ಜಾರ್ಖಂಡ್‌ನ‌ಲ್ಲಿ ಲವ್‌-ಜಿಹಾದ್‌: ಹಿಂದೂ ಮಹಿಳೆಯ ರೇಪ್‌, ಕೊಲೆ

Team Udayavani, Dec 29, 2017, 11:59 AM IST

Rape woman graphic-700.jpg

ರಾಂಚಿ : ಮುಸ್ಲಿಂ ಪುರುಷನನ್ನು ವಿವಾಹದ ಹಿಂದೂ ಮಹಿಳೆಯೊಬ್ಬಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಕಾರಣ ಆಕೆಯ ಮಾವ ಮತ್ತು ಆತನ ಸಹೋದರ ಜತೆಗೂಡಿ ಆಕೆಯ ಮೇಲೆ ಗ್ಯಾಂಗ್‌ ರೇಪ್‌ ನಡೆಸಿ ಆಕೆಯನ್ನು ಕೊಂದು ಹಾಕಿದ ಆಘಾತಕಾರಿ ಮತ್ತು ಅಮಾನವೀಯ ಘಟನೆ ಜಾರ್ಖಂಡ್‌ನ‌ ರಾಮಗಢ ಜಿಲ್ಲೆಯಿಂದ ವರದಿಯಾಗಿದೆ.

ಹಿಂದೂ ಮಹಿಳೆಯನ್ನು ರೇಪ್‌ ಮಾಡಿ ಕೊಂದ ಘಟನೆಯು ತಿಂಗಳ ಹಿಂದೆ ನಡೆದಿತ್ತು. ಕಳೆದ ನವೆಂಬರ್‌ 6ರಿಂದ ನಾಪತ್ತೆಯಾಗಿದ್ದ ಈ ಮಹಿಳೆಯ ಶವವು ಹಗ್ಗದಿಂದ ಕೈ ಕಾಲು ಬಿಗಿಯಲ್ಪಟ್ಟ ಸ್ಥಿತಿಯಲ್ಲಿ ಗರ್ನಾ ನದೀ ಕಿನಾರೆಯಲ್ಲಿ ಕಂಡು ಬಂದಾಗಲೇ ಆಕೆಯ ಅತ್ಯಾಚಾರ, ಕೊಲೆ ಬಯಲಾಯಿತು. ಮಹಿಳೆಯ ಶವದ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದು ಬಳಿಕ ಆಕೆಯನ್ನು ಕೊಂದಿರುವ ಸಂಗತಿ ಸಾಬೀತಾಯಿತು. 

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕ್ಷಿಪ್ರಗತಿಯಿಂದ ಕಾರ್ಯೋನ್ಮುಖರಾದ ಪೊಲೀಸರು ಮೊತ್ತ ಮೊದಲಾಗಿ ಆಕೆಯ ಮುಸ್ಲಿಂ ಪತಿ ಆದಿಲ್‌ನನ್ನು ಬಂಧಿಸಿದರು. ತನಿಖೆಯ ವೇಳೆ ಈತ ಹಲವು ಆಘಾತಕಾರಿ ಸಂಗತಿಗಳ ಬಗ್ಗೆ ಬಾಯಿ ಬಿಟ್ಟಾಗಲೇ ಮಹಿಳೆ ಅನುಭವಿಸಿದ್ದ ನರಕ ಯಾತನೆಗಳು ಬೆಳಕಿಗೆ ಬಂದವು. 

ಪೊಲೀಸರ ಪ್ರಕಾರ ಅತ್ಯಾಚಾರ, ಕೊಲೇಗೀಡಾದ ಹಿಂದೂ ಮಹಿಳೆಯು ತನ್ನ ಹಾಗೂ ತನ್ನ ಪ್ರಿಯಕರ ಆದಿಲ್‌ ನ ಹೆತ್ತವರ ವಿರೋಧವನ್ನು ಲೆಕ್ಕಿಸದೆ ಕಳೆದ ತಿಂಗಳಲ್ಲಿ ಆದಿಲ್‌ನನ್ನು  ಮದುವೆಯಾಗಿದ್ದಳು. ಮದುವೆಯ ಬಳಿಕ ನೂತನ ದಂಪತಿ ಬೊಕಾರೋದಲ್ಲಿನ ಆದಿಲ್‌ನ ಚಿಕ್ಕಪ್ಪನ ಮನೆಗೆ ಹೋಗಿದ್ದರು. ಆಗ ಆ ಚಿಕ್ಕಪ್ಪ ಆದಿಲ್‌ನ ತಂದೆಗೆ ಫೋನ್‌ ಮಾಡಿ ವಿಷಯ ತಿಳಿಸಿ ಬೊಕಾರೋಗೆ ಆತನನ್ನು  ಬರಮಾಡಿಸಿಕೊಂಡಿದ್ದ. 

ಆದಿಲ್‌ ನ ಚಿಕ್ಕಪ್ಪ ಮತ್ತು ತಂದೆ ಸೇರಿ ಹುಡುಗಿಯನ್ನು ಇಸ್ಲಾಂ ಗೆ ಮತಾಂತರವಾಗುವಂತೆ ಬಲವಂತ ಪಡಿಸಿದರು. ಆದಕ್ಕೆ ಒಪ್ಪದಿದ್ದ ಆಕೆಯನ್ನುಆದಿಲ್‌ ಸಹಿತವಾಗಿ, ಮುಂದಿನ ಜೀವನ ನಡೆಸಲು, ರಾಂಚಿಗೆ ಕಳುಹಿಸಿಕೊಡಲು ತೀರ್ಮಾನಿಸಿದರು. ಅಂತೆಯೇ ಅವರನ್ನು ಕಾರಿನಲ್ಲಿ ಒಯ್ದ  ತಂದೆ – ಚಿಕ್ಕಪ್ಪ ಮಾರ್ಗ ಬದಲಾಯಿಸಿ ನಿರ್ಜನ ಅರಣ್ಯ ಪ್ರದೇಶಕ್ಕೆ ಒಯ್ದರು. ಅಲ್ಲಿ ಅವರು ಮೊದಲು ಆದಿಲ್‌ ಮೇಲೆ ಹಲ್ಲೆ ನಡೆಸಿ ಆತನನ್ನು ಹಗ್ಗದಿಂದ ಕಟ್ಟಿ ಹಾಕಿ ಆತನ ಸಮ್ಮುಖದಲ್ಲೇ ಹುಡುಗಿಯ ಮೇಲೆ ಸರದಿ ಪ್ರಕಾರ ಗ್ಯಾಂಗ್‌ ರೇಪ್‌ ನಡೆಸಿ, ಬಳಿಕ ಆಕೆಯನ್ನು  ಕೊಂದು ಅರಣ್ಯದಲ್ಲಿ  ಗಿಡಗಂಟಿಗಳ ನಡುವೆ ಶವವನ್ನು ಬಿಸುಟು ಹೋದರು. 

ಈ ಇಡಿಯ ಪ್ರಕರಣ ಪೊಲೀಸ್‌ ತನಿಖೆಯಲ್ಲಿ ಬಹಿರಂಗವಾದಾಗ ಅನೇಕ ಹಿಂದೂ ಸಂಘಟನೆಗಳು ಇದೊಂದು ಲವ್‌ ಜಿಹಾದ್‌ ಎಂದು ಭಾರೀ ಪ್ರತಿಭಟನೆ ನಡೆಸಿದವು. ಪ್ರಕರಣದ ಬಗ್ಗೆ ಪೊಲೀಸ್‌ ತನಿಖೆ ನಡೆಯುತ್ತಿದೆ. ಅತ್ಯಾಚಾರ, ಕೊಲೆ ಆರೋಪಿಗಳಾಗಿರುವ ಆದಿಲ್‌ನ ಅಪ್ಪ – ಚಿಕ್ಕಪ್ಪನನ್ನು ಪೊಲೀಸರು ಇನ್ನಷ್ಟೆ ಬಂಧಿಸಬೇಕಾಗಿದೆ.

ಟಾಪ್ ನ್ಯೂಸ್

Air-Delhi

Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ‌ ಇಚ್ಛಾಶಕ್ತಿ ಪ್ರದರ್ಶಿಸಲಿ

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Supreme Court: ಸರ್ಕಾರಿ ನೇಮಕ ಪ್ರಕ್ರಿಯೆ ನಡುವೆ ನಿಯಮ ಬದಲು ಸಲ್ಲದು

Supreme Court: ಸರ್ಕಾರಿ ನೇಮಕ ಪ್ರಕ್ರಿಯೆ ನಡುವೆ ನಿಯಮ ಬದಲು ಸಲ್ಲದು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Air-Delhi

Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ‌ ಇಚ್ಛಾಶಕ್ತಿ ಪ್ರದರ್ಶಿಸಲಿ

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.