ಮುಸ್ಕಾನ್ ಹೆಸರಲ್ಲಿ ನೂರಾರು ನಕಲಿ ಖಾತೆ!
Team Udayavani, Feb 18, 2022, 6:58 AM IST
ನವದೆಹಲಿ: ಕರ್ನಾಟಕದಲ್ಲಿ ಹೊತ್ತಿ ಉರಿಯುತ್ತಿರುವ ಹಿಜಾಬ್ ಪ್ರತಿಭಟನೆಗಳ ದಳ್ಳುರಿಗೆ ನೆರೆರಾಷ್ಟ್ರ ಪಾಕಿಸ್ತಾನ ತುಪ್ಪ ಸುರಿಯುತ್ತಿದೆ ಎಂಬ ಆತಂಕಕಾರಿ ಮಾಹಿತಿಯೊಂದನ್ನು ಗುಪ್ತಚರ ಇಲಾಖೆ ಹೊರಹಾಕಿದೆ.
ಹಿಜಾಬ್ ವಿವಾದ ಆರಂಭವಾದ ಹೊಸತರಲ್ಲಿ ಮಂಡ್ಯದ ಕಾಲೇಜೊಂದರಲ್ಲಿ “ಅಲ್ಲಾಹು ಅಕºರ್’ ಎಂದು ಘೋಷಣೆ ಕೂಗುವ ಮೂಲಕ ರಾಷ್ಟ್ರವ್ಯಾಪಿ ಸುದ್ದಿಯಾದ ಮುಸ್ಕಾನ್ ಖಾನ್ ಎಂಬ ವಿದ್ಯಾರ್ಥಿನಿಯ ಹೆಸರಿನಲ್ಲಿ ನೂರಾರು ನಕಲಿ ಟ್ವಿಟರ್ ಖಾತೆಗಳನ್ನು ಪಾಕಿಸ್ತಾನದಲ್ಲಿ ಸೃಷ್ಟಿಸಲಾಗಿದೆ. ಆ ಖಾತೆಗಳ ಮೂಲಕ ಸಮುದಾಯಗಳನ್ನು ಒಡೆಯುವ ದ್ವೇಷದ ಸಂದೇಶಗಳನ್ನು ಪಸರಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಆಗ ಪಾಕಿಸ್ತಾನದಲ್ಲಿ, ಈಗ ಕರ್ನಾಟಕದಲ್ಲಿ! :
ಇಂಥದ್ದೊಂದು ನಕಲಿ ಟ್ವಿಟರ್ ಖಾತೆಯ ಜಾಡು ಪತ್ತೆ ಹಚ್ಚಿದಾಗ ಅದು ಕೆಲ ದಿನಗಳ ಹಿಂದೆ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗೆ ಅದು ಕರ್ನಾಟಕದಿಂದಲೇ ಕಾರ್ಯ ನಿರ್ವಹಿಸುತ್ತಿರುವುದು ತಿಳಿದುಬಂದಿದೆ. ಅಲ್ಲದೆ, ಈ ಖಾತೆ ಸೃಷ್ಟಿಯಾದ ಕೆಲವೇ ದಿನಗಳಲ್ಲಿ ಇದಕ್ಕೆ 5 ಸಾವಿರ ಫಾಲೋವರ್‌ಗಳು ಸೇರ್ಪಡೆಗೊಂಡಿದ್ದಾರೆ ಎಂದು ಹೇಳಲಾಗಿದೆ.
ಟ್ವೀಟ್‌ಗಳು ಡಿಲೀಟ್ :
ಮಸ್ಕಾನ್ ಹೆಸರಿನಲ್ಲಿರುವ ಮತ್ತೂಂದು ಟ್ವಿಟರ್‌ನ ನಕಲಿ ಖಾತೆಯಲ್ಲಿ, ಈ ಖಾತೆಯನ್ನು 2017ರ ಡಿಸೆಂಬರ್‌ನಿಂದಲೇ ಆರಂಭಿಸಲಾಗಿದೆ ಎಂದು ನಮೂದಿಸಲಾಗಿದೆ. ಈ ಖಾತೆಗೆ 37,000 ಫಾಲೋವರ್‌ಗಳು ಇದ್ದಾರೆ. ಕರ್ನಾಟಕದಲ್ಲಿ ಹಿಜಾಬ್ ವಿವಾದ ಭುಗಿಲೇಳುತ್ತಲೇ ಅದರಲ್ಲಿದ್ದ ಎಲ್ಲಾ ಟ್ವೀಟ್‌ಗಳನ್ನು ಡಿಲೀಟ್ ಮಾಡಲಾಗಿದೆ. ಇದು ಅನುಮಾನಗಳನ್ನು ಸೃಷ್ಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.