ಅವಧಿಪೂರ್ವ ಗೋಧಿ ಬಿತ್ತನೆಯಿಂದ ಹೆಚ್ಚು ಇಳುವರಿ
ಭಾರತ, ಅಮೆರಿಕ ವಿಜ್ಞಾನಿಗಳ ಜಂಟಿ ಸಂಶೋಧನೆಯಲ್ಲಿ ಕಂಡುಬಂದ ಸತ್ಯ
Team Udayavani, Aug 4, 2022, 7:05 AM IST
ನವದೆಹಲಿ: ಭಾರತದ ಪೂರ್ವ ವಲಯದಲ್ಲಿ ಗೋಧಿ ಬಿತ್ತನೆಯ ಅವಧಿಯನ್ನು ಕೊಂಚ ಮುಂಚಿತವಾಗಿ ಮಾಡಿದರೆ, ಶೇ.69ರಷ್ಟು ಹೆಚ್ಚಿನ ಫಸಲು ಪಡೆಯಬಹುದು ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನ (ಐಎಆರ್‌ಸಿ) ತಜ್ಞರು ಹಾಗೂ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ಸಂಶೋಧಕರು ಜಂಟಿಯಾಗಿ ನಡೆಸಿರುವ ಸಂಶೋಧನಾ ವರದಿಯಲ್ಲಿ ಈ ವಿಚಾರ ಉಲ್ಲೇಖೀಸಲಾಗಿದೆ. ಇವರ ಈ ಸಂಶೋಧನೆ “ನೇಚರ್ ಫುಡ್’ ಎಂಬ ವೈಜ್ಞಾನಿಕ ಸಂಶೋಧನಾ ವರದಿಗಳನ್ನು ಪ್ರಕಟಿಸುವ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿವೆ.
ತರ್ಕವೇನು?
ಭಾರತದಲ್ಲಿ ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಗೋಧಿ ಬಿತ್ತನೆ ಮಾಡಲಾಗುತ್ತದೆ. ಈ ಅವಧಿಯಲ್ಲಿ ಗೋಧಿ ಬಿತ್ತಿದರೆ ಗೋಧಿ ಪೈರು ಕಾಳು ಕಟ್ಟುವ ಹೊತ್ತಿಗೆ ವಾತಾವರಣದಲ್ಲಿ ಬಿಸಿ ಏರಿಕೆಯಾಗಿ ಅವುಗಳಲ್ಲಿ ಹಲವು ಕಾಳುಗಳು ಜೊಳ್ಳಾಗುವ ಸಾಧ್ಯತೆಯಿರುತ್ತದೆ.
ಆದರೆ, ಅವಧಿಗೂ ಮೊದಲೇ ಬಿತ್ತನೆ ಮಾಡಿದಾಗ ವಾತಾವರಣದಲ್ಲಿ ಬಿಸಿ ಏರುವ ಹೊತ್ತಿಗೆ ಅವು ಗಟ್ಟಿ ಕಾಳು ಕಟ್ಟಿರುತ್ತವೆ. ಇದರಿಂದ, ಅವು ಬಿಸಿಲಬೇಗೆಯನ್ನು ಸಹಿಸಿ ಬೆಳೆಯಲು ಸಾಧ್ಯವಾಗುತ್ತದೆ. ಅದರಿಂದ, ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಅಕ್ಕಿ ಇಳುವರಿ ಹೆಚ್ಚಿಸಲೂ ಈ ಪ್ರಯೋಗ ಅಳವಡಿಸಿಕೊಳ್ಳಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರನ್ನು ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ