Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Team Udayavani, Nov 9, 2024, 6:54 AM IST
ಚಂಡೀಗಢ: ಹಿಮಾಚಲ ಪ್ರದೇಶದಲ್ಲಿ “ಸಮೋಸಾ’ ವಿವಾದ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಸುಖ್ವಿಂದರ್ ಸುಖು ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಮೋಸಾ ಕಾಣೆಯಾಗಿದ್ದು, ಅದರ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಲಾಗಿದೆ ಎಂಬ ವಿಚಾರ ವಿವಾದವೆಬ್ಬಿಸಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಂ ಸುಖು ಯಾವುದೇ ತನಿಖೆಗೆ ಆದೇಶಿಸಿಲ್ಲ. ಸಮೋಸಾವನ್ನು ಅಲ್ಲಿದ್ದ ಪೊಲೀಸ್ ಸಿಬಂದಿಗೆ ಹಂಚಲಾಗಿತ್ತು ಎಂದಿದ್ದಾರೆ. ಸಿಐಡಿ ಮುಖ್ಯಸ್ಥ ಸಂಜೀವ್ ರಂಜನ್ ಓಜಾ ಸಹ ಮಾತನಾಡಿದ್ದು, “ಇದು ಸಂಪೂರ್ಣವಾಗಿ ಸಿಐಡಿಯ ಆಂತರಿಕ ವಿಷಯ. ಈ ಸಂಬಂಧ ನಾವು ನೋಟಿಸ್ ನೀಡಿಲ್ಲ. ಈ ವಿಷಯ ಹೇಗೆ ಸೋರಿಕೆಯಾಯಿತು ಎಂಬುದೇ ತಿಳಿಯುತ್ತಿಲ್ಲ’ ಎಂದು ಹೇಳಿದ್ದಾರೆ. ಬಿಜೆಪಿ ರಾಜ್ಯ ಸರಕಾರವನ್ನು ಟೀಕಿಸಿದ್ದು, ನಗೆಪಾಟಲಿಗೀಡಾಗಿದೆ ಎಂದಿದೆ.
ಆಗಿದ್ದೇನು?: ಅ.21ರಂದು ಸಿಐಡಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸುಖು ಭಾಗಿಯಾ ಗಿದ್ದರು. ಈ ಸಮಯದಲ್ಲಿ ಎಲ್ಲರಿಗೂ ಹಂಚಲು ತರಲಾಗಿದ್ದ ಸಮೋಸಾ ಬಾಕ್ಸ್ ಕಾಣೆಯಾಗಿತ್ತು. ಏಕೆ ಹೀಗಾಯಿತು ಎಂಬುದರ ಬಗ್ಗೆ ರಾಜ್ಯ ಸರಕಾರ ಸಿಐಡಿ ತನಿಖೆಗೆ ಆದೇಶಿಸಿದೆ ಎಂಬ ವಿಷಯ ಭಾರೀ ವಿವಾದ ಸೃಷ್ಟಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.