ರೇಟಿಂಗ್ ಕುಸಿತದ ಭೀತಿ:
Team Udayavani, Feb 3, 2018, 8:38 AM IST
ನವದೆಹಲಿ: ಕೇಂದ್ರ ಸರ್ಕಾರ 2018-19ರ ಬಜೆಟ್ ಮಂಡಿಸುತ್ತಿದ್ದಂತೆಯೇ ಆರ್ಥಿಕ ವಿಶ್ಲೇಷಣೆ ಸಂಸ್ಥೆ ಫಿಚ್ ರೇಟಿಂಗ್ಸ್ ಎಚ್ಚರಿಕೆ
ನೀಡಿದೆ. ಸಾಲದ ಹೊರೆ ಸರ್ಕಾರದ ಮೇಲೆ ಹೆಚ್ಚಿದ್ದು, ದೇಶದ ರೇಟಿಂಗ್ ಹೆಚ್ಚಳಕ್ಕೆ ತೊಡಕಾಗಬಹುದು ಎಂದಿದೆ. ಕಳೆದ ಮೇ
ತಿಂಗಳಲ್ಲಿ ಫಿಚ್ ಬಿಬಿಬಿ ನೆಗೆಟಿವ್ ರೇಟಿಂಗ್ ಅನ್ನು ಕಾಯ್ದುಕೊಂಡಿತ್ತು.
ಬಜೆಟ್‌ನಲ್ಲಿ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೃಷಿ ಹಾಗೂ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಿ ಯೋಜನೆಗಳನ್ನು ಘೋಷಿಸಲಾಗಿದ್ದು, ಇದು ಸರ್ಕಾರಕ್ಕೆ ಆರ್ಥಿಕ ಹೊರೆಯನ್ನುಂಟು ಮಾಡಲಿದೆ. ಈಗಾಗಲೇ ಜಿಡಿಪಿಯ ಶೇ.
68ರಷ್ಟು ಸಾಲವಿದೆ ಮತ್ತು ವಿತ್ತೀಯ ಅಸಮತೋಲನ ಜಿಡಿಪಿಯ ಶೇ.6.5ರಷ್ಟಿದೆ ಎಂದು ಫಿಚ್ ರೇಟಿಂಗ್ಸ್ ಹೇಳಿದೆ. ಇನ್ನೊಂದೆಡೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ವಿತ್ತೀಯ ಕೊರತೆ ಮಾರ್ಚ್ ವೇಳೆಗೆ ಶೇ.3.5ರ ಷ್ಟಾಗಲಿದೆ ಎಂದು ಅಂದಾಜಿಸಿದ್ದು,
ಇದು ಶೇ. 3.2ರ ಗುರಿಗಿಂತ ಹೆಚ್ಚಿರಲಿದೆ. ಮುಂದಿನ ವಿತ್ತ ವರ್ಷದ ವಿತ್ತೀಯ ಕೊರತೆಯನ್ನು ಶೇ. 3.3ಕ್ಕೆ ನಿಗದಿಪಡಿಸಲಾಗಿದೆ.
ಪ್ರತಿಭಟನೆಯ ಎಚ್ಚರಿಕೆ: ಇದೇ ವೇಳೆ, ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ನೇತೃತ್ವದಲ್ಲಿ ರೈತ ಸಂಘಟನೆಗಳು
ಕೇಂದ್ರ ಬಜೆಟ್ ವಿರುದ್ಧ ಮಾರ್ಚ್‌ನಿಂದ ದೇಶಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿವೆ. ಸ್ವಾಮಿನಾಥನ್ ಆಯೋಗದ
ಶಿಫಾರಸನ್ನು ಜಾರಿ ಮಾಡುವ ಬದಲು, ರೈತರಿಗೆ ಉತ್ಪಾದನಾ ವೆಚ್ಚದ ಒಂದೂವರಗೆ ಪಟ್ಟು ಕನಿಷ್ಠ ಬೆಂಬಲ ಬೆಲೆ ನೀಡುವಂಥ
ತನ್ನದೇ ಸೂತ್ರವನ್ನು ಕೇಂದ್ರ ಜಾರಿಗೆ ತಂದಿರುವುದು ಖಂಡನೀಯ ಎಂದು ಯಾದವ್ ಹೇಳಿದ್ದಾರೆ.
ಮಧ್ಯಮ ವರ್ಗಕ್ಕೆ ಮುಂದಿನ ಬಜೆಟ್‌ನಲ್ಲಿ!
ಈಗಾಗಲೇ ಮಧ್ಯಮ ವರ್ಗಕ್ಕೆ ಸಾಕಷ್ಟು ಕೊಡುಗೆ ನೀಡಲಾಗಿದೆ. ಮುಂದಿನ ಬಜೆಟ್‌ನಲ್ಲಿ ಆರ್ಥಿಕ ಸ್ಥಿತಿ ಗತಿಯನ್ನು ಪರಿಗಣಿಸಿ ಇನ್ನಷ್ಟು ಕೊಡುಗೆ ನೀಡಲಾಗುತ್ತದೆ ಎಂದು ಸಚಿವ ಅರುಣ್ ಜೇಟ್ಲಿ ಶುಕ್ರವಾರ ಹೇಳಿದ್ದಾರೆ. ಮಧ್ಯಮ ವರ್ಗಕ್ಕೆ ಈ ಬಾರಿಯ
ಬಜೆಟ್ ನಲ್ಲಿ ಯಾವುದೇ ಯೋಜನೆ ಘೋಷಿಸಿಲ್ಲದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಕಳೆದ ಬಾರಿ ಆದಾಯ ತೆರಿಗೆ
ಮಿತಿಯನ್ನು 50 ಸಾವಿರ ರೂ. ಏರಿಕೆ ಮಾಡಿ, 2.50 ಲಕ್ಷಕ್ಕೆ ಏರಿಸಲಾಗಿದೆ. ಅಲ್ಲದೆ 50 ಲಕ್ಷದೊಳಗಿನ ವಹಿವಾಟು ನಡೆಸುವ
ವೃತ್ತಿಪರರಿಗೆ ತೆರಿಗೆ ಸಲ್ಲಿಕೆಯನ್ನು ಸರಳಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಬಿಟ್‌ಕಾಯಿನ್ ವಹಿವಾಟಿಗೆ ತೆರಿಗೆ
ಬಿಟ್‌ಕಾಯಿನ್ ವಹಿವಾಟುದಾರರಿಗೆ ತೆರಿಗೆ ವಿಧಿಸಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ಲಕ್ಷಗಟ್ಟಲೆ ಹೂಡಿಕೆದಾರರಿಗೆ ನೋಟಿಸ್ ನೀಡಿದೆ. ಬಿಟ್‌ಕಾಯಿನ್ ವಹಿವಾಟಿನಿಂದ ಪಡೆದ ಲಾಭಕ್ಕೆ ಬಹುತೇಕ ಹೂಡಿಕೆ ದಾರರು ತೆರಿಗೆ ಪಾವತಿ ಮಾಡಿಲ್ಲದಿರುವುದು ಗಮನಕ್ಕೆ ಬಂದಿದೆ. ಇನ್ನೂ ಕೆಲವರು ಆದಾಯ ತೆರಿಗೆ ವಿವರಗಳಲ್ಲಿ ಈ ಹೂಡಿಕೆ ನಮೂದಿಸಿಲ್ಲ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಹೇಳಿದೆ.
ವಿತ್ತೀಯ ಕೊರತೆ ಬಗ್ಗೆ ಕ್ರಿಸಿಲ್ ಆತಂಕ
ಬಂಡವಾಳ ಹೂಡಿಕೆಗೆ ಮಿತಿ ಹೇರಿದ್ದ ಶೇ.3.5ರ ವಿತ್ತೀಯ ಕೊರತೆ ಎದುರಿಸಬೇಕಾದೀತು ಎಂದು ಆರ್ಥಿಕ ವಿಶ್ಲೇಷಣೆ ಸಂಸ್ಥೆ ಕ್ರಿಸಿಲ್ ಹೇಳಿದೆ. ಅಷ್ಟೇ ಅಲ್ಲ, ಮುಂದಿನ ವರ್ಷ ವಿತ್ತೀಯ ಕೊರತೆಯನ್ನು ಕಡಿಮೆ ಮಾಡುವ ಪ್ರಕ್ರಿಯೆಗೆ ಮುಂದಿನ ಮೂರು ವರ್ಷಗಳವರೆಗೆ ಅಡ್ಡಿಯುಂಟಾಗಲಿದೆ ಎಂದೂ ಅದು ಹೇಳಿದೆ. ಇನ್ನೊಂದೆಡೆ ವಿತ್ತೀಯ ಕೊರತೆ ಏರಿದ್ದು ಆತಂಕಕ್ಕೆ ಕಾರಣ ಎಂದಿದೆ ಐಸಿಆರ್‌ಎ. ಬಂಡವಾಳ ವೆಚ್ಚವು 40 ಸಾವಿರ ಕೋಟಿ ರೂ. ಕುಸಿತ ಕಂಡಿದೆ. ಇದಕ್ಕೆ ರೈಲ್ವೆ ಮತ್ತು ರಾಜ್ಯಗಳಿಗೆ ನೀಡಿದ ಅನುದಾನವೇ ಕಾರಣ ಎಂದು ಆರೋಪಿಸಿದೆ.
ಸಂಸದೀಯ ಭಾಷೆಯಲ್ಲಿ ಹೇಳುವುದಾದರೆ, ಪ್ರಧಾನಿ ಮೋದಿ ಅವರ ಬಜೆಟ್ ವಿರುದ್ಧ ಷೇರು ಮಾರುಕಟ್ಟೆಯು 800 ಅಂಕಗಳ ಕುಸಿತದ ಮೂಲಕ ಅವಿಶ್ವಾಸ ಗೊತ್ತುವಳಿ ಮಂಡಿಸಿದೆ.
●ರಾಹುಲ್‌ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.