ಸಿಕ್ಕಿಂ ಗಡಿಯಲ್ಲಿ ಡ್ರ್ಯಾಗನ್ ಗೆ ಸೆಡ್ಡು; ಭಾರತ ಸೈನ್ಯ ಜಮಾವಣೆ
Team Udayavani, Jul 3, 2017, 3:45 AM IST
ಹೊಸದಿಲ್ಲಿ: ಸಿಕ್ಕಿಂ ಗಡಿಯಲ್ಲಿ ಹೆಚ್ಚು ಕಡಿಮೆ ಯುದ್ಧದ ಕಾರ್ಮೋಡ ಆವರಿಸಿದೆ. ಚೀನದ ಪರೋಕ್ಷ ಸವಾಲಿಗೆ ಪ್ರತಿಸವಾಲು ಎನ್ನುವಂತೆ ಭಾರತ ಇಲ್ಲಿನ ಡೋಕ ಲಾ ಪ್ರದೇಶದಲ್ಲಿ ಇನ್ನಷ್ಟು ಸೇನಾ ಪಡೆಗಳನ್ನು ನಿಯೋಜಿಸಿದೆ. 1962ರ ಬಳಿಕ ಉಭಯ ದೇಶಗಳ ನಡುವೆ ಗಡಿಯಲ್ಲಿ ಕಂಡುಬಂದಿರುವ ಅತೀ ದೊಡ್ಡ ಬಿಕ್ಕಟ್ಟು ಇದಾಗಿದೆ. ಅಲ್ಲದೆ, ಅನಂತರದ ದಿನಗಳಲ್ಲಿ ಅತೀ ಹೆಚ್ಚು ಸೇನಾ ಪಡೆಗಳನ್ನು ನಿಯೋಜಿಸಿದ ಮತ್ತೂಂದು ಘಟನೆ ಇದು ಎಂದು ಹೇಳಲಾಗುತ್ತಿದೆ.
ಕಳೆದೊಂದು ತಿಂಗಳಿನಿಂದಲೂ ಸಿಕ್ಕಿಂನ ಗಡಿಯಲ್ಲಿ ಚೀನ ಸೇನೆ ಹಾಗೂ ಭಾರತೀಯ ಸೇನಾ ಪಡೆಗಳ ನಡುವೆ ಒಂದಲ್ಲ ಒಂದು ಸಂಘರ್ಷ ನಡೆಯುತ್ತಲೇ ಇದ್ದು, ಕಳೆದ ವಾರ ಚೀನ ಸೇನೆ ಭಾರತೀಯ ಬಂಕರ್‌ಗಳನ್ನು ನಾಶಪಡಿಸಿ, ಯೋಧರೊಂದಿಗೆ ತಳ್ಳಾಟವನ್ನೂ ನಡೆಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಈ ನಡುವೆ ಭಾರತದ ಈ ಕ್ರಮದ ಬೆನ್ನಿಗೆ ಚೀನ ಕೂಡ ಆಕ್ರಮಣಶೀಲ ತಂತ್ರಗಳನ್ನು ಅನುಸರಿಸುತ್ತಿದೆ ಎಂದು ಪೀಪಲ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಮೂಲಗಳು ತಿಳಿಸಿವೆ.
ಉತ್ತರ ಬಂಗಾಲದ ಸುಕ್ನಾದಲ್ಲಿನ 33 ಕಾರ್ಪ್‌ಗಳ ಪ್ರಧಾನ ನೆಲೆಯಲ್ಲಿ ದಾಳಿ ನಡೆಸಬಹು ದಾದ ಹಿನ್ನೆಲೆಯಲ್ಲಿ ಅಲ್ಲಿಯೂ ಸೇನಾ ಪಡೆ ನಿಯೋಜನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಜೂ. 8ರಂದು ಬ್ರಿಗೇಡ್ ಪ್ರಧಾನ ನೆಲೆಯಲ್ಲಿ ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸ ಲಾಗಿತ್ತು. ಈ ವೇಳೆಯೂ ಘರ್ಷಣೆ ನಡೆದಿದ್ದು, ಉಭಯ ರಾಷ್ಟ್ರಗಳ ಸೇನಾ ಯೋಧರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು ಎಂದು ಹೇಳಲಾಗಿದೆ.
ಚೀನ ಅಧಿಕೃತ ಮಾಧ್ಯಮ ಟೀಕೆ: ಇಷ್ಟೆಲ್ಲ ಬೆಳವಣಿಗೆಗಳ ಬೆನ್ನಿಗೆ ಚೀನದ ಅಧಿಕೃತ ಸುದ್ದಿ ಸಂಸ್ಥೆ ಭಾರತದ ಸಮೀಪ ದೃಷ್ಟಿಕೋನದ ತಂತ್ರಗಾರಿಕೆಯನ್ನು ಟೀಕಿಸಿದೆ. ಚೀನದ ಮಹತ್ವಾ ಕಾಂಕ್ಷೆಯ ಯೋಜನೆ “ಒನ್ ಬೆಲ್ಟ್, ಒನ್ ರೋಡ್’ ಬಗ್ಗೆ ಸಹಿಸಿಕೊಳ್ಳಲಾಗದೆ ಭಾರತ ಈ ಕುಚೋದ್ಯಕ್ಕೆ ಇಳಿದಿದೆ ಎಂದು ಆರೋಪಿಸಿದೆ. ಮೇ 14ರಂದು ನಡೆದ ಬೆಲ್ಟ್ ಆ್ಯಂಡ್ ರೋಡ್ ಫೋರಂ (ಬಿಆರ್‌ಎಫ್)ನಲ್ಲಿಯೂ ಭಾರತ ಪಾಲ್ಗೊಂಡಿರಲಿಲ್ಲ. ಭಾರತದ ನಡೆಗೆ ಇದೇ ಸಾಕ್ಷಿ ಎಂದು ಉಲ್ಲೇಖೀಸಿದೆ.
ಸೇನೆ ಹಿಂಪಡೆಯಲಿ ಎಂದ ಚೀನ: ಇನ್ನೊಂದೆಡೆ ರವಿವಾರದ ಬೆಳವಣಿಗೆಯಿಂದ ಕ್ರುದ್ಧಗೊಂಡಿರುವ ಚೀನ, ಸದ್ಯದ ಕಾರ್ಮೋಡ ತಿಳಿಯಾಗಬೇಕೆಂದರೆ ಕೂಡಲೇ ಭಾರತವು ಗಡಿಯಲ್ಲಿ ನಿಯೋಜಿಸಿರುವ ಸೇನೆಯನ್ನು ಹಿಂಪಡೆದುಕೊಳ್ಳಲಿ. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಲಿ ಎಂದು ಎಚ್ಚರಿಸಿದೆ.
ಈಗೇಕೆ ಸೇನಾ ಪಡೆಗಳ ನಡುವೆ ಸಂಘರ್ಷ?
ಘಟನೆ ಹಿನ್ನೆಲೆ ಇಷ್ಟೆ. ಕಳೆದ ಇಪ್ಪತ್ತು ದಿನಗಳಿಂದಲೂ ಸಿಕ್ಕಿಂ ಗಡಿ, ಸಂಗಮ ಪ್ರದೇಶ ಡೋಕ್ಲಾಮ್‌ನಲ್ಲಿ ಚೀನ ಸೇನಾ ಪಡೆ ಭಾರತೀಯ ಸೇನಾ ಪಡೆಗಳನ್ನು ಕೆಣಕುತ್ತಲೇ ಬಂದಿದೆ. ಅಷ್ಟೇ ಅಲ್ಲ, ಗಡಿಯಲ್ಲಿ ಹೊಸ ರಸ್ತೆ ನಿರ್ಮಾಣ ಸಂಬಂಧ ಭಾರತೀಯ ಬಂಕರ್‌ಗಳನ್ನು ನಾಶಪಡಿಸಿ, ಗಡಿ ನಿಯಮವನ್ನೂ ಉಲ್ಲಂ ಸಿ ಭಾರತೀಯ ಯೋಧರ ಜತೆ ತಳ್ಳಾಟ ನಡೆಸಿತ್ತು. ಅಲ್ಲದೆ ಕೈಲಾಸ ಮಾನಸ ಸರೋವರ ಯಾತ್ರಾ ರ್ಥಿಗಳನ್ನೂ ತಡೆದು ತೊಂದರೆ ನೀಡಿತ್ತು. ಇಷ್ಟೆಲ್ಲ ಮಾಡಿರುವ ಚೀನ, ಭಾರತೀಯ ಸೈನಿಕರೇ ಗಡಿ ನಿಯಮ ಉಲ್ಲಂ ಸಿ ಒಳಪ್ರವೇಶ ಮಾಡಿದೆ’ ಎಂದು ಭಾರತೀಯ ಸೇನಾ ಪಡೆಯ ಮೇಲೆ ಗೂಬೆ ಕೂರಿಸಿತು. ಭಾರತ ಸೇನಾ ಪಡೆಯನ್ನು ಹಿಂದಕ್ಕೆ ಪಡೆದುಕೊಳ್ಳಲಿ. ಬಳಿಕ ಈ ಸಂಬಂಧ ಮಾತುಕತೆಗೆ ಮುಂದಾಗುತ್ತೇವೆ ಎಂದಿತ್ತು. ಇದಕ್ಕೆ ಭಾರತ, ರಸ್ತೆ ನಿರ್ಮಾಣದಿಂದ ರಕ್ಷಣಾ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ರಾಜತಾಂತ್ರಿಕ ಸಮಸ್ಯೆ ಉಲ್ಬಣಿಸಲಿದೆ ಎಂದು ಎಚ್ಚರಿಸಿತ್ತು.
ಚೀನದ ರಾಕೆಟ್ ಉಡಾವಣೆ ವಿಫಲ
ಅತೀ ಹೆಚ್ಚು ತೂಕ ಹೊತ್ತೂಯ್ಯಬಲ್ಲ ರಾಕೆಟ್ ಉಡಾವಣೆ ಮಾಡುವ ಚೀನದ ಯತ್ನ ವಿಫಲಗೊಂಡಿದೆ. “ಲಾಂಗ್ ಮಾರ್ಚ್- 5 ವೈ2′ ಅನ್ನು ರವಿವಾರ ಉಡಾವಣೆ ನಡೆಸಿದರೂ ರಾಕೆಟ್‌ನಲ್ಲಿ ದೋಷ ಕಂಡುಬಂದ ಕಾರಣ ಅದು ವಿಫಲವಾಯಿತು. ಈ ರಾಕೆಟ್ ಶಿಜಿಯಾನ್-18 ಉಪಗ್ರಹವನ್ನು ಹೊತ್ತು ನಭಕ್ಕೆ ಹಾರ ಬೇಕಿತ್ತು. 7.5 ಟನ್ ತೂಕದ ಉಪಗ್ರಹ ವನ್ನು ಇದೇ ಮೊದಲ ಬಾರಿಗೆ ಚೀನ ಉಡಾವಣೆ ಮಾಡಲು ಯತ್ನಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.