
Pinarayi Vijayan: ಸಿಂಗ್ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ
Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ
ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.