ಪ್ರಧಾನಿ ನರೇಂದ್ರ ಮೋದಿ ಭೂತಾನ್ ದೇಶಕ್ಕೆ ಭೇಟಿ ಕೊಟ್ಟ ಉದ್ದೇಶವೇನು?
ಪ್ರಧಾನಿ ಮೋದಿ ಭೂತಾನ್ ಭೇಟಿ ಫಲಪ್ರದ
Team Udayavani, Aug 18, 2019, 5:08 PM IST
ನವದೆಹಲಿ: 2014ರಲ್ಲಿ ಪ್ರಥಮ ಬಾರಿಗೆ ಪ್ರಧಾನಿ ಮಂತ್ರಿ ಹುದ್ದೆಗೆ ಏರಿದ ತಕ್ಷಣವೇ ನರೆಂದ್ರ ಮೋದಿ ಅವರು ವಿಶ್ವದ ದೊಡ್ಡ ದೇಶಗಳಿಗೆ ಭೇಟಿ ನೀಡದೇ ಭಾರತದ ನೆರೆಹೊರೆಯ ಚಿಕ್ಕ ರಾಷ್ಟ್ರಗಳಾಗಿರುವ ನೇಪಾಳ, ಭೂತಾನ್, ಅಫ್ಗಾನಿಸ್ಥಾನ, ಬಾಂಗ್ಲಾದೇಶಗಳಿಗೆ ಭೇಟಿ ನೀಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು.
ಎರಡನೇ ಬಾರಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರವೂ ತನ್ನ ಇದೇ ನಡೆಯನ್ನು ಮುಂದುವರಿಸಿರುವ ಪ್ರಧಾನಿ ಮೋದಿ ಅವರು ಇದೀಗ ನೆರೆ ರಾಷ್ಟ್ರ ಭೂತಾನ್ ಗೆ ಎರಡು ದಿನಗಳ ಭೇಟಿ ನೀಡಿ ವಾಪಸಾಗಿದ್ದಾರೆ.
Prime Minister of Bhutan (Dr.) Lotay Tshering in Paro, Bhutan: The main theme of PM Narendra Modi’s visit to Bhutan this time, was healthy people to people contact. He came with a big smile & left with a big smile. pic.twitter.com/NYJxjLkVMX
— ANI (@ANI) August 18, 2019
ಭೂತಾನ್ ನಲ್ಲಿ ಮೋದಿ ಅವರಿಗೆ ಅಭೂತಪೂರ್ವ ಸ್ವಾಗತ ಲಭಿಸಿದೆ. ಮಾತ್ರವಲ್ಲದೇ ಭೂತಾನ್ ಮತ್ತು ಭಾರತ ದೇಶಗಳ ಜನರ ನಡುವಿನ ಬಾಂಧವ್ಯ ವೃದ್ಧಿಯೇ ಮೋದಿ ಅವರ ಈ ಬೇಟಿಯ ಉದ್ದೇಶವಾಗಿತ್ತು. ಅವರು ನಗುನಗುತ್ತಾ ಬಂದರು ಮತ್ತು ಸಂತೋಷದಿಂದಲೇ ಇಲ್ಲಿಂದ ಹಿಂದಿರುಗಿದರು ಎಂದು ಭೂತಾನ್ ದೇಶದ ಪ್ರದಾನ ಮಂತ್ರಿ ಡಾ. ಲೊಟೆ ಶೆರಿಂಗ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರ ಭೂತಾನ್ ಭೇಟಿಯ ಅವಧಿಯಲ್ಲಿ ಏನೇನಾಯ್ತು?
ಪ್ರಧಾನಿ ಮೋದಿ ಅವರು ರಾಯಲ್ ಯೂನಿವರ್ಸಿಟಿ ಆಫ್ ಭೂತಾನ್ ನಲ್ಲಿ ವಿದ್ಯಾರ್ಥಿಗಳು ಮತ್ತು ಸಂಸತ್ ಪಟುಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಬಹ್ಯಾಕಾಶದಂತ ನವೀನ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಎರಡೂ ದೇಶಗಳೂ ಶ್ರಮಿಸಲಿವೆ ಎಂದು ಅವರು ಹೆಳಿದರು.
ಪ್ರಧಾನಿ ಮೋದಿ ಅವರ ಈ ಭೇಟಿಯ ಸಂದರ್ಭದಲ್ಲಿ ಎರಡೂ ದೇಶಗಳ ನಡುವ ಒಟ್ಟು ಒಂಭತ್ತು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಮತ್ತು ವಿದ್ಯುಚ್ಛಕ್ತಿ ಖರೀದಿಸುವಿಕೆಗೆ ಸಂಬಂಧಿಸಿದ ಒಂದು ಒಪ್ಪಂದಕ್ಕೆ ಇದೇ ಸಂದರ್ಭದಲ್ಲಿ ಸಹಿ ಮಾಡಲಾಯಿತು.
ಒಟ್ಟು ಒಂಭತ್ತು ಒಪ್ಪಂದಗಳಲ್ಲಿ ಕನಿಷ್ಠ ಏಳು ಒಪ್ಪಂದಗಳು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದೆ ಎನ್ನುವುದು ವಿಶೇಷ. ಇನ್ನು ರೂಪೆ ಸೇವೆಗಳ ಪರಿಚಯಿಸುವಿಕೆ, ಜಲವಿದ್ಯುತ್ ಪವರ್ ಪ್ಲಾಂಟ್ ಸಹಿತ ಒಟ್ಟು ಐದು ಯೋಜನೆಗಳಿಗೆ ಭೂತಾನ್ ಪ್ರಧಾನಿ ಸಮಕ್ಷಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ಚಾಲನೆ ನೀಡಿದರು. ಇನ್ನು ಪ್ರಮುಖ ಬೆಳವಣಿಗೆಯಲ್ಲಿ ಇಸ್ರೋ ಸ್ಥಾಪಿಸಲಾಗಿರುವ ದಕ್ಷಿಣ ಏಷ್ಯಾ ಉಪಗ್ರಹಗಳಿಗಾಗಿನ ಕೇಂದ್ರವೊಂದನ್ನು ಸಹ ಉದ್ಘಾಟಿಸಲಾಯಿತು.
ಇನ್ನು ಭೂತಾನ್ ದೇಶದ ಅಭಿವೃದ್ಧಿ ಉದ್ದೇಶಕ್ಕಾಗಿ ಭಾರತವು ತನ್ನ ಹನ್ನೆರಡನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ 5000 ಕೋಟಿ ರೂಪಾಯಿಗಳನ್ನು ಹಿಲಾಲಯದ ತಪ್ಪಲಲ್ಲಿ ಇರುವ ಈ ದೇಶಕ್ಕೆ ನೀಡುವ ಭರವಸೆಯನ್ನು ನೀಡಿತು. ಈ ಉದ್ದೇಶದಡಿಯಲ್ಲಿ ನೀಡಲಾಗುವ ಪ್ರಥಮ ಕಂತನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.