ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ: ವಿದೇಶಗಳಿಗೆ ಭಾರತದ ವಿದೇಶಾಂಗ ಇಲಾಖೆ ಸೂಚನೆ
Team Udayavani, Feb 13, 2022, 7:10 AM IST
ನವದೆಹಲಿ: ಹಿಜಾಬ್ ವಿವಾದವು ಭಾರತದ ಆಂತರಿಕ ವಿಚಾರವಾಗಿದ್ದು, ಬೇರೆ ರಾಷ್ಟ್ರಗಳು ಪ್ರೇರಿತ ಪ್ರತಿಕ್ರಿಯೆಗಳನ್ನು ಕೊಡುವುದು ಬೇಕಿಲ್ಲ. ಅದನ್ನು ನಾವು ಸ್ವಾಗತಿಸುವುದೂ ಇಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ. ಇಲ್ಲಿನ ಹಿಜಾಬ್ ವಿವಾದದ ವಿಚಾರವಾಗಿ ಪಾಕಿಸ್ತಾನ, ಅಮೆರಿಕದಂತಹ ರಾಷ್ಟ್ರಗಳು ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ಸಚಿವಾಲಯವು ಇಂಥ ಖಡಕ್ ಎಚ್ಚರಿಕೆ ನೀಡಿದೆ.
“ಕರ್ನಾಟಕದ ಶಾಲೆಯ ಸಮವಸ್ತ್ರದ ವಿಚಾರ ಹೈಕೋರ್ಟ್‌ನಲ್ಲಿದೆ. ನಮ್ಮ ಸಾಂವಿಧಾನಿಕ ಚೌಕಟ್ಟಿನ ಒಳಗಿರುವ ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ಭಾರತದ ಬಗ್ಗೆ ತಿಳಿದುಕೊಂಡವರು ಈ ವಾಸ್ತವದ ಬಗ್ಗೆಯೂ ಸರಿಯಾಗಿ ತಿಳಿದಿರುತ್ತಾರೆ ಎಂದು ಭಾವಿಸುತ್ತೇವೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ.
ಸುಪ್ರೀಂಗೆ ಪಿಐಎಲ್:
ಹಿಜಾಬ್ ವಿವಾದದ ಬೆನ್ನಲ್ಲೇ ದೇಶಾದ್ಯಂತ ಸಮಾನ ವಸ್ತ್ರಸಂಹಿತೆ ಜಾರಿಗೊಳಿಸುವಂತೆ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಸೂಚಿಸಬೇಕೆಂದು ಕೋರಿ ಶನಿವಾರ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮೌಲ್ಯಗಳನ್ನು ಹೆಚ್ಚಿಸಿ, ದೇಶದ ಏಕತೆ ಕಾಪಾಡಲು ತಜ್ಞರ ಸಮಿತಿ ಅಥವಾ ನ್ಯಾಯಾಂಗ ಸಮಿತಿ ರಚಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ. ನಿಖೀಲ್ ಉಪಾಧ್ಯಾಯ ಎಂಬವರು ಈ ಪಿಐಎಲ್ ಸಲ್ಲಿಸಿದ್ದಾರೆ.
ಪ್ರತಿ ಸಂಘಟನೆ ತಮ್ಮದೇ ಆದ ಡ್ರೆಸ್ ಕೋಡ್ ಅನುಷ್ಠಾನ ಮಾಡಿಕೊಳ್ಳಬಹುದು. ಆದರೆ ಸರ್ಕಾರಿ ವ್ಯವಸ್ಥೆಯಲ್ಲಿ ಸಂವಿಧಾನ ನಡೆಯುತ್ತದೆಯೇ ಹೊರತು ಶರಿಯಾ ನಿಯಮವಲ್ಲ. – ಯೋಗಿ ಆದಿತ್ಯನಾಥ, ಉ.ಪ್ರದೇಶ ಸಿಎಂ
ಭಾರತದ ಹೆಣ್ಣು ಮಕ್ಕಳ ಘನತೆಯೊಂದಿಗೆ ಆಟವಾಡಲು ಹೊರಟರೆ, ಹೆಣ್ಣು ಮಕ್ಕಳೆಲ್ಲರೂ ಝಾನ್ಸಿ ರಾಣಿ, ರಜಿಯಾ ಸುಲ್ತಾನರಾಗಿ ಬದಲಾಗಿ, ಹಿಜಾಬ್‌ಗ ಕೈ ಹಾಕುವ ಕೈಯನ್ನು ಕತ್ತರಿಸುತ್ತಾರೆ. ಹಿಜಾಬ್ ಭಾರತ ಸಂಸ್ಕೃತಿಯ ಅವಿಭಾಜ್ಯ ಅಂಗ. –ರುಬೀನಾ ಖಾನಂ, ಎಸ್‌ಪಿ ನಾಯಕಿ
ಬುರ್ಖಾವು ಕರಾಳ ಯುಗದ ಚಾಸ್ಟಿಟಿ ಬೆಲ್ಟ್(ಲೈಂಗಿಕ ಕ್ರಿಯೆ ನಡೆಸದಂತೆ ತಡೆಯಲು ಇರುವ ಸಾಧನ) ಇದ್ದಂತೆ. ಎಲ್ಲ ಘರ್ಷಣೆ ಅಂತ್ಯಗೊಳಿಸುವುದಕ್ಕೆ ಸಮವಸ್ತ್ರ ಅವಶ್ಯಕ. ಧರ್ಮದ ಹಕ್ಕು ಶಿಕ್ಷಣದ ಹಕ್ಕಿಗಿಂತ ದೊಡ್ಡದಲ್ಲ. –ತಸ್ಲೀಮಾ ನಸ್ರೀನ್, ಬಾಂಗ್ಲಾದೇಶದ ಲೇಖಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.