ದೇಶದ ಮಣ್ಣಿನಲ್ಲಿ ಹಿಂದುತ್ವದ DNA ಇದೆ:ಸ್ವಾಮಿ
Team Udayavani, Nov 14, 2017, 12:28 PM IST
ನಾಸಿಕ್: ಹಿಂದೂಸ್ಥಾನ ಹಿಂದೂ ರಾಷ್ಟ್ರ ವಾಗಿದ್ದು, ಈ ದೇಶದ ಮಣ್ಣಿನಲ್ಲಿ ಹಿಂದುತ್ವದ ಡಿಎನ್‌ಎ ಇದೆ ಎಂದು ಇಲ್ಲಿ ಬಿಜೆಪಿಯ ಹಿರಿಯ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು ಹೇಳಿದ್ದಾರೆ.
ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಮುಸಲ್ಮಾನರು ಸಹಕರಿಸಬೇಕೇ ಹೊರತೂ ಅದಕ್ಕೆ ಅಡ್ಡಿಪಡಿಸಬಾರದು ಎಂದು ಕರೆ ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿಯ ಎಲ್ಲ ಸದಸ್ಯರಿಗೆ ತಿಹಾರ್ ಜೈಲಿನ ಪ್ರವಾಸವನ್ನು ಮಾಡಿಸಲಾಗುವುದು ಎಂದೂ ಅವರು ಈ ಸಂದರ್ಭದಲ್ಲಿ ಅಣಕವಾಡಿದ್ದಾರೆ.
ಸ್ವಾಮಿ ಅವರು ನಾಸಿಕ್‌ನ ಶ್ರೀ ರಾಧಾ ಮದನ್ ಗೋಪಾಲ ಇಸ್ಕಾನ್ ದೇವಾಲಯದಲ್ಲಿ ಭಗವದ್ಗೀತಾ ಪ್ರಜ್ಞಾಶೋಧ್ ಪರೀಕ್ಷಾ ಪುರಸ್ಕಾರ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಶಾಸಕ ದೇವಯಾನಿ ಫರಾಂದೆ, ಮಂದಿರದ ವಿಶ್ವಶ§ ಶಿಕ್ಷಾಷ್ಟಕಮ್ ಪ್ರಭು ಅವರು ಉಪಸ್ಥಿತರಿದ್ದರು.
ಹಿಂದಿಯಲ್ಲಿ ತಮ್ಮ ಭಾಷಣವನ್ನು ಆರಂಭಿಸಿದ ಸುಬ್ರಹ್ಮಣ್ಯನ್ ಸ್ವಾಮಿ ಅವರು ಅಯೋಧ್ಯೆ ಸೇರಿದಂತೆ ಮಥುರಾ ಮತ್ತು ವಾರಾಣಸಿಯಲ್ಲಿ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶೀಘ್ರ ಹೈಕೋರ್ಟ್ ತನ್ನ
ತೀರ್ಪು ಪ್ರಕಟಿಸಲಿದೆ. ಈ ಕೆಲಸದಲ್ಲಿ ಮುಸ್ಲಿಮರು ಕೂಡ ಸಹಕರಿಸ ಬೇಕು ಹಾಗೂ ಮಂದಿರ ನಿರ್ಮಾಣದ ಹಾದಿಯನ್ನು ಸುಗಮಗೊಳಿಸಬೇಕು ಎಂದರು.
ಮೊಘಲರು ಸುಮಾರು 750 ವರ್ಷಗಳಿಗೂ ಹೆಚ್ಚು ಕಾಲ ದೇಶದಲ್ಲಿ ಆಳ್ವಿಕೆ ನಡೆಸಿದ್ದರು. ಇದರ ಹೊರತಾಗಿಯೂ ದೇಶದಲ್ಲಿ ಹಿಂದೂ ಧರ್ಮದ ಅಸ್ತಿತ್ವವು ದೃಢವಾಗಿ ನಿಂತಿದ್ದು, ಛತ್ರಪತಿ ಶಿವಾಜಿ ಮಹಾರಾಜರಿಂದ ಹಿಡಿದು ರಾಜಸ್ಥಾನದ ಮಹಾರಾಣಾ ಪ್ರತಾಪ್ ಅವರಂಥ ವಿವಿಧ ಯೋಧರ ಮೂಲಕ ಮಾಡಲಾದ ಯುದ್ಧಗಳು ಇದಕ್ಕೆ ಏಕಮಾತ್ರ ಕಾರಣವಾಗಿದೆ ಎಂದವರು ಹೇಳಿದರು.
ಹಿಂದೂ ಭಯೋತ್ಪಾದನೆ ಸೃಷ್ಟಿಯಾಗಲು ಸಾಧ್ಯವೇ ಇಲ್ಲ. ಯಾಕೆಂದರೆ, ಈ ಧರ್ಮದ ಧರ್ಮಗ್ರಂಥ ಭಗವದ್ದೀತೆ ಆಗಿದ್ದು, ಗೀತೆಯು ಭಯೋತ್ಪಾದನೆಯನ್ನು ಕಲಿಸುವುದಿಲ್ಲ. ಆದರೆ, ನಿಜವಾದ ಹಿಂದೂ ಭಯೋತ್ಪಾದನೆ ಏನೆಂಬುದು, ಚಿದಂಬರಂ ಜೈಲಿಗೆ ಹೋದ ಬಳಿಕ ಅನುಭವವಾಗಲಿದೆ ಎಂದು ಅವರು ಕಿಡಿಕಾರಿದರು.
ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿಯ ಎಲ್ಲಾ ಸದಸ್ಯರಿಗೆ ತಿಹಾರ್ ಜೈಲಿನ ಪ್ರವಾಸವನ್ನು ಮಾಡಿಸಲಾಗುವುದು. ಪಿ. ಚಿದಂಬರಂಗೆ ಹಿಂದೂ ಭಯೋತ್ಪಾದನೆ ಹೇಳಲು ಹಕ್ಕಿಲ್ಲ. ನಾನು ಧರ್ಮ-ಸಂಸ್ಕೃತಿಯ ರಕ್ಷಕನಾಗಿದ್ದೇನೆ ಮತ್ತು ಸತ್ಯವನ್ನು ಹೇಳುತ್ತೇನೆ. ದೇಶದಲ್ಲಿರುವ ಎಲ್ಲಾ ಭ್ರಷ್ಟಾಚಾರಿಗಳು ಹಾಗೂ ಜಾತ್ಯತೀತರಿಗೆ ಜೈಲಿನಲ್ಲಿ ವ್ಯವಸ್ಥೆ ಮಾಡಬೇಕಾದ ಆವಶ್ಯಕತೆಯಿದೆ ಎಂದು ಸ್ವಾಮಿ ಅವರು ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ… ಮುಂದಿನ ಸಿಎಂ ಯಾರು?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.